ಜವಾಬ್ದಾರಿ ಹೆಚ್ಚಳ: ಜಯಲಕ್ಷಿö್ಮ
ಜಿಲ್ಲಾಡಳಿತ ಕೊಡಗು ಜಿಲ್ಲಾ ಪಂಚಾಯಿತಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಕರ್ನಾಟಕ ರಾಜ್ಯ ಶಿಕ್ಷಕರ ಕಲ್ಯಾಣ ನಿಧಿ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಶಿಕ್ಷಕರ ದಿನಾಚರಣೆ ೨೦೨೨-೨೩ನೇ ಸಾಲಿನಲ್ಲಿ ಕೊಡಗು ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ನನಗೆ ಸಿಕ್ಕಿರುವುದು ಅತ್ಯಂತ್ ಸಂತೋಷ ತಂದಿದೆ. ಇಂತಹ ಪ್ರಶಸ್ತಿಗಳು ನಮ್ಮ ಕರ್ತವ್ಯಕ್ಕೆ ಪ್ರೋತ್ಸಾಹವನ್ನು ನೀಡುವುದರ ಜೊತೆಗೆ ಜವಾಬ್ದಾರಿಗಳನ್ನು ಕೂಡಾ ಹೆಚ್ಚಿಸುತ್ತದೆ.
ವಿವಿಧ ಶಾಲೆಗಳಲ್ಲಿ ನಾನು ಸಹ ಶಿಕ್ಷಕಿಯಾಗಿಯೂ ಪ್ರಭಾರ ಮುಖ್ಯ ಶಿಕ್ಷಕಿಯಾಗಿಯೂ ಒಟ್ಟು ೨೪ ವರ್ಷಗಳ ಸೇವೆ ಸಲ್ಲಿಸಿದ್ದು ಇದೀಗ ಏಳು ವರ್ಷಗಳಿಂದ ಮುಖ್ಯ ಶಿಕ್ಷಕಿಯಾಗಿ ಸ.ಹಿ.ಪ್ರಾ. ಶಾಲೆ, ಬಿ. ಚೂರಿಕಾಡುವಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದೇನೆ. ೨೦೧೮-೨೦೧೯ನೇ ಸಾಲಿನಲ್ಲಿ ಈ ಶಾಲೆಗೆ ಹಸಿರು ಶಾಲಾ ಪ್ರಶಸ್ತಿ ಬಂದಿರುತ್ತದೆ. ಮುಂದಿನ ನನ್ನ ಸೇವಾವಧಿಯಲ್ಲಿ ಶಾಲಾ ದಾಖಲಾತಿ ಹೆಚ್ಚಳ ಮಾಡುವುದು ವಿದ್ಯಾರ್ಥಿಗಳ ಹಾಜರಾತಿಗಾಗಿ ಆದ್ಯತೆ ನೀಡುವುದು ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗಾಗಿ ಹಾಗೂ ಭೌತಿಕ ಪರಿಸರದ ಅಭಿವೃದ್ಧಿಗಾಗಿ ಶ್ರಮ ವಹಿಸುವುದು. ವಿದ್ಯಾರ್ಥಿಗಳ ಪಠ್ಯೇತರ ಚಟುವಟಿಕೆಗಳಿಗಾಗಿ ಪ್ರೋತ್ಸಾಹ ನೀಡುತ್ತಾ ಮಾದರಿ ಶಾಲೆಯನ್ನಾಗಿಸುವುದೇ ನನ್ನ ಧ್ಯೇಯವಾಗಿರುತ್ತದೆ. ಹೀಗೆನ್ನುತ್ತಾರೆ ಬಿ. ಚೂರಿಕಾಡುವಿನ ಸ.ಹಿ.ಪ್ರಾ. ಶಾಲೆಯ ಮುಖ್ಯ ಶಿಕ್ಷಕಿ ಬಿ.ಕೆ. ಜಯಲಕ್ಷಿö್ಮ ಅವರು.
ನಿವೃತ್ತಿ ನಂತರವೂ ಸೇವೆ : ಭಾರತಿ
ತುಂಬಾ ಸಂತೋಷವಾಯಿತು. ನಾನು ೧೯೮೨ ರಲ್ಲಿ ಸರ್ಕಾರಿ ಕೆಲಸ ಸಿಗದಿದ್ದಾಗ ಖಾಸಗಿಯಾಗಿ ಕೆಲಸ ಮಾಡುತ್ತಿದ್ದೇನೆ. ಖಾಸಗಿ ಶಾಲೆಯಲ್ಲಿ ಕೆಲಸ ನಿರ್ವಹಿಸುವುದು ಸುಲಭ. ಪೋಷಕರು ವಿದ್ಯಾವಂತರಾಗಿರುತ್ತಾರೆ. ಮೊದಲು ಅಯ್ಯಂಗೇರಿಯಲ್ಲಿ ಅಲ್ಪಸಂಖ್ಯಾAತರು ಹೆಚ್ಚಾಗಿರುವ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುವ ಸಂದರ್ಭದಲ್ಲಿ ಇಂಗೀಷ್, ಗಣಿತಕ್ಕೆ ಪೋಷಕರು ಒತ್ತು ಕೊಡುತ್ತಿದ್ದರೂ ಮಕ್ಕಳ ಮನ ಮುಟ್ಟುವಂತಹ ಪಾಠ ಪ್ರವಚನವನ್ನು ಮಾಡಿ ಅಲ್ಲಿ ಪೋಷಕರು ನನ್ನನ್ನು ಗುರುತಿಸಿದರು. ಇದೇ ನನಗೆ ಸಿಗುವ ಪ್ರಶಸ್ತಿ ಎಂದು ನಾನು ಆಗ ಸಂತೋಷಪಡುತ್ತಿದ್ದೆ. ಎಲ್ಲಾ ಶಿಕ್ಷಕರು ಹೀಗೆಯೇ ಭಾವಿಸುತ್ತಾರೆ. ೨೦೧೭ರಲ್ಲಿ ಕಿರಿಯ ಪ್ರಾಥಮಿಕ ಶಾಲೆಗಳಿಗೆ ರಾಜ್ಯ ಪ್ರಶಸ್ತಿಗೆ ಪ್ರಾರಂಭವಾದಾಗ ಅರ್ಜಿ ಹಾಕುವಂತೆ ಕಚೇರಿಯಿಂದ ಸಿ.ಆರ್.ಪಿ. ಮುಖಾಂತರ ಹೇಳಿ ಕಳುಹಿಸಿದರು. ಆಗಲೂ ಕೂಡ ಗುರುತಿಸಿದಕ್ಕೆ ಪ್ರಶಸ್ತಿ ಸಿಕ್ಕಷ್ಟು ಸಂತೋಷ ಪಟ್ಟೆ. ನಾನು ಶಾಲೆಯಲ್ಲಿ ಪಾಠದ ಜೊತೆ ಬಡ ವಿದ್ಯಾರ್ಥಿಗಳ ಪ್ರತಿ ದಾಖಲಾತಿಗಳನ್ನು ಮಾಡಿ ಅವರ ಭವಿಷ್ಯ ರೂಪಿಸಿ ಕೊಟ್ಟಿರುತ್ತೇನೆ. ಇದನ್ನೆಲ್ಲಾ ಊರಿನವರು, ಪೋಷಕರು, ವಿದ್ಯಾರ್ಥಿಗಳು ನನ್ನನ್ನು ಗುರುತಿಸಿದ್ದಾರೆ. ನಾನು ೨೦೨೩ ಏಪ್ರಿಲ್‌ನಲ್ಲಿ ನಿವೃತ್ತಿ ಹೊಂದಿದರೂ ಸಹ ಈಗ ನಮ್ಮ ಶಾಲೆಯಲ್ಲಿ ಉಳಿದಿರುವ ತಾಯಿಯಿಲ್ಲದ ಎಸ್.ಟಿ. ಜೇನು ಕುರುಬ ವಿದ್ಯಾರ್ಥಿಗಳಿಗೆ ದಾಖಲಾತಿಯನ್ನು ಮಾಡಿಸಿ, ಹಾಸ್ಟೆಲಿಗೆ ಸೇರಿಸಿ ಉತ್ತಮ ಭವಿಷ್ಯ ರೂಪಿಕೊಡಬೇಕೆಂದು ಭಾವಿಸಿದ್ದೇನೆ. ಈ ಶಾಲೆಯಲ್ಲಿ ಎಲ್ಲಾ ವಿದ್ಯಾರ್ಥಿಗಳಿಗೆ ಸೂಕ್ತ ದಾಖಲಾತಿಗಳನ್ನು ಮಾಡಿಸಿ ವಿದ್ಯಾರ್ಥಿ ವೇತನ ಮತ್ತು ಹಾಸ್ಟೆಲ್ ವ್ಯವಸ್ಥೆ ಮಾಡಿಸಿದ್ದೇನೆ. ಪ್ರತಿ ವರ್ಷ ಗಿಡ ನೆಟ್ಟು ಪರಿಸರ ದಿನಾಚರಣೆ ಮಾಡಿದ್ದೇನೆ. ಮುಂದಿನ ವರ್ಷವೂ ಮಾಡುವಂತೆ ಎಸ್.ಡಿ.ಎಂ.ಸಿ. ಪೋಷಕರಲ್ಲಿ ಮನವಿ ಮಾಡಿದ್ದೇನೆ ಎಂದು ಕೈಕಾಡ ಸರಕಾರಿ ಪ್ರಾಥಮಿಕ ಶಾಲಾ ಶಿಕ್ಷಕಿ ಭಾರತಿ ತಮ್ಮ ಮನದಂಗಿತ ವ್ಯಕ್ತಪಡಿಸಿದರು.
ಹಲವು ಚಿಂತನೆಗಳಿವೆ: ಉದಯಕುಮಾರ್
೨೦೦೦ ರಿಂದ ೨೦೦೭ ರವರೆಗೆ ೪ ವರ್ಷಗಳ ಕಾಲ ಬೇಸಿಗೆ ರಜಾ ಅವಧಿಯಲ್ಲಿ ಶಾಲಾ ಬಿಟ್ಟ ಮಕ್ಕಳಿಗೆ ಚಿಣ್ಣರ ಅಂಗಳ ಕಾರ್ಯಕ್ರಮ ಮಾಡಿ ೧೦೩ ವಿದ್ಯಾರ್ಥಿಗಳನ್ನು ಶಾಲೆಗೆ ದಾಖಲು ಮಾಡಲಾಗಿದೆ, ರಾಜ್ಯ ಸಂಪನ್ಮೂಲ ವ್ಯಕ್ತಿಯಾಗಿ ಹಾಗೂ ನಲಿಕಲಿ, ಗುರು ಚೇತನ ತರಬೇತಿಯಲ್ಲಿ ಸೇವೆ ಸಲ್ಲಿಸಲಾಗಿದೆ. ಶಾಲೆಯಲ್ಲಿ ದಾಖಲಾತಿ ಮತ್ತು ಹಾಜರಾತಿಯನ್ನು ಉತ್ತಮಪಡಿಸುವುದು ಹಾಗೂ ಗುಣಾತ್ಮಕ ಶಿಕ್ಷಣವನ್ನು ನೀಡುವುದು ಶಾಲೆಯನ್ನು ಆಕರ್ಷಣೆಯವಾಗಿ ಮಾಡುವುದು, ಸ್ಥಳೀಯ ದಾನಿಗಳ ನೆರವಿನಿಂದ ಕಟ್ಟದ ದುರಸ್ತಿ, ಸುಣ್ಣ-ಬಣ್ಣ ಹಾಗೂ ಗೋಡೆ ಬರಹ ಬರೆಸಿರುವುದು ಅಗತ್ಯ ಪಿಠೋಪಕರಣಗಳನ್ನು ಕೊಡುಗೆಯಾಗಿ ಪಡೆದಿರುವುದು. ತಮ್ಮ ಅಭಿಲಾಷೆಯಾಗಿದೆ.
ಈ ಸಾಧನೆಗೆ ಇಲಾಖಾ ಮೇಲಾಧಿಕಾರಿಯವರು ಮುಖ್ಯ ಶಿಕ್ಷಕರು ಹಾಗೂ ಸಹ ಶಿಕ್ಷಕರು, ಸಂಘದ ಪದಾಧಿಕಾರಿಗಳ ಪ್ರೇರಣೆ, ಸಹಕಾರ, ಮಾರ್ಗದರ್ಶನದಿಂದ ಈ ಯಶಸ್ವಿಗೆ ಕಾರಣವಾಗಿದೆ ಎಂದು ಅಂಜನಗೇರಿ ಬೆಟ್ಟಗೇರಿ ಸ.ಕಿ.ಪ್ರಾ. ಶಾಲಾ ಶಿಕ್ಷಕರಾಗಿರುವ ಉದಯಕುಮಾರ್ ಕೆ.ಎಲ್. ಅನಿಸಿಕೆ ವ್ಯಕ್ತಪಡಿಸಿದ್ದಾರೆ.
ಗರಿಯಲ್ಲ... ಜವಾಬ್ದಾರಿ: ಪದ್ಮ
ಪ್ರಶಸ್ತಿಯೆಂಬುದು ಗರಿಯಲ್ಲ, ಜವಾಬ್ದಾರಿ ಎಂಬುದು ನನ್ನ ಅನಿಸಿಕೆ. ಈ ಪ್ರಶಸ್ತಿಯನ್ನು ನಾನು ಪಡೆದಿದ್ದರೂ ಇದಕ್ಕೆ ಕಾರಣಕರ್ತರು ಅನೇಕರಿದ್ದಾರೆ. ಅದರಲ್ಲಿ ಮುಖ್ಯ ವಾಗಿ ನಮ್ಮ ಶಿಕ್ಷಣ ಇಲಾಖೆ, ಶಾಲಾ ವಿದ್ಯಾರ್ಥಿಗಳು, ಪೋಷಕರು, ಬೈರಂಬಾಡ ಗ್ರಾಮದ ಸಂಘ ಸಂಸ್ಥೆಗಳು, ಸಮುದಾಯ, ಸ್ಥಳೀಯ ಗ್ರಾಮ ಪಂಚಾಯಿತಿ, ವಿಶೇಷವಾಗಿ ಶಾಲೆಯ ಏಳಿಗೆಗಾಗಿ ಸಹಕರಿಸುತ್ತಿರುವ ದಾನಿಗಳು, ಜೊತೆಗೆ ನನ್ನ ಕುಟುಂಬ ಇವರೆಲ್ಲಾರನ್ನು ಸ್ಮರಿಸುವುದು ಕರ್ತವ್ಯವಾಗಿದೆ. ಜಿಲ್ಲಾಮಟ್ಟದ ಈ ಪ್ರಶಸ್ತಿ ನನಗೆ ಹೆಮ್ಮೆ ತಂದು ಕೊಟ್ಟರೂ ಅದಕ್ಕಿಂತ ಮಿಗಿಲಾಗಿ ಹೆಚ್ಚಿನ ಜವಾಬ್ದಾರಿಯನ್ನು ತಂದುಕೊಟ್ಟಿದೆ.
ನನ್ನನ್ನು ಗುರುತಿಸಿದ್ದಾರೆ. ನಾನು ೨೦೨೩ ಏಪ್ರಿಲ್‌ನಲ್ಲಿ ನಿವೃತ್ತಿ ಹೊಂದಿದರೂ ಸಹ ಈಗ ನಮ್ಮ ಶಾಲೆಯಲ್ಲಿ ಉಳಿದಿರುವ ತಾಯಿಯಿಲ್ಲದ ಎಸ್.ಟಿ. ಜೇನು ಕುರುಬ ವಿದ್ಯಾರ್ಥಿಗಳಿಗೆ ದಾಖಲಾತಿಯನ್ನು ಮಾಡಿಸಿ, ಹಾಸ್ಟೆಲಿಗೆ ಸೇರಿಸಿ ಉತ್ತಮ ಭವಿಷ್ಯ ರೂಪಿಕೊಡಬೇಕೆಂದು ಭಾವಿಸಿದ್ದೇನೆ. ಈ ಶಾಲೆಯಲ್ಲಿ ಎಲ್ಲಾ ವಿದ್ಯಾರ್ಥಿಗಳಿಗೆ ಸೂಕ್ತ ದಾಖಲಾತಿಗಳನ್ನು ಮಾಡಿಸಿ ವಿದ್ಯಾರ್ಥಿ ವೇತನ ಮತ್ತು ಹಾಸ್ಟೆಲ್ ವ್ಯವಸ್ಥೆ ಮಾಡಿಸಿದ್ದೇನೆ. ಪ್ರತಿ ವರ್ಷ ಗಿಡ ನೆಟ್ಟು ಪರಿಸರ ದಿನಾಚರಣೆ ಮಾಡಿದ್ದೇನೆ. ಮುಂದಿನ ವರ್ಷವೂ ಮಾಡುವಂತೆ ಎಸ್.ಡಿ.ಎಂ.ಸಿ. ಪೋಷಕರಲ್ಲಿ ಮನವಿ ಮಾಡಿದ್ದೇನೆ ಎಂದು ಕೈಕಾಡ ಸರಕಾರಿ ಪ್ರಾಥಮಿಕ ಶಾಲಾ ಶಿಕ್ಷಕಿ ಭಾರತಿ ತಮ್ಮ ಮನದಂಗಿತ ವ್ಯಕ್ತಪಡಿಸಿದರು.
ಹಲವು ಚಿಂತನೆಗಳಿವೆ: ಉದಯಕುಮಾರ್
೨೦೦೦ ರಿಂದ ೨೦೦೭ ರವರೆಗೆ ೪ ವರ್ಷಗಳ ಕಾಲ ಬೇಸಿಗೆ ರಜಾ ಅವಧಿಯಲ್ಲಿ ಶಾಲಾ ಬಿಟ್ಟ ಮಕ್ಕಳಿಗೆ ಚಿಣ್ಣರ ಅಂಗಳ ಕಾರ್ಯಕ್ರಮ ಮಾಡಿ ೧೦೩ ವಿದ್ಯಾರ್ಥಿಗಳನ್ನು ಶಾಲೆಗೆ ದಾಖಲು ಮಾಡಲಾಗಿದೆ, ರಾಜ್ಯ ಸಂಪನ್ಮೂಲ ವ್ಯಕ್ತಿಯಾಗಿ ಹಾಗೂ ನಲಿಕಲಿ, ಗುರು ಚೇತನ ತರಬೇತಿಯಲ್ಲಿ ಸೇವೆ ಸಲ್ಲಿಸಲಾಗಿದೆ. ಶಾಲೆಯಲ್ಲಿ ದಾಖಲಾತಿ ಮತ್ತು ಹಾಜರಾತಿಯನ್ನು ಉತ್ತಮಪಡಿಸುವುದು ಹಾಗೂ ಗುಣಾತ್ಮಕ ಶಿಕ್ಷಣವನ್ನು ನೀಡುವುದು ಶಾಲೆಯನ್ನು ಆಕರ್ಷಣೆಯವಾಗಿ ಮಾಡುವುದು, ಸ್ಥಳೀಯ ದಾನಿಗಳ ನೆರವಿನಿಂದ ಕಟ್ಟದ ದುರಸ್ತಿ, ಸುಣ್ಣ-ಬಣ್ಣ ಹಾಗೂ ಗೋಡೆ ಬರಹ ಬರೆಸಿರುವುದು ಅಗತ್ಯ ಪಿಠೋಪಕರಣಗಳನ್ನು ಕೊಡುಗೆಯಾಗಿ ಪಡೆದಿರುವುದು. ತಮ್ಮ ಅಭಿಲಾಷೆಯಾಗಿದೆ.
ಈ ಸಾಧನೆಗೆ ಇಲಾಖಾ ಮೇಲಾಧಿಕಾರಿಯವರು ಮುಖ್ಯ ಶಿಕ್ಷಕರು ಹಾಗೂ ಸಹ ಶಿಕ್ಷಕರು, ಸಂಘದ ಪದಾಧಿಕಾರಿಗಳ ಪ್ರೇರಣೆ, ಸಹಕಾರ, ಮಾರ್ಗದರ್ಶನದಿಂದ ಈ ಯಶಸ್ವಿಗೆ ಕಾರಣವಾಗಿದೆ ಎಂದು ಅಂಜನಗೇರಿ ಬೆಟ್ಟಗೇರಿ ಸ.ಕಿ.ಪ್ರಾ. ಶಾಲಾ ಶಿಕ್ಷಕರಾಗಿರುವ ಉದಯಕುಮಾರ್ ಕೆ.ಎಲ್. ಅನಿಸಿಕೆ ವ್ಯಕ್ತಪಡಿಸಿದ್ದಾರೆ.
ಗರಿಯಲ್ಲ... ಜವಾಬ್ದಾರಿ: ಪದ್ಮ
ಪ್ರಶಸ್ತಿಯೆಂಬುದು ಗರಿಯಲ್ಲ, ಜವಾಬ್ದಾರಿ ಎಂಬುದು ನನ್ನ ಅನಿಸಿಕೆ. ಈ ಪ್ರಶಸ್ತಿಯನ್ನು ನಾನು ಪಡೆದಿದ್ದರೂ ಇದಕ್ಕೆ ಕಾರಣಕರ್ತರು ಅನೇಕರಿದ್ದಾರೆ. ಅದರಲ್ಲಿ ಮುಖ್ಯ ವಾಗಿ ನಮ್ಮ ಶಿಕ್ಷಣ ಇಲಾಖೆ, ಶಾಲಾ ವಿದ್ಯಾರ್ಥಿಗಳು, ಪೋಷಕರು, ಬೈರಂಬಾಡ ಗ್ರಾಮದ ಸಂಘ ಸಂಸ್ಥೆಗಳು, ಸಮುದಾಯ, ಸ್ಥಳೀಯ ಗ್ರಾಮ ಪಂಚಾಯಿತಿ, ವಿಶೇಷವಾಗಿ ಶಾಲೆಯ ಏಳಿಗೆಗಾಗಿ ಸಹಕರಿಸುತ್ತಿರುವ ದಾನಿಗಳು, ಜೊತೆಗೆ ನನ್ನ ಕುಟುಂಬ ಇವರೆಲ್ಲಾರನ್ನು ಸ್ಮರಿಸುವುದು ಕರ್ತವ್ಯವಾಗಿದೆ. ಜಿಲ್ಲಾಮಟ್ಟದ ಈ ಪ್ರಶಸ್ತಿ ನನಗೆ ಹೆಮ್ಮೆ ತಂದು ಕೊಟ್ಟರೂ ಅದಕ್ಕಿಂತ ಮಿಗಿಲಾಗಿ ಹೆಚ್ಚಿನ ಜವಾಬ್ದಾರಿಯನ್ನು ತಂದುಕೊಟ್ಟಿದೆ.
ಮುAದಿನ ಯೋಜನೆ: ಶಾಲಾ ದಾಖಲಾತಿಯನ್ನು ಹೆಚ್ಚಿಸಲು ಇಲಾಖೆಯ ಸಹಯೋಗದೊಂದಿಗೆ ಯೋಜನೆಯನ್ನು ಹಾಕಿಕೊಳ್ಳುವುದು, ಖಾಸಗಿ ಶಾಲಾ ಶಿಕ್ಷಣ ಸಂಸ್ಥೆಗಳಿಗಿAತಲೂ ಸರ್ಕಾರಿ ಶಿಕ್ಷಣ ಸಂಸ್ಥೆಗಳು ಯಾವುದರಲ್ಲೂ ಕಡಿಮೆ ಇಲ್ಲ ಎಂಬುದನ್ನೂ ತೋರಿಸಲು ಇನ್ನೂ ಹೆಚ್ಚಿನ ಗುಣಮಟ್ಟದ ಶಿಕ್ಷಣದ ಅನುಷ್ಠಾನಕ್ಕೆ ಪ್ರಯತ್ನ, ಸರ್ಕಾರಿ ಶಾಲೆಗಳಲ್ಲಿ ಎಷ್ಟೇ ಸೌಲಭ್ಯಗಳಿದ್ದರೂ ಇಂಗ್ಲೀಷ್ ಭಾಷಾ ವ್ಯಾಮೋಹ ಒಂದರಿAದಲೇ ಪೋಷಕರು ಖಾಸಗಿ ಶಾಲಾ ಶಿಕ್ಷಣದತ್ತ ಆಕರ್ಷಿತರಾಗಿದ್ದಾರೆ. ಈ ನಿಟ್ಟಿನಲ್ಲಿ ನಮ್ಮ ಶಾಲೆಯಲ್ಲಿ ಇಂಗೀಷ್ ಭಾಷಾ ಕಲಿಕೆಗೆ ಸಂಬAಧಪಟ್ಟ ಪ್ರತ್ಯೇಕ ತರಗತಿಗಳನ್ನು ನಡೆಸಲು ಸಿದ್ಧತೆ ಮಾಡಿಕೊಳ್ಳುವುದು ಚಿಂತನೆಯಾಗಿದೆ ಎಂದು ಬೈರಂಬಾಡ ಸ.ಕಿ.ಪ್ರಾ. ಶಾಲೆ ಶಿಕ್ಷಕಿ ಪದ್ಮ ಹೆಚ್.ಎನ್. ನುಡಿದರು.
ಎಲ್ಲರ ಸಹಕಾರ: ಜೆ.ಇ. ಮಂಜುಳಾವಾಣಿ
ಶಾಲೆಯ ಸಮಸ್ಯೆಗಳ ಪಟ್ಟಿ ಮಾಡಿ ಈ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಲಾಗುತಿತ್ತು. ಎಸ್.ಡಿ. ಎಂ.ಸಿ. ಸಭೆಯಲ್ಲಿ ಚರ್ಚಿಸಿ ನಂತರ ಈ ಶಾಲೆಯಲ್ಲಿ ಓದಿ ಉನ್ನತ ಹುದ್ದೆಯಲ್ಲಿರುವ ಹಳೇ ವಿದ್ಯಾರ್ಥಿಗಳಿಂದ ಶಾಲೆಗೆ ವಸ್ತು ರೂಪದ ಸಹಾಯ ಪಡೆದು ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಲಾಗಿದೆ. ಹಳೇ ವಿದ್ಯಾರ್ಥಿಗಳು ಲ್ಯಾಪ್‌ಟಾಪ್, ಬೀರುಗಳು, ಕ್ರೀಡಾ ವಸ್ತುಗಳು, ಫ್ಯಾನ್‌ಗಳು, ಶುದ್ಧ ಕುಡಿಯುವ ನೀರಿನ ಅಕ್ವಾಗಾರ್ಡ್ ಶಾಲೆಗೆ ಉತ್ತಮ ರೀತಿಯ ಬಣ್ಣ ಹೊಡೆಯಲು ಹಲವಾರು ನೆರವಾದರು ಸಮ್ಮಿಲನ ಗುರುವಂದನಾ ಕಾರ್ಯಕ್ರಮ ಯಶಸ್ವಿಯಾಗಿ ಮಾಡಲಾಯಿತು. ಶಾಲೆಗೆ ತುಂಬಾ ವಸ್ತುಗಳು ಸಂಗ್ರಹವಾದವು ಮಕ್ಕಳ ಶೈಕ್ಷಣಿಕ ಪ್ರಗತಿಗೂ ಇಂದಿಗೂ ಎಲ್ಲರೂ ಅತ್ಯುತ್ತಮವಾಗಿ ಸಹಕರಿಸುತ್ತಿದ್ದಾರೆ. ಸರಕಾರದಿಂದ ೧೫,೦೦,೦೦೦ ದುರಸ್ತಿಗೆ ನೆರವು ಬಂತು. ಇದಕ್ಕೆ ಪೂರಕವಾಗಿ ನನ್ನ ಸಹದ್ಯೋಗಿ ಮಿತ್ರರಾದ ಜಿ.ಪಿ. ಕವಿತಾ ಮಂಜುನಾಥ್, ಕೆ.ಆರ್. ರಶ್ಮಿತಾ ಇವರೂ ಸಹ ಉತ್ತಮವಾಗಿ ಸಹಕರಿಸಿರುತ್ತಾರೆ. ಎಸ್.ಡಿ.ಎಂ.ಸಿ. ಪೋಷಕರು ಹಳೇ ವಿದ್ಯಾರ್ಥಿಗಳೆಲ್ಲರಿಗೂ ತುಂಬು ಹೃದಯದ ಧನ್ಯವಾದಗಳು.
ದೂರದೃಷ್ಠಿ: ಶಾಲೆಗೆ ಸುಂದರವಾದ ಕೈ ತೋಟ, (ಗ್ರಾ.ಪಂ. ರೂ. ೩ ಲಕ್ಷ ಕ್ರಿಯಾ ಯೋಜನೆ ಆಗಿದೆ), ಮಕ್ಕಳಿಗೆ ಕೈ ತೊಳೆಯುವ ವ್ಯವಸ್ಥೆ, ಶಾಲಾ ಸುತ್ತ ಕಾಂಪೌAಡ್ ಆಗಬೇಕು, ದಾಖಲಾದ ಎಲ್ಲಾ ಮಕ್ಕಳಿಗೆ ಶೈಕ್ಷಣಿಕ ಪ್ರಗತಿ ಹಾಗೂ ಎಲ್ಲಾ ಸೌಲಭ್ಯಗಳು ಸಿಗಬೇಕು. ಇದು ನನ್ನ ಅಭಿಲಾಷೆಯಾಗಿದೆ ಎನ್ನುತ್ತಾರೆ. ನ್ಯಾನಾದ ಹಳ್ಳ ಸ.ಹಿ.ಪ್ರಾ. ಶಾಲೆಯ ಸಹ ಶಿಕ್ಷಕಿ ಜೆ.ಇ. ಮಂಜುಳಾವಾಣಿ ಅವರು.
ಕೂಲಿ ಕಾರ್ಮಿಕ-ಬಡ ಮಕ್ಕಳಿಗೆ ಅರ್ಪಣೆ; ಮಂಜುನಾಥ್
ಜಿಲ್ಲಾ ಪ್ರಶಸ್ತಿ ನನಗೆ ಲಭಿಸಿರುವುದು ಸಂತೋಷ ತಂದಿದೆ. ಸರಕಾರಿ ಶಾಲೆಯಲ್ಲಿ ಓದುವ ಕೂಲಿ ಕಾರ್ಮಿಕರ ಬಡ ಮಕ್ಕಳಿಗೆ ನನ್ನ ಪ್ರಶಸ್ತಿಯನ್ನು ಒಪ್ಪಿಸುತ್ತೇನೆ. ದಾನಿಗಳ ನೆರವಿನಿಂದ ಈ ಮಕ್ಕಳಿಗೆ ನಾನು ಕ್ರೀಡಾ ಸಾಮಾಗ್ರಿ, ಕುಡಿಯುವ ನೀರಿನ ವ್ಯವಸ್ಥೆ ಮಾಡಿಸಿದ್ದು ನನಗೆ ಹೆಮ್ಮೆ ತಂದಿದೆ. ಈ ಮಕ್ಕಳಿಗೆ ಉತ್ತಮ ರೀತಿಯ ಬೋಧನೆ ಅಂದರೆ Smಚಿಡಿಣ ಅಟಚಿss, ಅomಠಿuಣeಡಿ eಜuಛಿಚಿಣioಟಿ ಆಗಿದೆ, ಶಾಲೆಗೆ ಸುಣ್ಣ ಬಣ್ಣವನ್ನು ದಾನಿಗಳ ಸಹಕಾರದಿಂದ ಖಾಸಗಿ ಶಾಲೆಯಂತೆ ಮಾಡಿಸಿರುತ್ತೇನೆ. ಈ ಕೆಲಸಕ್ಕೆ ನನಗೆ ಸಹಕರಿಸಿರುವದು ಮಹಿಳಾ ಶಿಕ್ಷಕರಾದ ಲೀಲಾವತಿ ಹಾಗೂ ಈ ಹಿಂದೆ ಮುಖ್ಯ ಶಿಕ್ಷಕರಾದ ಶೋಭ ಅವರು ಕ್ರೀಡಾ ಕ್ಷೇತ್ರದಲ್ಲಿ ನಾನು ರಾಜ್ಯಮಟ್ಟದ ಶಟಲ್ ಬ್ಯಾಡ್‌ಮೆಂಟನ್ ಆಟಗಾರನಾಗಿದ್ದೇನೆ. ಅಲ್ಲದೆ ಚೆಸ್, ಕೇರಂ, ಟೇಬಲ್ ಟೆನ್ನಿಸ್ ಆಟಗಾರ (ರಾಜ್ಯ ಮಟ್ಟದಲ್ಲಿ). ಸಾಹಿತ್ಯ ಕ್ಷೇತ್ರದಲ್ಲಿ ಚುಟುಕು, ಸಾಹಿತ್ಯ ರಚನೆ, ದಸರ ಕವಿಗೋಷ್ಠಿಯಲ್ಲಿ ಭಾಗಿಯಾಗಿದ್ದೇನೆ. (ಮಡಿಕೇರಿ ದಸರಾ, ಗೋಣಿಕೊಪ್ಪ ದಸರಾ). ಅಲ್ಲದೆ ಶಿಕ್ಷಣ ಕ್ಷೇತ್ರದಲ್ಲಿ ನಾನು ಕೂಡಿಗೆ ತರಬೇತಿ ಶಾಲೆಯ ಕೆಲವು ಹಿರಿಯ ಉಪನ್ಯಾಸಕರೊಂದಿಗೆ ಒಚಿsಣeಡಿ ಖಿಡಿಚಿiಟಿeಡಿ ಆಗಿ ಕರ್ತವ್ಯ ನಿರ್ವಹಿಸಿದ್ದೇನೆ. ಅಲ್ಲದೆ ಸರಕಾರದ ವತಿಯಿಂದ ನಾನು ಐi.ಓಔ ರವರ ಪೀಸ್ ಎಜ್ಯುಕೇಶನ್ ತರಬೇತಿಗೆ ಶ್ರೀಲಂಕಾದ ಕೊಲಂಬೊದಲ್ಲಿ ಸೇವೆ ಮಾಡಿರುತ್ತೇನೆ. ಇದು ನನ್ನ ಜೀವನದಲ್ಲಿ ಮರೆಯಲಾಗದ ಒಂದು ಕ್ಷಣ. ಅದು ೨೦೦೪ ರಲ್ಲಿ. ನಂತರ ನಾನು ಕಿಪ್ಪಂ(ಆAಧ್ರಪ್ರದೇಶ) ಶಿಲ್‌ಪ್ಪ ಗ್ರಾಂ(ರಾಜಸ್ಥಾನ) ಇಲ್ಲಿ ಶಿಕ್ಷಣದ ಬಗ್ಗೆ ತರಭೇತಿ ಪಡೆದು ನಮ್ಮ ಶಿಕ್ಷಕರಿಗೆ ತರಬೇತಿ ನೀಡಿದ್ದೇನೆ. ಹೀಗೆ ಕ್ರೀಡಾ ಕ್ಷೇತ್ರ, ಶೈಕ್ಷಣಿಕ ಕ್ಷೇತ್ರ, ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿರುವುದು ಹೆಮ್ಮ ತಂದಿದೆ.
ಮುAದೆ ನನ್ನ ಕ್ಷೇತ್ರ ರಾಜಕೀಯ ಕ್ಷೇತ್ರ, ಕಾರಣ. ನಾನು ಕೆಲಸ ಸೇರುವ ಮೊದಲು ವೀರಾಜಪೇಟೆ ಪುರಸಭೆಯ ಸದಸ್ಯನಾಗಿ ಸಾರ್ವಜನಿಕ ಕ್ಷೇತ್ರದಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ನಾನು ಕರ್ನಾಟಕ ರಾಜ್ಯ ಸರಕಾರ ನೌಕರರ ಸಂಘದಲ್ಲಿ ನಿರ್ದೆಶಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದೆನೆ. (ವೀರಾಜಪೇಟೆ ತಾಲೂಕು), ಕೊಡಗು ವಿದ್ಯಾ ಇಲಾಖೆ ಪತ್ತಿನ ಸೌಹಾರ್ಧ ಸಹಕಾರ ಸಂಘ ಮಡಿಕೇರಿಯಲ್ಲಿ ನಿರ್ದೇಶಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದೇನೆ. ಕೊಡಗು ಉಪಾಧ್ಯಾಯರ ಸಹಕಾರ ಸ್ಟೊರ‍್ಸ್ ಮತ್ತು ಮುದ್ರಾಣಾಲಯ ವೀರಾಜಪೇಟೆ ಉಪಾಧ್ಯಕ್ಷರು, ಕೊಡಗು ಬ್ರಾಹ್ಮಣ ವಿದ್ಯಾಭಿವೃದ್ಧಿ ನಿಧಿ ಮಡಿಕೇರಿಯಲ್ಲಿ ನಿರ್ದೇಶಕರಾಗಿ ಸೇವೆ ಮಾಡಿದ್ದೇನೆ, ಕೊಡಗು ಬ್ರಾಹ್ಮಣರ ಸಂಘ ಗೋಣಿಕೊಪ್ಪಲು ಇದರ ಉಪಾಧ್ಯಕ್ಷರಾಗಿ ಕೆಲಸ ಮಾಡಿದ್ದೇನೆ. ಈ ರೀತಿಯಲ್ಲಿ ಶಾಲೆಯ ಕರ್ತವ್ಯದ ನಂತರ ವಿವಿಧ ಸಂಘದಲ್ಲಿ ಸೇವೆ ಸಲ್ಲಿಸುತ್ತಿದ್ದೇನೆ. ಎಂಬುದಾಗಿ ಅಮ್ಮತ್ತಿ ಒಂಟಿಯAಗಡಿ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯ ಸಹ ಶಿಕ್ಷಕ ಎಂ.ವಿ. ಮಂಜುನಾಥ್ ಅಭಿಪ್ರಾಯ ಹಂಚಿಕೊAಡಿದ್ದಾರೆ.
ಶಿಕ್ಷಕರು ಪಾತ್ರದಾರಿ: ರೇಖಾಕುಮಾರಿ : ವಿದ್ಯಾದಾನವೇ ಶ್ರೇಷ್ಠ ದಾನ
ಶಿಕ್ಷಕನ ಶಿಕ್ಷಣ ಪ್ರಕ್ರಿಯೆ ಕೇವಲ ಶಾಲೆಯ ಒಳಗೆ ನಡೆಯುವುದಲ್ಲ. ವಿದ್ಯಾರ್ಥಿಗಳನ್ನು ಸಮುದಾಯದ ಜೊತೆ ಬೆರೆಯುವಂತೆ ಮಾಡುವುದು ಮತ್ತು ಸಮುದಾಯವನ್ನು ಶಾಲೆಯೊಳಗೆ ಬೆರೆಯುವಂತೆ ಮಾಡುವುದು ಅತಿಮುಖ್ಯ ಎಂದು ಕೆ.ಪಿ. ಬಾಣೆ ಹಿರಿಯ ಪ್ರಾ.ಶಾಲೆಯ ಸಹ ಶಿಕ್ಷಕಿ ಡಿ.ಕೆ. ರೇಖಾಕುಮಾರಿ ಹೇಳುತ್ತಾರೆ. ಶಿಕ್ಷಕ ಅದರ ಅತಿ ಮುಖ್ಯ ಪಾತ್ರದಾರಿ. ಈ ಸಂಘಟಿತ ಕೆಲಸವನ್ನು ಮಾಡಬೇಕಾದರೆ ಶಿಕ್ಷಕನಾದವನಿಗೆ ಧೈರ್ಯ. ಸೇವೆ, ಶಿಸ್ತು, ಪ್ರಾಮಾಣಿಕತೆ, ಶ್ರಮ, ಸಂಘಟನೆ ಹೊಂದಾಣಿಕೆ, ಸಹನೆ ಇವು ಅತಿ ಮುಖ್ಯವಾಗಿರುತ್ತದೆ. ವಿದ್ಯಾರ್ಥಿಗಳಲ್ಲಿ ಸಂತಸದಾಯಕ ಕಲಿಕೆಯಾಗಬೇಕಾದರೆ ನಾವು ಮಗುವಾಗಬೇಕು. ಅವರ ಅಭಿರುಚಿಗೆ ತಕ್ಕಂತೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಅವರ ಅಭಿಪ್ರಾಯಗಳಿಗೆ ಮನ್ನಣೆ ನೀಡಬೇಕು ಎಂದರು. ಮುಂದೆ ಲಹರಿ ಸೇವಾ ಸಮಿತಿಯನ್ನು ಹುಟ್ಟು ಹಾಕಿ ಹಸಿದವರಿಗೆ ಅನ್ನದಾನ ಮಾಡುವ ದೊಡ್ಡದಾದ ಯೋಜನೆಯನ್ನು ಎಲ್ಲರ ಸಹಕಾರದಲ್ಲಿ ನಡೆಸಲು ತೀರ್ಮಾನಿಸಿರುತ್ತೇವೆ. ಈಗಾಗಲೇ ಸೇವಾ ಕಾರ್ಯಕ್ರಮವನ್ನು ಚಿಕ್ಕ ಮಟ್ಟದಲ್ಲಿ ನಡೆಸುತ್ತಿರುವೆವು. ಅಧಿಕೃತ ಸಮಿತಿ ರಚನೆಯಾಗಿ ನಂತರ ಇದನ್ನು ಮುಂದೆ ಪ್ರಚಾರ ನೀಡುತ್ತೇವೆ. ನನ್ನ ಈ ಕಾರ್ಯಕ್ಕಾಗಿ ಜಿಲ್ಲಾ ಪ್ರಶಸ್ತಿ ಬಂದಿದೆಯೆAಬುದು ನನ್ನ ಅನಿಸಿಕೆ. ಇದು ನನಗೆ ತುಂಬಾ ಸಂತೋಷವನ್ನು ನೀಡಿದೆ. ನಾನು ಎಲ್ಲಿದ್ದೆ ಎನ್ನುವುದಕ್ಕಿಂತ ಹೇಗಿದ್ದೆ ಅನ್ನುವುದು ಮುಖ್ಯ ಎಂಬದು ಇವರ ಅನಿಸಿಕೆಯಾಗಿದೆ.