ರಾಷ್ಟಿçÃಯ ಪಕ್ಷ ಘೋಷಣೆ ಸಾಧ್ಯತೆ

ಹೈದರಾಬಾದ್, ಸೆ. ೨೯: ತೆಲಂಗಾಣ ಮುಖ್ಯಮಂತ್ರಿ ಮತ್ತು ತೆಲಂಗಾಣ ರಾಷ್ಟç ಸಮಿತಿ (ಟಿಆರ್‌ಎಸ್) ಪಕ್ಷದ ಅಧ್ಯಕ್ಷ ಕೆ. ಚಂದ್ರಶೇಖರ್ ರಾವ್ ಅವರು ಅಕ್ಟೋಬರ್ ೫ ರಂದು ವಿಜಯ ದಶಮಿ ದಿನದಂದು ತಮ್ಮ ರಾಷ್ಟಿçÃಯ ಪಕ್ಷವನ್ನು ಘೋಷಿಸುವ ಸಾಧ್ಯತೆ ಇದೆ. ಟಿಆರ್‌ಎಸ್ ಶಾಸಕಾಂಗ ಪಕ್ಷವು ಅಕ್ಟೋಬರ್ ೫ ರಂದು ಬೆಳಿಗ್ಗೆ ೧೧ ಗಂಟೆಗೆ ಕೆಸಿಆರ್‌ಗೆ ರಾಷ್ಟಿçÃಯ ಪಕ್ಷವನ್ನು ಘೋಷಿಸುವಂತೆ ಮನವಿ ಮಾಡುವ ಸರ್ವಾನುಮತದ ನಿರ್ಣಯ ಅಂಗೀಕರಿಸುವ ನಿರೀಕ್ಷೆಯಿದೆ. ನಂತರ, ಟಿಆರ್‌ಎಸ್ ರಾಜ್ಯ ಕಾರ್ಯಕಾರಿಣಿ ಸಭೆ ಸಹ ಅಂದು ಮಧ್ಯಾಹ್ನ ೧೨ ಗಂಟೆಗೆ ರಾಷ್ಟಿçÃಯ ಪಕ್ಷ ಉದ್ಘಾಟಿಸುವಂತೆ ಸಿಆರ್‌ಗೆ ಮನವಿ ಮಾಡುವ ಮತ್ತೊಂದು ನಿರ್ಣಯ ಅಂಗೀಕರಿಸಲಿದೆ. ಕೆಸಿಆರ್ ಅವರು ತಮ್ಮ ಪಕ್ಷಕ್ಕೆ ಭಾರತ ರಾಷ್ಟç ಸಮಿತಿ (ಬಿಆರ್‌ಎಸ್) ಎಂದು ನಾಮಕರಣ ಮಾಡುವ ಸಾಧ್ಯತೆ ಇದ್ದು, ಅಕ್ಟೋಬರ್ ೫ ರಂದು ಹೊಸ ಪಕ್ಷಕ್ಕೆ ರಾಷ್ಟಿçÃಯ ಸಂಯೋಜಕರನ್ನು ಘೋಷಿಸುವ ನಿರೀಕ್ಷೆಯಿದೆ.

ಪ್ರೇಯಸಿಗೆ ಗುಂಡಿಕ್ಕಿ ಪರಾರಿಯಾಗುತ್ತಿದ್ದ ಯುವಕ ಅಪಘಾತದಲ್ಲಿ ಬಲಿ

ಮಹಾರಾಷ್ಟç, ಸೆ. ೨೯: ಬೋಯಿಸರ್ ಪಟ್ಟಣದಲ್ಲಿ ಯುವತಿಯನ್ನು ಆಕೆಯ ಪ್ರಿಯಕರ ಗುಂಡಿಕ್ಕಿ ಕೊಂದು, ಸ್ಥಳದಿಂದ ಪರಾರಿಯಾಗಲು ಪ್ರಯತ್ನಿಸುತ್ತಿದ್ದಾಗ ಮಿಲಿಟರಿ ಟ್ರಕ್ ಡಿಕ್ಕಿ ಹೊಡೆದು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ. ಬುಧವಾರ ಮಧ್ಯಾಹ್ನ ನೇಹಾ ಮಹತೋ (೨೧) ಮತ್ತು ಆಕೆಯ ಗೆಳೆಯ ಕೃಷ್ಣ ಯಾದವ್ (೨೫) ಅವರು ಸಾರಾವಳಿಯ ಖಾಸಗಿ ಆಸ್ಪತ್ರೆಯ ಬಳಿ ರಸ್ತೆಯಲ್ಲಿ ಇಬ್ಬರ ನಡುವೆ ತೀವ್ರ ಜಗಳ ನಡೆದಿದೆ. ಈ ವೇಳೆ ಇದ್ದಕ್ಕಿದ್ದಂತೆ, ಯಾದವ್ ರಿವಾಲ್ವರ್ ಅನ್ನು ಹೊರತೆಗೆದು ನೇಹಾ ಅವರ ತಲೆಗೆ ಗುಂಡು ಹಾರಿಸಿದ್ದಾನೆ. ನೇಹಾ ಸ್ಥಳದಲ್ಲೇ ಕುಸಿದುಬಿದ್ದು ಮೃತಪಟ್ಟಿದ್ದಾರೆ. ಆಘಾತಕ್ಕೊಳಗಾದ ಸ್ಥಳೀಯರು ಅಲ್ಲಿಗೆ ಧಾವಿಸುತ್ತಿದ್ದಂತೆ, ಯಾದವ್ ಭಯಭೀತರಾಗಿ ಸ್ಥಳದಿಂದ ಓಡಿಹೋಗಿದ್ದಾರೆ. ಆದರೆ ಕೇವಲ ನೂರು ಮೀಟರ್ ದೂರದಲ್ಲಿ ಮಿಲಿಟರಿ ವಾಹನಕ್ಕೆ ಸಿಲುಕಿ ಮೃತಪಟ್ಟಿದ್ದಾರೆ. ಕೂಡಲೇ ಆತನನ್ನು ಬೋಯಿಸರ್ ಪೊಲೀಸರು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದರು, ಆದರೆ ಅಲ್ಲಿ ಅವರು ಈಗಾಗಲೇ ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದ್ದಾರೆ. ಪೊಲೀಸ್ ಪ್ರಾಥಮಿಕ ತನಿಖೆಯ ಪ್ರಕಾರ, ಯಾದವ್ ಮತ್ತು ನೇಹಾ ಒಂದು ವರ್ಷದಿಂದ ಪ್ರೀತಿಸುತ್ತಿದ್ದರು. ಆದರೆ ಯಾದವ್, ನೇಹಾಳನ್ನು ಮದುವೆಯಾಗಲು ನಿರಾಕರಿಸಿದ್ದ ಎನ್ನಲಾಗಿದೆ. ಮದುವೆಯಾಗುವಂತೆ ನೇಹಾಳ ಕುಟುಂಬ ಯಾದವ್ ಮೇಲೆ ಒತ್ತಡ ಹಾಕಿತ್ತು ಎನ್ನಲಾಗಿದೆ.

ಸುರಕ್ಷಿತ-ಕಾನೂನು ಪ್ರಕಾರ ಗರ್ಭಪಾತಕ್ಕೆ ಎಲ್ಲಾ ಮಹಿಳೆಯರು ಅರ್ಹರು

ನವದೆಹಲಿ, ಸೆ. ೨೯: ಸುರಕ್ಷಿತ ಮತ್ತು ಕಾನೂನು ಪ್ರಕಾರ ಗರ್ಭಪಾತಕ್ಕೆ ಎಲ್ಲಾ ಮಹಿಳೆಯರು ಅರ್ಹರು ಎಂಬುದನ್ನು ಸುಪ್ರೀಂಕೋರ್ಟ್ ಎತ್ತಿಹಿಡಿದಿದ್ದು, ಗರ್ಭಿಣಿಯಾಗಲು ಇಷ್ಟವಿಲ್ಲದ ಮಹಿಳೆಯರು ಗರ್ಭಪಾತ ಮಾಡಿಸಿಕೊಳ್ಳುವ ಹಕ್ಕನ್ನು ವಿವಾಹದ ಹಿನ್ನೆಲೆಯಲ್ಲಿ ಕಸಿದುಕೊಳ್ಳುವ ಹಕ್ಕಿಲ್ಲ ಎಂದು ಹೇಳಿದೆ. ಮದುವೆಯಾಗದೆ ಒಂಟಿಯಾಗಿರುವ ಮಹಿಳೆ ಯರು ವೈದ್ಯಕೀಯ ಗರ್ಭಪಾತ ಕಾಯ್ದೆಗಳು ಮತ್ತು ನಿಯಮಗಳಡಿ ಗರ್ಭಿಣಿಯಾದ ೨೪ ವಾರಗಳವರೆಗೂ ಗರ್ಭಪಾತದ ಹಕ್ಕನ್ನು ಹೊಂದಿ ರುತ್ತಾರೆ ಎಂದು ಸುಪ್ರೀಂಕೋರ್ಟ್ ಹೇಳಿದೆ. ವೈವಾಹಿಕ ಅತ್ಯಾಚಾರ ಒಳಗೊಂಡAತೆ ಅತ್ಯಾಚಾರ ತಡೆಯುವುದು ವೈದ್ಯಕೀಯ ಗರ್ಭಪಾತ ಕಾಯ್ದೆ ಉದ್ದೇಶವಾಗಿದೆ ಎಂದು ನ್ಯಾಯಾಲಯ ತೀರ್ಪು ನೀಡಿದೆ. ವಿವಾಹಿತ ಮತ್ತು ಅವಿವಾಹಿತ ಮಹಿಳೆಯರ ನಡುವಿನ ವ್ಯತ್ಯಾಸವು ಕೃತಕ ಮತ್ತು ಸಾಂವಿಧಾನಿಕವಾಗಿ ಸಮರ್ಥನೀಯವಲ್ಲ ಎಂದು ನ್ಯಾಯಾ ಲಯ ಹೇಳುತ್ತದೆ. ವಿವಾಹಿತ ಮಹಿಳೆಯರು ಮಾತ್ರ ಲೈಂಗಿಕ ಚಟುವಟಿ ಕೆಗಳಲ್ಲಿ ತೊಡಗುತ್ತಾರೆ ಎಂಬ ವರ್ಗೀಕರಣವನ್ನು ಇದು ಶಾಶ್ವತ ಗೊಳಿಸುತ್ತದೆ ಎಂದು ನ್ಯಾಯಾಲಯ ಹೇಳಿದೆ. ವೈದ್ಯಕೀಯ ಗರ್ಭಪಾತ ಕಾಯ್ದೆಗೆ ಸಂಬAಧಿಸಿದ ತೀರ್ಪನ್ನು ನ್ಯಾಯಮೂರ್ತಿಗಳಾದ ಡಿ.ವೈ. ಚಂದ್ರಚೂಡ್, ಜೆ.ಬಿ. ಪಾರ್ದಿವಾಲಾ ಮತ್ತು ಎ.ಎಸ್. ಬೋಪಣ್ಣ ಅವರಿದ್ದ ನ್ಯಾಯಪೀಠ ಕಳೆದ ತಿಂಗಳು ಕಾಯ್ದಿರಿಸಿತ್ತು ಮತ್ತು ವಿವಾಹವಾಗದ ಮತ್ತು ಒಂಟಿಯಾಗಿರುವ ಮಹಿಳೆಯರಿಗೆ ೨೪ ವಾರಗಳವರೆಗೂ ಗರ್ಭಪಾತಕ್ಕೆ ಅವಕಾಶ ನೀಡಲಾಗುವುದು ಎಂದು ಹೇಳಿತ್ತು.

ಸಿಮ್ ಕಾರ್ಡ್, ಒಟಿಟಿ ಸೇವೆಗೆ ನಕಲಿ ದಾಖಲೆ ನೀಡುವವರಿಗೆ ಶಿಕ್ಷೆ

ನವದೆಹಲಿ, ಸೆ. ೨೯: ಮಹತ್ವದ ಬೆಳವಣಿಗೆಯಲ್ಲಿ ಅಪರಾಧ ಪ್ರಕರಣಗಳಲ್ಲಿನ ಆರೋಪಿಗಳನ್ನು ಶೀಘ್ರ ಪತ್ತೆ ಮಾಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮಹತ್ವದ ನಿರ್ಣಯ ಕೈಗೊಂಡಿದ್ದು, ಸಿಮ್ ಕಾರ್ಡ್, ಒಟಿಟಿ ಸೇವೆಗೆ ನಕಲಿ ದಾಖಲೆ ನೀಡುವವರಿಗೆ ರೂ. ೫೦ ಸಾವಿರ ದಂಡ, ೧ ವರ್ಷ ಜೈಲು ಶಿಕ್ಷೆ ವಿಧಿಸಲು ಮುಂದಾಗಿದೆ. ಟೆಲಿಕಾಂ ಬಳಕೆದಾರರ ಆನ್‌ಲೈನ್ ವಂಚನೆ ಹಾಗೂ ಕಾನೂನು ಬಾಹಿರ ಚಟುವಟಿಕೆಗಳಿಂದ ರಕ್ಷಿಸುವ ಸಲುವಾಗಿ ಕಠಿಣ ಕ್ರಮಗಳನ್ನು ಕರಡು ಮಸೂದೆಯಲ್ಲಿ ಕೇಂದ್ರ ಸರ್ಕಾರ ಪ್ರಸ್ತಾಪಿಸಿದೆ. ಮೊಬೈಲ್ ಸಿಮ್ ಕಾರ್ಡ್ ಅನ್ನು ಪಡೆಯಲು ಹಾಗೂ ವಾಟ್ಸಪ್, ಟೆಲಿಗ್ರಾಮ್, ಸಿಗ್ನಲ್‌ಗಳಂತಹ ಒಟಿಟಿ ಪ್ಲಾಟ್‌ಪಾರ್ಮ್ಗಳಲ್ಲಿ ಸೇವೆಯನ್ನು ಪಡೆಯಲು ನಕಲಿ ದಾಖಲೆಗಳನ್ನು ಒದಗಿಸಿದರೆ ಅಂತಹವರಿಗೆ ೧ ವರ್ಷದ ಜೈಲು ಹಾಗೂ ರೂ. ೫೦,೦೦೦ ದಂಡ ವಿಧಿಸಲು ಕರಡಿನಲ್ಲಿ ಅವಕಾಶವಿದೆ ಎನ್ನಲಾಗಿದೆ. ಸೈಬರ್ ವಂಚಕರು ಅಪರಾಧವನ್ನು ಮಾಡಲು ನಕಲಿ ದಾಖಲೆಗಳನ್ನು ಬಳಸಿ ಸಿಮ್ ಕಾರ್ಡ್ಗಳನ್ನು ಖರೀದಿಸುತ್ತಾರೆ. ಈ ಮೂಲಕ ಒಟಿಟಿ ಅಪ್ಲಿಕೇಶನ್‌ಗಳಲ್ಲಿ ತಮ್ಮ ಗುರುತನ್ನು ಮರೆ ಮಾಡಿ, ಜನರನ್ನು ವಂಚಿಸುತ್ತಾರೆ. ಇಂತಹ ವಂಚನೆಗಳಿAದ ರಕ್ಷಿಸಲು ಭಾರತೀಯ ದೂರಸಂಪರ್ಕ ಮಸೂದೆ, ೨೦೨೨ರ ಕರಡು ಭಾಗವಾಗಿ ಭದ್ರತಾ ಕ್ರಮಗಳನ್ನು ಪ್ರಸ್ತಾಪಿಸಲಾಗಿದೆ. ದೂರಸಂಪರ್ಕ ಇಲಾಖೆ ಈಗ ಕರಡು ಮಸೂದೆಯನ್ನು ಬಿಡುಗಡೆ ಮಾಡಿ ಸಾರ್ವಜನಿಕರಿಂದ ಅಭಿಪ್ರಾಯವನ್ನು ಆಹ್ವಾನಿಸಿದೆ.

ದೋಣಿ ಮಗುಚಿ ೫೦ಕ್ಕೂ ಹೆಚ್ಚು ಮಂದಿ ನಾಪತ್ತೆ

ಗುವಾಹಟಿ, ಸೆ. ೨೯: ಅಸ್ಸಾಂನ ಧುಬ್ರಿ ಜಿಲ್ಲೆಯಲ್ಲಿ ಗುರುವಾರ ಬೆಳಿಗ್ಗೆ ಬ್ರಹ್ಮಪುತ್ರ ನದಿಯಲ್ಲಿ ದೋಣಿಯೊಂದು ಮಗುಚಿ ಬಿದ್ದಿದ್ದು, ೫೦ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದಾರೆ. ಬ್ರಹ್ಮಪುತ್ರ ನದಿಯಲ್ಲಿ ನಿರ್ಮಾಣ ಹಂತದಲ್ಲಿರುವ ಧುಬ್ರಿ-ಫುಲ್ಬರಿ ಸೇತುವೆಯಲ್ಲಿ ಈ ಅವಘಡ ಸಂಭವಿಸಿದೆ ಎಂದು ಧುಬ್ರಿಯ ಹೆಚ್ಚುವರಿ ಉಪ ಆಯುಕ್ತ ಮನಶ್ ಕುಮಾರ್ ಸೈಕಿಯಾ ಐಎಎನ್‌ಎಸ್‌ಗೆ ತಿಳಿಸಿದ್ದಾರೆ. ನಿರ್ಮಾಣ ಹಂತದಲ್ಲಿದ್ದ ಸೇತುವೆಯ ಪಿಲ್ಲರ್‌ಗೆ ದೋಣಿ ಡಿಕ್ಕಿ ಹೊಡೆದು ಮಗುಚಿ ಬಿದ್ದಿದೆ. ಘಟನೆಯ ನಂತರ, ಕನಿಷ್ಟ ಐದು ಜನರು ನದಿ ದಾಟಿ ಸುರಕ್ಷಿತವಾಗಿ ಬಂದಿದ್ದಾರೆ. ಆದರೆ, ಇನ್ನೂ ಹಲವರು ನಾಪತ್ತೆಯಾಗಿದ್ದಾರೆ ಎಂದು ಅವರು ಹೇಳಿದ್ದಾರೆ. ದೋಣಿಯಲ್ಲಿ ಸುಮಾರು ೫೦ ಜನರು ಇದ್ದರು ಎಂಬ ವರದಿಗಳಿವೆ. ಆದರೆ, ನಿಖರವಾದ ಸಂಖ್ಯೆಯ ಬಗ್ಗೆ ನಮಗೆ ಇನ್ನೂ ಯಾವುದೇ ಖಚಿತ ಮಾಹಿತಿ ಇಲ್ಲ. ಭೂ ದಾಖಲೆ ಅಧಿಕಾರಿ ಮತ್ತು ಕಚೇರಿ ಸಿಬ್ಬಂದಿ ಸಹ ಈ ದೋಣಿಯಲ್ಲಿದ್ದರು ಎಂದು ತಿಳಿದುಬಂದಿದೆ. ಅವಘಡದ ನಂತರ ಅವರೆಲ್ಲರೂ ನಾಪತ್ತೆಯಾಗಿದ್ದಾರೆ.

ಸೌದಿ ಅರೇಬಿಯಾದ ಪ್ರಧಾನಿಯಾಗಿ ಮೊಹಮ್ಮದ್ ಬಿನ್ ಸಲ್ಮಾನ್

ದುಬೈ, ಸೆ. ೨೯: ಸೌದಿ ದೊರೆ ಸಲ್ಮಾನ್ ಅವರು ತಮ್ಮ ಪುತ್ರ, ಮೊಹಮ್ಮದ್ ಬಿನ್ ಸಲ್ಮಾನ್ ಅವರನ್ನು ದೇಶದ ನೂತನ ಪ್ರಧಾನ ಮಂತ್ರಿಯಾಗಿ ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ. ಸಂಪುಟ ಪುನಾರಚನೆ ಮಾಡಿರುವ ಸೌದಿ ದೊರೆ ಸಲ್ಮಾನ್, ತನ್ನ ಇನ್ನೊಬ್ಬ ಪುತ್ರ ಖಾಲಿದ್ ಬಿನ್ ಸಲ್ಮಾನ್ ಅವರನ್ನು ನೂತನ ರಕ್ಷಣಾ ಸಚಿವರಾಗಿ ನೇಮಕ ಮಾಡಿದ್ದಾರೆ. ಅವರು ಈ ಹಿಂದೆ ಉಪ ರಕ್ಷಣಾ ಸಚಿವರಾಗಿ ಕಾರ್ಯನಿರ್ವಹಿಸುತ್ತಿದ್ದರು. ವಿತ್ತ, ವಿದೇಶಾಂಗ ಹಾಗೂ ಹೂಡಿಕೆ ಸಚಿವರು ಬದಲಾಗಿಲ್ಲ. ಇನ್ನು ಸಂಪುಟದ ಉಸ್ತುವಾರಿ ನೂತನ ಪ್ರಧಾನಿ ಮೊಹಮ್ಮದ್ ಬಿನ್ ಸಲ್ಮಾನ್ ಅವರದ್ದಾಗಲಿದೆ. ಮೊಹಮ್ಮದ್ ಬಿನ್ ಸಲ್ಮಾನ್ ಸದ್ಯ ಸೌದಿ ಅರೇಬಿಯಾ ರಾಜಕೀಯದಲ್ಲಿ ಬಹಳ ಪ್ರಭಾವಿ ವ್ಯಕ್ತಿ ಎನಿಸಿದ್ದವರು. ಹಲವು ವರ್ಷಗಳ ಕಾಲ ಆಡಳಿತ ವ್ಯವಹಾರದಲ್ಲಿ ಅವರೇ ಅಂತಿಮ ಎನ್ನುವಷ್ಟು ಪ್ರಭಾವಿಯಾಗಿದ್ದರು.