ಕೂಡಿಗೆ, ಸೆ.೩೦: ಕಪ್ಪೆ ನುಂಗಲು ಬಂದ ನಾಗರಹಾವು ಗಾಳಕ್ಕೆ ಸಿಲುಕಿ ನರಳಾಡಿದ ಘಟನೆ ಕೂಡು ಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಾರಂಗಿಯಲ್ಲಿ ನಡೆದಿದೆ.

ಹಾರಂಗಿ ಅಯ್ಯಪ್ಪ ದೇವಾಲಯ ಕೂಡಿಗೆ, ಸೆ.೩೦: ಕಪ್ಪೆ ನುಂಗಲು ಬಂದ ನಾಗರಹಾವು ಗಾಳಕ್ಕೆ ಸಿಲುಕಿ ನರಳಾಡಿದ ಘಟನೆ ಕೂಡು ಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಾರಂಗಿಯಲ್ಲಿ ನಡೆದಿದೆ.

ಹಾರಂಗಿ ಅಯ್ಯಪ್ಪ ದೇವಾಲಯ ಬಳಿಯ ನಿವಾಸಿಯೊಬ್ಬರು ಮೀನು ಹಿಡಿಯಲೆಂದು ಗಾಳಕ್ಕೆ ಕಪ್ಪೆಯನ್ನು ಸಿಕ್ಕಿಸಿ ನದಿಗೆ ಹಾಕಿದ್ದರು. ಆದರೆ, ಮೀನು ಸಿಲುಕದ ಕಾರಣ ಕಪ್ಪೆ

ಸಹಿತ ಗಾಳವನ್ನು ತಂದು ಮನೆಯಂಗಳದಲ್ಲಿ ಇಡಲಾಗಿತ್ತು. ಇದನ್ನು ನಾಗರ ಹಾವೊಂದು ನುಂಗಲು ಬಂದಿದೆ. ಅಪಾಯ ಅರಿಯದೆ ಕಪ್ಪೆಯನ್ನು ನುಂಗಿದ ನಾಗರಹಾವು ಗಾಳಕ್ಕೆ ಸಿಲುಕಿ ಕೊಂಡಿದೆ. ನಾಗರಹಾವು ಒದ್ದಾಡುತ್ತಿ ರುವುದನ್ನು ಗಮನಿಸಿದ ಮನೆ ಮಾಲೀಕ ನೇಬೂಬು ಸಾಬು ಉರಗ ರಕ್ಷಕ ಗಫೂರ್ ಅವರನ್ನು ಸಂಪರ್ಕಿಸಿ ದ್ದಾರೆ. ಸ್ಥಳಕ್ಕೆ ತೆರಳಿದ ಸ್ನೇಕ್ ಗಫೂರ್ ಇದನ್ನು ತೆಗೆಯುವುದು ಅಸಾಧ್ಯ ಎಂದು ತಿಳಿದು ಸ್ನೇಕ್ ವಾವ

ಹಾಗೂ ಕೊಡಗಿನ ವೈದ್ಯರುಗಳನ್ನು ಸಂಪರ್ಕಿಸಿದ್ದಾರೆ. ಆದರೆ ಚಿಕಿತ್ಸೆ ನೀಡಲು ಕೊಡಗಿನಲ್ಲಿ ಸೂಕ್ತ

ಸೌಲಭ್ಯ ಇಲ್ಲದಿರುವುದರಿಂದ. ಮೈಸೂರಿನ

(ಮೊದಲ ಪುಟದಿಂದ) ಸ್ನೇಕ್ ಶ್ಯಾಂ ಅವರನ್ನು ಸಂಪರ್ಕಿಸಿ ಅವರ ಪುತ್ರ ಸೂರ್ಯಕೀರ್ತಿ ಅವರಿಗೆ ವಿಷಯ ತಿಳಿಸಿದ ಬಳಿಕ ಮೈಸೂರಿ ನಲ್ಲಿ ಚಿಕಿತ್ಸೆಗೆ ಅವಕಾಶವಿರುವುದು ತಿಳಿದುಬಂದಿದೆ. ತಕ್ಷಣ ೪ ವರ್ಷದ ೫ ಅಡಿ ಉದ್ದದ ನಾಗರಹಾವನ್ನು ಕುಶಾಲನಗರದಿಂದ ಐರಾವತ ಬಸ್‌ನಲ್ಲಿ ಮೈಸೂರಿಗೆ ಸ್ನೇಕ್ ಗಫೂರ್ ಕಳುಹಿಸಿಕೊಟ್ಟಿದ್ದಾರೆ. ಅಲ್ಲಿ ಸೂರ್ಯಕೀರ್ತಿ ಅವರು ಇದಕ್ಕೆ ಚಿಕಿತ್ಸೆ ಒದಗಿಸಿದ್ದಾರೆ.

-ಕೆ.ಕೆ.ನಾಗರಾಜಶೆಟ್ಟಿ.