*ಗೋಣಿಕೊಪ್ಪಲು, ಸೆ. ೨೮: ಛದ್ಮವೇಷ, ಜಾನಪದ ನೃತ್ಯ, ಬೆಂಕಿ ಇಲ್ಲದ ಅಡುಗೆ, ಕಸದಲ್ಲಿ ರಸ, ಕ್ರೀಡಾಕೂಟ ಹೀಗೆ ವಿವಿಧ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ನಾರಿಯರು ವಾಣಿಜ್ಯ ನಗರಿಯಲ್ಲಿ ತಮ್ಮ ದರ್ಬಾರನ್ನು ನಡೆಸಿದರು.

ಇಲ್ಲಿನ ಸರ್ಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಶ್ರೀ ಕಾವೇರಿ ದಸರಾ ಸಮಿತಿಯ ೪೪ನೇ ಹಾಗೂ ಮಹಿಳಾ ದಸರಾ ಸಮಿತಿ ವತಿಯಿಂದ ನಡೆದ ೭ನೇ ವರ್ಷದ ಮಹಿಳಾ ದಸರಾ ವಿಶೇಷ ಅನುಭವವನ್ನು ನೀಡಿತು. ಮಹಿಳಾ ದಸರಾ ಅಧ್ಯಕ್ಷೆ ಚೈತ್ರಾ ಬಿ. ಚೇತನ್ ಮುಂದಾಳತ್ವದಲ್ಲಿ ಮುಖ್ಯ ಅತಿಥಿಗಳಾದ ವಿಶ್ವ ಬಿಲಿಯರ್ಡ್ ಚಾಂಪಿಯನ್ ಉಮಾದೇವಿ ನಾಗರಾಜ್, ಕಂಪೆನಿ ಸೆಕ್ರೆಟರಿ ಪ್ರಾ÷್ಯಕ್ಟಿಸ್ ಅಂಡ್ ಇನ್ ಸಾಲ್ವೆನ್ಸಿ ಪ್ರೊಫೇಶನಲ್ ದೇವಿಕಾ ಸತ್ಯನಾರಾಯಣ್ ಆಕಾಶಕ್ಕೆ ಬಲೂನ್ ಹಾರಿಸುವ ಮೂಲಕ ಮಹಿಳಾ ದಸರಾಕ್ಕೆ ಚಾಲನೆ ನೀಡಿದರು.

ನಂತರ ವಿವಿಧ ಸ್ಪರ್ಧೆಗಳಿಗೆ ಹೆಂಗೆಳೆಯರು ನಾ ಮೊದಲು, ನೀ ಮೊದಲು ಅನ್ನುತ್ತಾ ಪ್ರತೀ ಸ್ಪರ್ಧೆಗೂ ಸೆಡ್ಡು ಹೊಡೆಯುತ್ತಾ ಸ್ಪರ್ಧೆಗಳಲ್ಲಿ ಭಾಗವಹಿಸಿ ಉಲ್ಲಸಿತರಾದರು.

ಆಟೋಟ ಸ್ಪರ್ಧೆಗಳಾದ ಬಾಂಬ್ ಇನ್ ದ ಸಿಟಿ, ಸಂಗೀತ ಕುರ್ಚಿ, ಮ್ಯೂಸಿಕಲ್ ಚೇರ್, ವಿಷದ ಚೆಂಡು ಕ್ರೀಡೆಗಳಲ್ಲಿ ಭಾಗವಹಿಸಿ ಗಮನ ಸೆಳೆದರು.

ನಂತರ ಕಾವೇರಿ ಕಲಾ ವೇದಿಕೆಯಲ್ಲಿ ಪದ್ಮ ಮತ್ತು÷ ತಂಡ, ಅನುಬಂದ ತಂಡ, ನಿಸರ್ಗ ಕೇಂದ್ರ ಸಮಿತಿ, ಕಳತ್ಮಾಡು ತಂಡ, ಹರಿಶ್ಚಂದ್ರಪುರ ಸ್ನೇಹಿತರ ಬಳಗ, ಪಾರ್ವತಿ ತಂಡ, ಟೈಲರ್ ವಲಯ ಸಮಿತಿ, ಪೆರುಂಬಾಡಿ ತಂಡ, ಪಿ.ಎನ್.ಎಂ. ತಂಡ, ಸಪಾರ್ಣಿಕ ತಂಡ, ಪಂಚಮಿ ತಂಡ ಮತ್ತು ನಿಸರ್ಗ ಯುವತಿ ಮಂಡಳಿಯವರು ಸುಗ್ಗಿ ಕುಣಿತ, ಕೋಲಾಟದ ಸಾಮೂಹಿಕ ಜಾನಪದ ನೃತ್ಯ ಮಾಡಿ ಗಮನ ಸೆಳೆದರು.

ಇದೇ ಸಂದರ್ಭ ಶಾಸಕ

ಕೆ.ಜಿ. ಬೋಪಯ್ಯ

(ಮೊದಲ ಪುಟದಿಂದ) ಹಾಗೂ ಇತರ ಅತಿಥಿಗಳ ಉಪಸ್ಥಿತಿಯಲ್ಲಿ ವಿವಿಧ ಕ್ಷೇತ್ರದ ಸಾಧಕರುಗಳು ಮತ್ತು ಕೊರೊನ ವಾರಿಯರ್ಸ್ಗಳಿಗೆ ಸನ್ಮಾನ ಮಾಡಲಾಯಿತು. ಚೈತ್ರ ಬಿ. ಚೇತನ್ ಅಧ್ಯಕ್ಷತೆಯಲ್ಲಿ ವಿಧಾನಪರಿಷತ್ ಮಾಜಿ ಸದಸ್ಯೆ ಶಾಂತೆಯAಡ ವೀಣಾ ಅಚ್ಚಯ್ಯ, ಮಹಿಳಾ ಉದ್ಯಮಿ ಕರ್ತಮಾಡ ಚಿತ್ರ ಸುಜು, ಗ್ರಾ.ಪಂ. ಉಪಾಧ್ಯಕ್ಷೆ ವೈ.ಎಂ. ಸವಿತಾ, ಚಲನ ಚಿತ್ರ ನಟಿ ಬಲ್ಲಚಂಡ ಅಕ್ಷಿತಾ ಬೋಪಯ್ಯ, ಮಹಿಳಾ ದಸರಾ ಸಮಿತಿ ಗೌರವಾಧಕ್ಷೆ ನೂರೇರ ರತಿ ಅಚ್ಚಪ್ಪ, ಬಿಜೆಪಿ ತಾಲೂಕು ಮಹಿಳಾ ಮೋರ್ಚಾ ಅಧ್ಯಕ್ಷೆ ಮಲ್ಚೀರ ಕವಿತಾ ಬೋಜಪ್ಪ, ಮಹಿಳಾ ದಸರಾ ಉಪಾಧ್ಯಕ್ಷೆ ರಾಣಿ ನಾರಾಯಣ ಉಪಸ್ಥಿತರಿದ್ದರು. ಕಾವೇರಿ ದಸರಾ ಸಮಿತಿ ಉಪಾಧ್ಯಕ್ಷೆ ಮಂಜುಳಾ, ಪ್ರಧಾನ ಕಾರ್ಯದರ್ಶಿ ಕೊಣಿಯಂಡ ಬೋಜಮ್ಮ, ಕಾರ್ಯದರ್ಶಿ ಜಿ.ಕೆ. ಗೀತಾ, ಖಜಾಂಚಿ ಮನ್ನಕ್ಕಮನೆ ಸೌಮ್ಯ ಬಾಲು, ನಿರ್ದೇಶಕರುಗಳಾದ ಪುಷ್ಪಾ ಮನೋಜ್, ಶಾಹಿನ, ಸುಲೇಖ, ಧನಲಕ್ಷಿ÷್ಮ ಇದ್ದರು. -ಎನ್.ಎನ್. ದಿನೇಶ್