ಸುಂಟಿಕೊಪ್ಪ, ಸೆ. ೨೮: ಖಾಸಗಿ ವ್ಯಕ್ತಿಗೆ ಸೇರಿದ ಮಳಿಗೆಯಲ್ಲಿ ಮಾಂಸ ಮಾರಾಟಕ್ಕೆ ಮೊದಲು ಒಪ್ಪಿಗೆ ನೀಡಿ ಕೆಲಕಾಲದ ನಂತರ ಮಾಂಸ ಮಾರಾಟ ನಿರ್ಬಂಧಿಸುವ ಹಾಗೂ ತನಗೆ ಸೇರಿದ ಮಳಿಗೆಯಲ್ಲಿ ಮಾಂಸ ಮಾರಾಟಕ್ಕೆ ಬಹಿರಂಗ ಹರಾಜು ಮೂಲಕ ಪರವಾನಿಗಿ ಮಂಜೂರು ಮಾಡುವ ಸಂಬAಧ ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ತೆಗೆದುಕೊಂಡಿದ್ದ ನಿರ್ಣಯವನ್ನು ಹೈಕೋರ್ಟ್ ರದ್ದುಪಡಿಸಿದೆ.
ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ನಿರ್ಣಯ ರದ್ದುಪಡಿಸುವಂತೆ ಕೋರಿ ಸುಂಟಿಕೊಪ್ಪ ಗ್ರಾಮದ ನಿವಾಸಿ ಎಸ್.ಎಫ್. ಫಾರೂಕ್ ಇತರ ವ್ಯಾಪಾರಸ್ಥರು ಸಲ್ಲಿಸಿದ ಅರ್ಜಿಯನ್ನು ಪುರಸ್ಕರಿಸಿದ ನ್ಯಾಯಮೂರ್ತಿ ಹೇಮಂತ್ ಚಂದನಗೌಡರ್ ಪೀಠ ಈ ಆದೇಶ ಮಾಡಿದೆ.
ಉಲುಗುಲಿ ಗ್ರಾಮದಲ್ಲಿ ಹಾದು ಹೋಗಿರುವ ರಾಷ್ಟಿçÃಯ ಹೆದ್ದಾರಿ ಪಕ್ಕದಲ್ಲಿ ಸ್ವಂತ ಮಳಿಗೆಯಲ್ಲಿ ಕೋಳಿ, ಮೀನು, ಕುರಿ/ಮೇಕೆ ಮಾಂಸ ಮಾರಾಟ ಮಾಡಲು ಅರ್ಜಿದಾರರು ೨೦೧೮-೧೯ನೇ ಸಾಲಿನಲ್ಲಿ ಪರವಾನಗಿ ಪಡೆದುಕೊಂಡಿದ್ದರು. ಆದರೆ ೨೦೧೯ ಜನವರಿ ೧ ರಂದು ಗ್ರಾಮ ಪಂಚಾಯಿತಿಯು ನೈರ್ಮಲ್ಯ ಕಾಪಾಡಲು ಹೆದ್ದಾರಿ ಪಕ್ಕದಲ್ಲಿ ಮಾಂಸ ಮಾರಾಟಕ್ಕೆ ನಿರ್ಬಂಧ ವಿಧಿಸುವ ಮತ್ತು ತನಗೆ ಸೇರಿದ ಮಳಿಗೆಯಲ್ಲಿ ಮಾಂಸ ಮಾರಾಟಕ್ಕೆ ಬಹಿರಂಗ ಹರಾಜು ಮೂಲಕ ಪರವಾನಗಿ ಮಂಜೂರು ಮಾಡಲು ನಿರ್ಣಯ ಕೈಗೊಂಡಿತು. ಅದನ್ನು ಪ್ರಶ್ನಿಸಿ ಅರ್ಜಿದಾರರು ಹೈಕೋರ್ಟ್ನಲ್ಲಿ ಪ್ರಶ್ನಿಸಿದ್ದರು. ವಿಚಾರಣೆ ನಡೆಸಿದ ಹೈಕೋರ್ಟ್ ಹೆದ್ದಾರಿ ಪಕ್ಕದಲ್ಲಿರುವ ಅರ್ಜಿದಾರರ ಮಳಿಗೆಯಲ್ಲಿ ಮಾಂಸ ಮಾರಾಟ ಮಾಡುವುದಕ್ಕೆ ಗ್ರಾಮ ಪಂಚಾಯಿತಿ ಪರವಾನಗಿ ನೀಡಿತ್ತು.
ನಂತರ ಗ್ರಾಮ ಪಂಚಾಯಿತಿಗೆ ಸೇರಿದ ಮಳಿಗೆಯಲ್ಲಿ ಮಾಂಸ ಮಾರಾಟ ಮಾಡಲು ಸಾರ್ವಜನಿಕ ಹರಾಜು ಮೂಲಕ ಪರವಾನಿಗಿ ಮಂಜೂರು ಮಾಡಲು ನಿರ್ಣಯ ಕೈಗೊಳ್ಳಲಾಗಿದೆ. ಇದು ಅರ್ಜಿದಾರರು ಹೊಂದಿರುವ ವ್ಯಾಪಾರ ಮಾಡುವ ಹಕ್ಕನ್ನು ಕಸಿದುಕೊಂಡAತಾಗಿದೆ. ಅಲ್ಲದೆ ಅಧಿಕಾರ ಇಲ್ಲದಿದ್ದರೂ ಹೆದ್ದಾರಿ ಪಕ್ಕದಲ್ಲಿ ಮಾಂಸ ಮಾರಾಟಕ್ಕೆ ನಿಷೇಧ ಹೊರಡಿಸಲಾಗಿದೆ. ಇದು ಸಂವಿಧಾನದ ಪರಿಚ್ಛೇದ ೧೯(೧)(ಜಿ) ಅಡಿಯಲ್ಲಿ ದತ್ತವಾಗಿರುವ ಮೂಲಭೂತ (ವ್ಯಾಪಾರ ಮಾಡುವ) ಹಕ್ಕಿನ ಉಲ್ಲಂಘನೆ ಮತ್ತು ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಕಾಯ್ದೆ-೧೯೯೩ ಸೆಕ್ಷನ್ ೬೯ರ ಉಲ್ಲಂಘನೆ ಎಂದು ಆದೇಶಿಸಿದೆ.
ಗ್ರಾಮ ಪಂಚಾಯಿತಿ ನಿರ್ಣಯವನ್ನು ರದ್ದುಪಡಿಸಿರುವ ಹೈಕೋರ್ಟ್ ಸಂಬAಧಪಟ್ಟ ಮಳಿಗೆಯಲ್ಲಿ ವ್ಯಾಪಾರ ಮಾಡಲು ಅನುಮತಿ ಕೋರಿ ಅರ್ಜಿದಾರರು ನಿಗದಿತ ನಮೂನೆಯಲ್ಲಿ ಅರ್ಜಿ ಸಲ್ಲಿಸಬೇಕು. ಅಂತಹ ಅರ್ಜಿ ಸಲ್ಲಿಕೆಯಾದರೆ ಅದನ್ನು ಪರಿಗಣಿಸಿ ನಾಲ್ಕು ವಾರದಲ್ಲಿ ಕಾನೂನು ಪ್ರಕಾರ ಆದೇಶ ಹೊರಡಿಸಬೇಕು ಎಂದು ಗ್ರಾಮ ಪಂಚಾಯಿತಿಗೆ ನಿರ್ದೇಶಿಸಿದೆ.