ಮುಳ್ಳೂರು, ಸೆ. ೨೮: ಸಮೀಪದ ಆಲೂರು-ಸಿದ್ದಾಪುರ ಗ್ರಾ.ಪಂ.ಯ ೨೦೨೨-೨೩ನೇ ಸಾಲಿನ ಗ್ರಾಮಸಭೆ ಗ್ರಾ.ಪಂ. ಅಧ್ಯಕ್ಷ ಮೋಹನ್ಕುಮಾರ್ ಅಧ್ಯಕ್ಷತೆಯಲ್ಲಿ ಸಾರ್ವಜನಿಕ ಸಮುದಾಯ ಭವನದಲ್ಲಿ ನಡೆಯಿತು. ಗ್ರಾಮಸಭೆಯಲ್ಲಿ ಗ್ರಾಮಸ್ಥರು ಆಲೂರು-ಸಿದ್ದಾಪುರ ಗ್ರಾ.ಪಂ. ವ್ಯಾಪ್ತಿಯ ಗ್ರಾಮೀಣ ರಸ್ತೆಗಳು ಸೇರಿದಂತೆ ಜಿ.ಪಂ.ಗೆ ಸೇರಿದ ರಸ್ತೆಗಳ ದುಸ್ಥಿತಿ, ಕೆಲವು ಕಡೆ ರಸ್ತೆ ಕಾಮಗಾರಿ ಕಳಪೆ ಗುಣಮಟ್ಟದಿಂದ ಕೂಡಿದ್ದು ಕಾಮಗಾರಿ ನಡೆದು ತಿಂಗಳಲ್ಲಿ ರಸ್ತೆ ಹಾಳಾಗುತ್ತಿರುವುದು, ಜಿ.ಪಂ. ಮತ್ತು ಲೋಕೋಪಯೋಗಿ ಇಲಾಖೆಗೆ ಸೇರಿದ ರಸ್ತೆ ಕಾಮಗಾರಿ ಬಗ್ಗೆ ಸಾರ್ವಜನಿಕ ಮಾಹಿತಿ ಫಲಕ ಅಳವಡಿಸದಿರುವುದು ಮುಂತಾದ ರಸ್ತೆ ವಿಚಾರಗಳಿಗೆ ಸಂಬAಧಿಸಿದ ಪ್ರಶ್ನೆಗಳ ಸುರಿಮಳೆಗೆರೆದರು. ಕಳೆದ ೧೫ ವರ್ಷಗಳಿಂದ ಜಿ.ಪಂ. ಅಧಿಕಾರಿಗಳು ಹೊಸಗುತ್ತಿ-ಹೊಸಹಳ್ಳಿ ೨ ಕಿ.ಮೀ. ದೂರದ ಗ್ರಾಮೀಣ ಬೈಪಾಸ್ ರಸ್ತೆಯನ್ನು ಅಭಿವೃದ್ಧಿಪಡಿಸುತ್ತೇವೆ ಎಂದು ಪ್ರತಿ ಗ್ರಾಮಸಭೆಗಳಲ್ಲಿ ಆಶ್ವಾಸನೆ ಮಾತ್ರ ಕೊಡುತ್ತಾರೆ. ಮಳೆಗಾಲದಲ್ಲಿ ಮನುಷ್ಯರು ನಡೆದಾಡಲು ಸಾಧ್ಯವಾಗುತ್ತಿಲ್ಲ. ಶಾಲಾ ಮಕ್ಕಳು ಇದೇ ರಸ್ತೆಯಲ್ಲಿ ಸಂಚರಿಸಬೇಕು ಎಂದು ಗ್ರಾಮಸ್ಥರು ಪಂಚಾಯತ್ ರಾಜ್ ಇಲಾಖೆ ಅಭಿಯಂತರರನ್ನು ತರಾಟೆಗೆ ತೆಗೆದುಕೊಂಡರು. ಕಣಿವೆ ಬಸವನಹಳ್ಳಿ ಗ್ರಾಮಕ್ಕೆ ಹೋಗುವ ೨ ಕಿ.ಮೀ. ದೂರದ ರಸ್ತೆಯನ್ನು ದಶಕಗಳಿಂದ ದುರಸ್ತಿಪಡಿಸಿಲ್ಲ ಇತ್ತೀಚಿಗೆ ಕೇವಲ ನೂರು ಮೀಟರ್ ದೂರದ ವರೆಗೆ ರಸ್ತೆ ಡಾಂಬರೀಕರಣ ಕಾಮಗಾರಿ ಮಾಡಿದ್ದರೂ ಕಳಪೆ ಕಾಮಗಾರಿ ಯಿಂದ ತಿಂಗಳಲ್ಲೆ ರಸ್ತೆ ಕಿತ್ತು ಹೋಗಿದೆ ಎಂದು ದಿನೇಶ್ ಅಧಿಕಾರಿಗಳನ್ನು ಪ್ರಶ್ನಿಸಿದರು. ಜಿ.ಪಂ. ಲೋಕೋಪ ಯೋಗಿ ಇಲಾಖೆಗೆ ಸೇರಿದ ರಸ್ತೆ ಕಾಮಗಾರಿ ಸಂದರ್ಭ ರಸ್ತೆ ಕಾಮಗಾರಿ ವೆಚ್ಚ ಕ್ರಿಯಾಯೋಜನೆ, ಗುತ್ತಿಗೆದಾರ, ನಿರ್ವಹಣೆ ಮುಂತಾದ ಮಾಹಿತಿ ಒಳಗೊಂಡಿರುವ ಮಾಹಿತಿ ಫಲಕವನ್ನು ಅಳವಡಿಸದಿರುವುದಿಲ್ಲ. ಮಾಹಿತಿ ಫಲಕ ಅಳವಡಿಸುವುದರಿಂದ ಜನರಿಗೆ ಮಾಹಿತಿ ಸಿಗುತ್ತದೆ ಎಂದು ಮಾಜಿ ತಾ.ಪಂ. ಸದಸ್ಯ ಸಿ.ಕೆ. ಚಂದ್ರಶೇಖರ್ ಸಭೆಯಲ್ಲಿ ಗಮನ ಸೆಳೆದರು. ಸಭೆಯಲ್ಲಿ ರಸ್ತೆ, ಚರಂಡಿ, ಕುಡಿಯುವ ನೀರು ಇನ್ನು ಮುಂತಾದ ಪಂಚಾಯತ್ ರಾಜ್ ಇಲಾಖೆಗೆ ಸೇರಿದ ಸಮಸ್ಯೆಗಳ ಬಗ್ಗೆ ಗ್ರಾಮಸ್ಥರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಗ್ರಾಮಸಭೆಯಲ್ಲಿ ಅಂಕನಹಳ್ಳಿ ಗ್ರಾಮದಲ್ಲಿರುವ ಪಶು ಆಸ್ಪತ್ರೆಗೆ ಖಾಯಂ ವೈದ್ಯರಿಲ್ಲದಿರುವುದರ ಬಗ್ಗೆ ರಾಜಪ್ಪ ಪ್ರಸ್ತಾಪಿಸಿದರು. ಆಲೂರು-ಸಿದ್ದಾಪುರ ಕಂದಾಯ ವೃತ್ತಕ್ಕೆ ಸಂಬAಧಿಸಿದAತೆ ಆಲೂರು-ಸಿದ್ದಾಪುರ ಕೇಂದ್ರದಲ್ಲಿ ವಾರದಲ್ಲಿ ಮೂರು ದಿನ ಗ್ರಾಮಲೆಕ್ಕಿಗ ಕರ್ತವ್ಯ ನಿರ್ವಹಿಸುವುದರಿಂದ ಜನರಿಗೆ ಒಳಿತಾಗುವು ದೆಂದು ಚಂದ್ರಶೇಖರ್ ಮನವಿ ಮಾಡಿದರು. ಅರಣ್ಯ ಇಲಾಖೆಗೆ ಸಂಬAಧಿಸಿದ ವಿಷಯಕ್ಕೆ ನಡೆದ ಚರ್ಚೆಯಲ್ಲಿ ಅರಣ್ಯ ಅಧಿಕಾರಿ ಮಾಹಿತಿ ನೀಡಿದರು. ಆಲೂರು ಸಿದ್ದಾಪುರದಲ್ಲಿರುವ ಅಂಗಡಿ, ಹೊಟೇಲು, ಕ್ಯಾಂಟೀನು ಮುಂತಾದ ಮುಂಗಟ್ಟುಗಳ ಮುಂಭಾಗದಲ್ಲಿರುವ ಚರಂಡಿಯೊಳಗೆ ತ್ಯಾಜ್ಯ ವಸ್ತುಗಳು ಹಾಕುತ್ತಿರುವ ಬಗ್ಗೆ ಜಯಕುಮಾರ್ ಸಭೆಯಲ್ಲಿ ಪ್ರಸ್ತಾಪಿಸಿದರು. ಇದಕ್ಕೆ ಸಮಜಾಯಿಷಿಕೆ ನೀಡಿದ ಅಧ್ಯಕ್ಷ ಮೋಹನ್ಕುಮಾರ್ ಶೀಘ್ರದಲ್ಲೆ ಕಸವಿಲೇವಾರಿ ಘಟಕದಲ್ಲಿ ಕಸವಿಲೇವಾರಿಯಾಗುತ್ತದೆ, ಪ್ರತಿಯೊಂದು ಅಂಗಡಿ ಮುಂಗಟ್ಟುಗಳಿಗೆ ಕಸದ ಬುಟ್ಟಿ ವಿತರಣೆ ಮಾಡಿದ್ದೇವೆ. ಇನ್ನು ಮುಂದೆ ಈ ರೀತಿ ಆದಲ್ಲಿ ಇದು ಅಂಗಡಿ ಮಾಲೀಕರಿಗೆ ದಂಡ ವಿಧಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಸರಕಾರ ಮತ್ತು ಆರೋಗ್ಯ ಇಲಾಖೆ ಬಡ ಜನರ ಅನುಕೂಲ ಕ್ಕಾಗಿ ‘ಆಭ’ ಕಾರ್ಡ್ ವ್ಯವಸ್ಥೆ ಮಾಡಿದ್ದು ಈ ಯೋಜನೆ ಮೂಲಕ ಕ್ಯಾನ್ಸರ್, ಹೃದಯ ಸಂಬAಧಿ ಕಾಯಿಲೆ, ಕಿಡ್ನಿ ಸಮಸ್ಯೆ ಮುಂತಾದ ಕಾಯಿಲೆಗೆ ತುತ್ತಾದ ವ್ಯಕ್ತಿಯ ಸಸ್ತç ಚಿಕಿತ್ಸೆಗಾಗಿ ೫ ಲಕ್ಷರು ವರೆಗೆ ಉಚಿತ ಚಿಕಿತ್ಸೆ ಪಡೆಯಲು ಅವಕಾಶ ಇದೆ ಇದನ್ನು ಸದುಪಯೋಗಿಸಿಕೊಳ್ಳುವಂತೆ ವೈದ್ಯಾಧಿಕಾರಿ ಡಾ. ಸುಪರ್ಣ ಮಾಹಿತಿ ನೀಡಿದರು.
ಸಭೆಯಲ್ಲಿ ವಿವಿಧ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು. ಸಭೆಯಲ್ಲಿ ನೋಡಲ್ ಅಧಿಕಾರಿ ಜಿ.ಎಂ. ಹೇಮಂತ್, ಗ್ರಾ.ಪಂ. ಉಪಾಧ್ಯಕ್ಷೆ ದಮಯಂತಿ, ಪಿಡಿಒ ಹರೀಶ್ ಮತ್ತು ಗ್ರಾ.ಪಂ.ಯ ಎಲ್ಲಾ ಸದಸ್ಯರು ಭಾಗವಹಿಸಿದ್ದರು.