ಗೋಣಿಕೊಪ್ಪ ವರದಿ, ಸೆ. ೨೮: ಗೋಣಿಕೊಪ್ಪ ದಸರಾ ಪ್ರಯುಕ್ತ ಅಕ್ಟೋಬರ್ ೩ ರಂದು ಕಾವೇರಿ ಕಲಾ ವೇದಿಕೆಯಲ್ಲಿ ಗೋಣಿಕೊಪ್ಪ ರೋಟರಿ ಕ್ಲಬ್ ವತಿಯಿಂದ ೧-೧೦ನೇ ತರಗತಿ ಮಕ್ಕಳಿಗೆ ಕ್ಲೇ ಮಾಡಲಿಂಗ್, ಸೋಲೋ ನೃತ್ಯ ಆಯೋಜಿಸಲಾಗಿದೆ. ಗರ್ಭಿಣಿಯರಿಗೆ ಆರೋಗ್ಯದ ಬಗ್ಗೆ ಪ್ರಸೂತಿ ತಜ್ಞರಿಂದ ಸಲಹೆ, ಮಾರ್ಗದರ್ಶನ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ರೋಟರಿ ಕ್ಲಬ್ ಅಧ್ಯಕ್ಷೆ ಜೆ.ಕೆ. ಶುಭಾಶಿಣಿ ತಿಳಿಸಿದ್ದಾರೆ.