ಮಡಿಕೇರಿ, ಸೆ. ೨೭: ಮಡಿಕೇರಿ ಆಕಾಶವಾಣಿಯ ಕಾರ್ಯಕ್ರಮ ಮುಖ್ಯಸ್ಥರಾಗಿದ್ದ ಡಾ|| ವಿಜಯ್ ಅಂಗಡಿ ಅವರು ಇದೀಗ ಹಾಸನ ಆಕಾಶವಾಣಿ ಕೇಂದ್ರಕ್ಕೆ ವರ್ಗಾವಣೆಯಾಗಿದ್ದಾರೆ. ಇಂದು ವರ್ಗಾವಣೆ ಆದೇಶ ಬಂದಿದ್ದು, ಸದ್ಯದಲ್ಲಿ ವರದಿ ಮಾಡಿಕೊಳ್ಳುವುದಾಗಿ ಅವರು ತಿಳಿಸಿದ್ದು, ೨೦೧೮ ರಿಂದ ಕೊಡಗಿನಲ್ಲಿನ ಕರ್ತವ್ಯದ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ.
ನೂರಾರು ರೈತರ ಅನುಭವದ ಪ್ರಸಾರವಲ್ಲದೆ ರೈತ ನುಡಿ ಎಂಬ ಪುಸ್ತಕವನ್ನು ಲೋಕಾರ್ಪಣೆ ಮಾಡಿದ್ದುದು ಮರೆಯಲಾಗದ ಸಂಗತಿ. ೨೦೧೯ ರಲ್ಲಿ ಆಕಾಶವಾಣಿಗೆ ರಾಷ್ಟಿçÃಯ ಪುರಸ್ಕಾರ ಬಂದದ್ದು ಸ್ಮರಣೀಯವಾದ ವಿಚಾರ. ಆಕಾಶವಾಣಿಯ ಆವರಣದಲ್ಲಿ ನೂರಾರು ತೆರನಾದ ಸಸ್ಯಗಳನ್ನು ಬೆಳೆಸುವ ಅವಕಾಶ ಸಿಕ್ಕಿದ್ದು, ಪ್ರಾಮಾಣಿಕತೆಯಿಂದ ಕೆಲಸ ಮಾಡಿದ್ದೇನೆ ಎಂದಿದ್ದಾರೆ.