ಸಿದ್ದಾಪುರ, ಸೆ. ೨೮: ಕ್ಷÄಲ್ಲಕ ಕಾರಣಕ್ಕಾಗಿ ತಂದೆ-ಮಗ ಸೇರಿ ಯುವಕರಿಬ್ಬರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಸಂಬAಧಿಸಿ ಈರ್ವರನ್ನು ಸಿದ್ದಾಪುರ ಪೊಲೀಸರು ಬಂಧಿಸಿದ್ದಾರೆ.
ಚೆನ್ನಯ್ಯನಕೋಟೆ ಗ್ರಾಮದ ಕಾಲೋನಿ ನಿವಾಸಿಗಳಾದ ಅಯ್ಯಪ್ಪ ಹಾಗೂ ಆತನ ಸ್ನೇಹಿತ ಉಮೇಶ ಎಂಬಿಬ್ಬರು ತಾ. ೨೭ ರಂದು ರಾತ್ರಿ ಸಿದ್ದಾಪುರದ ಮೈಸೂರು ರಸ್ತೆಯ ಬಳಿ ನಿಂತಿರುವ ಸಂದರ್ಭದಲ್ಲಿ ಸಿದ್ದಾಪುರ ಹಾಗೂ ನೆಲ್ಲಿಹುದಿಕೇರಿ ಗ್ರಾಮದ ನಿವಾಸಿಗಳಾದ ಸ್ಟಾö್ಯಂಡ್ಲೀ ಹಾಗೂ ಮಗ ಕ್ರಿಸ್ಟಲ್ ಹಾಗೂ ಶಾಜು ಈ ಮೂವರು ಸೇರಿ ಕ್ಷÄಲ್ಲಕ ಕಾರಣಕ್ಕಾಗಿ ಕಲಹ ನಡೆಸಿ ಮದ್ಯದ ಬಾಟಲಿಯಿಂದ ಅಯ್ಯಪ್ಪ ಅವರ ತಲೆಯ ಭಾಗಕ್ಕೆ ಹಲ್ಲೆ ಮಾಡಿ ಗಾಯಗೊಳಿಸಿದ್ದಾರೆ.
ಅಲ್ಲದೇ ಉಮೇಶ ಎಂಬಾತನ ಕೈಯಿಗೆ ಹಲ್ಲೆ ನಡೆಸಿ ಗಾಯಗೊಳಿಸಿ ಜಾತಿ ನಿಂದನೆ ಮಾಡಿದ್ದಾರೆಂದು ಅಯ್ಯಪ್ಪ ಹಾಗೂ ಉಮೇಶ್ ಸಿದ್ದಾಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳ ವಿರುದ್ಧ ಜಾತಿ ನಿಂದನೆ ಹಾಗೂ ಇನ್ನಿತರ ಮೊಕದ್ದಮೆಗಳನ್ನು ದಾಖಲಿಸಿಕೊಂಡು ಹಲ್ಲೆ ನಡೆಸಿ ಪರಾರಿಯಾಗಿದ್ದ ಕ್ರಿಸ್ಟಲ್ ಹಾಗೂ ಶಾಜುವನ್ನು ಬಂಧಿಸಿರುತ್ತಾರೆ. ಸ್ಟಾö್ಯಂಡ್ಲಿ ತಲೆಮರೆಸಿಕೊಂಡಿದ್ದು, ಈತನ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. ಸ್ಥಳಕ್ಕೆ ಮಡಿಕೇರಿ ವಿಭಾಗದ ಡಿ.ವೈ.ಎಸ್.ಪಿ. ಗಜೇಂದ್ರಪ್ರಸಾದ್ ಹಾಗೂ ಸಿದ್ದಾಪುರ ಠಾಣಾಧಿಕಾರಿ ಮೋಹನ್ರಾಜ್ ಭೇಟಿ ನೀಡಿ ಮಹಜರು ನಡೆಸಿದರು.