ಸುಂಟಿಕೊಪ್ಪ, ಸೆ. ೩೦: ಸಮೀಪದ ಕಂಬಿಬಾಣೆ ಶ್ರೀರಾಮ ಮತ್ತು ಶ್ರೀ ಚಾಮುಂಡೇಶ್ವರಿ ದೇವಸ್ಥಾನ ಸಮಿತಿ ವತಿಯಿಂದ ಅಕ್ಟೋಬರ್ ೧ರಂದು ದುರ್ಗಾಹೋಮ, ೨ರಂದು ಸಂಜೆ ೭ಗಂಟೆಗೆ ರವಿ.ಆರ್. ಶಾಸ್ತಿç ವೃಂದದವರಿAದ ಝೇಂಕಾರ್ ವಾದ್ಯಗೋಷ್ಠಿ ೪ರಂದು ಸಂಜೆ ೬ಗಂಟೆಗೆ ವಾಹನ ಪೂಜೆ, ೫ರಂದು ರಾತ್ರಿ ವಿದ್ಯುತ್ ದೀಪಾಲಂಕೃತ ಭವ್ಯ ಮಂಟಪದಲ್ಲಿ ವಾದ್ಯಗೋಷ್ಠಿ ಯೊಂದಿಗೆ ಊರಿನ ಪ್ರಮುಖ ಬೀದಿಗಳಲ್ಲಿ ಚಾಮುಂಡೇಶ್ವರಿ ದೇವಿಯ ಶೋಭಾಯಾತ್ರೆ ನಡೆಯಲಿದೆ ಎಂದು ಆಡಳಿತ ಮಂಡಳಿ ತಿಳಿಸಿದೆ.