ಸೋಮವಾರಪೇಟೆ, ಸೆ.೨೮: ಶಾಂತಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ೨೦೨೦-೨೧ ಸಾಲಿನಲ್ಲಿ ನಡೆದ ನರೇಗಾ ಯೋಜನೆಯ ಕಾಮಗಾರಿಗಳ ಮೊತ್ತ ಬಿಡುಗಡೆಯಾಗದೆ ಸಮಸ್ಯೆಯಾಗಿದೆ ಎಂದು ಪಂಚಾಯಿತಿ ಅಧ್ಯಕ್ಷರ ನೇತೃತ್ವದಲ್ಲಿ ಸದಸ್ಯರು ತಾಲೂಕು ಪಂಚಾಯಿತಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ೨೫ ದನದ ಕೊಟ್ಟಿಗೆ, ೭೦ ಇಂಗುಗುAಡಿ, ೩ ರಸ್ತೆ ಕಾಮಗಾರಿ, ೩ ಮೋರಿ ಕಾಮಗಾರಿಗಳ ಬಿಲ್ ಬಿಡುಗಡೆಯಾಗಿಲ್ಲ ಎಂದು ಅಧ್ಯಕೆÀ್ಷ ಜಯಮ್ಮ ಬಿದ್ದಪ್ಪ ದೂರಿದರು.

ಜಲ್‌ಜೀವನ್ ಮಿಷನ್ ಯೋಜನೆಯಲ್ಲಿ ತಲ್ತಾರೆಶೆಟ್ಟಳ್ಳಿ, ಉದ್ರಳ್ಳಿ, ಹಳೆಯೂರು ಗ್ರಾಮಗಳಲ್ಲಿ ಪೈಪ್‌ಲೈನ್ ಆಗಿದೆ. ಘಟಕಕ್ಕೆ ವಿದ್ಯುತ್ ಸಂಪರ್ಕ ನೀಡಿಲ್ಲ. ಹರಗದಲ್ಲಿ ಟ್ಯಾಂಕ್‌ಗೆ ನೀರು ಹತ್ತುತ್ತಿಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದರು. ಕೂಡಲೆ ಕಾಮಗಾರಿಗಳ ಹಣ ಬಿಡುಗಡೆ ಮಾಡಬೇಕು. ತಪ್ಪಿದಲ್ಲಿ ತಾಪಂ ಕಚೇರಿ ಎದುರು ಮತ್ತೊಮ್ಮೆ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದರು.

ಪ್ರತಿಭಟನೆಯಲ್ಲಿ ಪಂಚಾಯಿತಿ ಉಪಾಧ್ಯಕ್ಷೆ ಬೇಬಿ, ಸದಸ್ಯರಾದ ತ್ರಿಶೂಲ್, ತೇಜಸ್ವಿನಿ, ಚಂಗಪ್ಪ, ಮಾಜಿ ಅಧ್ಯಕ್ಷ ಬಿ.ಪಿ. ಅನಿಲ್ ಮತ್ತು ಗ್ರಾಮಸ್ಥರು ಇದ್ದರು.