ಮಡಿಕೇರಿ, ಸೆ. ೨೭: ಮೂರ್ನಾಡು ಹಿಂದೂ ಮಲಯಾಳಿ ಸಂಘದ ವತಿಯಿಂದ ಪ್ರತಿ ವರ್ಷ ನಡೆಸಿಕೊಂಡು ಬರುತ್ತಿರುವ ಓಣಂ ಹಬ್ಬಾಚರಣೆ ಕಾರ್ಯಕ್ರಮ ಈ ಬಾರಿ ಅಕ್ಟೋಬರ್ ೨ರಂದು ಮೂರ್ನಾಡು ಗೌಡ ಸಮಾಜದಲ್ಲಿ ನಡೆಯಲಿದೆ. ಅಂದು ಬೆಳಿಗ್ಗೆ ೭ ಗಂಟೆಯಿAದ ಕಾರ್ಯಕ್ರಮ ಪ್ರಾರಂಭವಾಗಲಿದೆ. ೮ ಗಂಟೆಯಿAದ ೯.೩೦ರವರೆಗೆ ಹೂವಿನ ರಂಗೋಲಿ ಸ್ಪರ್ಧೆ ಏರ್ಪಡಿಸಲಾಗಿದೆ. ಒಂದು ರಂಗೋಲಿಗೆ ಇಬ್ಬರಿಗೆ ಮಾತ್ರ ಪ್ರವೇಶವಿದ್ದು, ಹೂವಿನ ರಂಗೋಲಿಯು ೬x೬ ಅಡಿ ಇರತಕ್ಕದ್ದು. ಬೆಳಿಗ್ಗೆ ೯.೩೦ಕ್ಕೆ ಗೌಡ ಸಮಾಜದಿಂದ ಹಬ್ಬದ ಮೆರವಣಿಗೆ ಹೊರಡಲಿದೆ. ೧೧.೩೦ ಗಂಟೆಗೆ ಸಭಾ ಕಾರ್ಯಕ್ರಮ ನಡೆಯಲಿದೆ.