ಪೊನ್ನಂಪೇಟೆ, ಸೆ. ೨೮: ಗೋಣಿಕೊಪ್ಪಲು ಕಾವೇರಿ ಕಾಲೇಜಿನ ರಾಷ್ಟಿçÃಯ ಸೇವಾ ಯೋಜನೆ ಘಟಕದ ವತಿಯಿಂದ ರಾಷ್ಟಿçÃಯ ಸೇವಾ ಯೋಜನೆ ದಿನಾಚರಣೆ ಆಚರಿಸಲಾಯಿತು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಕರ್ನಾಟಕ ಕೊಡವ ಸಾಹಿತ್ಯ ಅಕಾಡಮಿ ಸದಸ್ಯ ಕುಡಿಯರ ಮುತ್ತಪ್ಪ ಧ್ವಜಾರೋಹಣ ನೆರವೇರಿಸಿದರು.
ನಂತರ ಕಾಲೇಜಿನ ಸಭಾಂಗಣದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ರಾಷ್ಟಿçÃಯ ಸೇವಾ ಯೋಜನೆ ಘಟಕದ ವತಿಯಿಂದ ಕುಡಿಯರ ಮುತ್ತಪ್ಪ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಈ ಸಂಧರ್ಭ ಸನ್ಮಾನ ಸ್ವೀಕರಿಸಿ ಮಾತನಾಡಿದ ಮುತ್ತಪ್ಪ ಅವರು ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವವರಿಗೆ ಹಲವು ಅಡೆತಡೆಗಳು ಬರುತ್ತವೆ. ಆದರೆ ಅದಕ್ಕೆ ಎದೆಗುಂದದೆ ನಿಸ್ವಾರ್ಥ ಸೇವೆಯಲ್ಲಿ ನಮ್ಮನ್ನು ತೊಡಗಿಸಿಕೊಳ್ಳಬೇಕು. ವಿದ್ಯಾರ್ಥಿಗಳು ಗುರು ಹಿರಿಯರಿಗೆ ಗೌರವವನ್ನು ಕೊಡುವ ಗುಣವನ್ನು ಮೈಗೂಡಿಸಿಕೊಂಡು, ತಮ್ಮನ್ನು ಸದೃಢ ಸಮಾಜ ನಿರ್ಮಾಣದಲ್ಲಿ ತೊಡಗಿಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಪ್ರೊ.ಎಂ.ಬಿ. ಕಾವೇರಪ್ಪ ಅವರು ಮಾತನಾಡಿದರು. ಎನ್ಎಸ್ ಅಧಿಕಾರಿ ಎಂ.ಎನ್. ವನಿತ್ ಕುಮಾರ್ ಪ್ರಾಸ್ತಾವಿಕ ಮಾತನಾಡಿದರು. ಈ ಸಂದರ್ಭ ಎನ್ಎಸ್ ಅಧಿಕಾರಿ ಎನ್.ಪಿ. ರೀತಾ ಉಪನ್ಯಾಸಕಿ ಪೂಜಾ, ಎನ್ಎಸ್ ಸ್ವಯಂ ಸೇವಕ, ಸೇವಕಿಯರು ಇದ್ದರು.
ಎನ್ಎಸ್ಎಸ್ ಧ್ವಜಾರೋಹಣ ಸಂದರ್ಭ ಕಾವೇರಿ ಪದವಿಪೂರ್ವ ಪ್ರಾಂಶುಪಾಲ ಎಸ್ಎಸ್ ಮಾದಯ್ಯ, ಕಾವೇರಿ ಕಾಲೇಜು ಉಪ ಪ್ರಾಂಶುಪಾಲೆ ಡಾ. ಎ.ಎಸ್. ಪೂವಮ್ಮ, ಕಾವೇರಿ ಪ.ಪೂ. ಕಾಲೇಜು ಎನ್ಎಸ್ಎಸ್ ಅಧಿಕಾರಿ ಕುಸುಮ್, ಪದವಿ ಹಾಗೂ ಪದವಿಪೂರ್ವ ಕಾಲೇಜು ಎನ್ಎಸ್ಎಸ್ ಸ್ವಯಂ ಸೇವಕ, ಸೇವಕಿಯರು ಹಾಜರಿದ್ದರು.