ಗೋಣಿಕೊಪ್ಪ ವರದಿ, ಸೆ. ೨೮: ಉಮಾಮಹೇಶ್ವರಿ ದೇವಸ್ಥಾನ ಸಮೀಪ ನಿರ್ಮಿಸಿರುವ ಶ್ರೀ ಇಗ್ಗುತ್ತಪ್ಪ ಕೊಡವ ಸಂಘದ ಕಟ್ಟಡವನ್ನು ಉದ್ಘಾಟಿಸಲಾಯಿತು.

ಜಾಗ ದಾನಿ ಮೇಜರ್ ಮನೆಯಪಂಡ ಸಿ. ಬೋಪಣ್ಣ, ಬೊಳ್ಳು ಬೋಪಣ್ಣ ಕಟ್ಟಡ ಉದ್ಘಾಟಿಸಿದರು. ದಾನಿ ಮನೆಯಪಂಡ ಸಿ. ಮೋತಿ ಉತ್ತಪ್ಪ, ಸುಮಿ ಉತ್ತಪ್ಪ ಸಭಾಂಗಣ ಉದ್ಘಾಟಿಸಿ, ಸಂಘದ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಸಂಘದ ಅಧ್ಯಕ್ಷ ಅಜ್ಜಿಕುಟ್ಟೀರ ಸಿ. ದೇವಯ್ಯ ಕಚೇರಿ ಉದ್ಘಾಟಿಸಿದರು. ಕೈಲ್‌ಪೊಳ್ದ್ ಆಚರಣೆ ನಡೆಯಿತು. ಹಿರಿಯರಾದ ಬಿದ್ದಂಡ ಸಿ. ಮಾದಪ್ಪ ಕೋವಿ ಪೂಜೆ ನೆರವೇರಿಸಿದರು. ಜಾಗ ದಾನಿಗಳಿಗೆ ಸನ್ಮಾನ ಮಾಡಲಾಯಿತು.

ಸಂಘದ ಉಪಾಧ್ಯಕ್ಷೆ ಕೊಣಿಯಂಡ ಬೋಜಮ್ಮ ಉತ್ತಪ್ಪ, ಪ್ರ. ಕಾರ್ಯದರ್ಶಿ ಚೋನೀರ ಸತ್ಯ, ಖಜಾಂಚಿ ಕರ್ತೂರ ನಾಚಪ್ಪ, ಹಿರಿಯರಾದ ಸಿ.ಡಿ. ಮಾದಪ್ಪ, ಕೊಳ್ಳಿಮಾಡ ಅಜಿತ್, ಪೊನ್ನಿಮಾಡ ಸುರೇಶ್ ಪಾಲ್ಗೊಂಡಿದ್ದರು.