ಮುಳ್ಳೂರು, ಸೆ. ೨೮: ಸಮೀಪದ ಆಲೂರು-ಸಿದ್ದಾಪುರ ರೋಟರಿ ಮಲ್ಲೇಶ್ವರ ಸಂಸ್ಥೆ ವತಿಯಿಂದ ರೋಟರಿ ಕ್ಲಬ್ ಯೋಜನೆಯ ವನಸಿರಿ ಕಾರ್ಯಕ್ರಮದ ಅಂಗವಾಗಿ ಮಂಗಳೂರು ವಿ.ವಿ.ನಿಲಯಕ್ಕೆ ಸೇರಿದ ಚಿಕ್ಕ ಅಳುವಾರ ಕಾವೇರಿ ಗಂಗೋತ್ರಿ ಸ್ನಾತ್ತಕೋತ್ತರ ಕೇಂದ್ರಕ್ಕೆ ಸೇರಿದ ಜಾಗದಲ್ಲಿ ಉಪಯುಕ್ತ ಗಿಡಗಳನ್ನು ನೆಡಲಾಯಿತು.

ರೋಟರಿ ಮಲ್ಲೇಶ್ವರ ಕ್ಲಬ್ ಅಧ್ಯಕ್ಷ ಎಂ.ಟಿ.ಬೇಬಿ ಗಿಡ ನೆಡುವ ಮೂಲಕ ವನಸಿರಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ಕಾರ್ಯದರ್ಶಿ ಮನೋಹರ್, ಸದಸ್ಯರಾದ ಎಚ್.ಇ.ತಮ್ಮಯ್ಯ, ಎ.ಎಸ್. ರಾಮಣ್ಣ, ಸಂಪತ್, ಲೋಕೇಶ್, ಉದಯಕುಮಾರ್, ಕಿರಣ್ ಕಾವೇರಿ ಗಂಗೋತ್ರಿ ಕೇಂದ್ರದ ನಿರ್ದೇಶಕರು, ಉಪನ್ಯಾಸಕರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.