ಮಡಿಕೇರಿ, ಸೆ. ೨೮: ಪ್ರವಾದಿ ಮಹಮ್ಮದ್ ಮುಸ್ತಫ (ಸ)ರ ಜನ್ಮದಿನದ ಭಾಗವಾಗಿ ಆಜಾದ್ ಮಾಡರ್ನ್ ಅರಬಿಕ್ ಮದರಸ ಮತ್ತು ಸಿದ್ರಾ ಫೌಂಡೇಶನ್ ಆಯೋಜಿಸಿರುವ ರಾಜ್ಯಮಟ್ಟದ ಪ್ರಬಂಧ ಸ್ಪರ್ಧೆಗೆ ಪ್ರಬಂಧಗಳನ್ನು ಆಹ್ವಾನಿಸಲಾಗಿದೆ.

ವಿಷಯಗಳು: ಪ್ರವಾದಿ ಮಹಮ್ಮದ್ (ಸ) ಕಾರುಣ್ಯದ ಪ್ರತೀಕ, ಕನ್ನಡ ಸಾಹಿತ್ಯ ಲೋಕದಲ್ಲಿ ಪ್ರವಾದಿ ಮಹಮ್ಮದ್ (ಸ).

ಸ್ಪರ್ಧೆಯ ನಿಯಮಗಳು: ೨೦೦೦ ಪದಗಳಿಗಿಂತ ಹೆಚ್ಚಾಗಿರಬೇಕು. ವಯಸ್ಸಿನ ಮಿತಿ ಇರುವುದಿಲ್ಲ(ಎಲ್ಲರೂ ಭಾಗವಹಿಸಬಹುದು). ಕನ್ನಡ ಭಾಷೆಯಲ್ಲಿ ಆಗಿರಬೇಕು. ಕೊಟ್ಟಿರುವ ಎರಡು ವಿಷಯಗಳಲ್ಲಿ ಯಾವುದಾದರೂ ಒಂದರ ಕುರಿತು ಮಾತ್ರ ಬರೆಯಬೇಕು. ಪಿಡಿಎಫ್ ಆಗಿ (ಇ-ಮೇಲ್ ಅಥವಾ ವಾಟ್ಸಪ್ ಮೂಲಕ)ಕಳುಹಿಸಬೇಕು. ಅಕ್ಟೋಬರ್ ೪ ಒಳಗಾಗಿ ಪ್ರಬಂಧ ಕಳುಹಿಸಬೇಕು. ತದನಂತರ ಸ್ವೀಕರಿಸುವುದಿಲ್ಲ. ಪ್ರಥಮ ರೂ. ೩,೩೧೨, ದ್ವಿತೀಯ ರೂ. ೨, ೨೧೨, ತೃತೀಯ ರೂ. ೧,೧೧೨ ಬಹುಮಾನ ನೀಡಲಾಗುವುದು. ಪ್ರಬಂಧ ಕಳುಹಿಸಬೇಕಾದ ವಾಟ್ಸ್ ಆ್ಯಪ್ ಸಂಖ್ಯೆ. ೯೯೮೦೦೦೩೪೮೦. ಹೆಚ್ಚಿನ ಮಾಹಿತಿಗಾಗಿ ೯೪೮೩೭೧೪೭೯೯ ಅಥವಾ ೯೯೧೬೬೮೭೯೦೨ ಅನ್ನು ಸಂಪರ್ಕಿಸಬಹುದು.