ಮಡಿಕೇರಿ, ಸೆ. ೨೮: ರೋಟರಿ ಕ್ಲಬ್ ಕೊಯಮತ್ತೂರು ಮಿಡ್‌ಟೌನ್ ಮತ್ತು ರೋಟರಿ ಕ್ಲಬ್ ಮೆಲವತಿ ಮಲೇಷಿಯಾ ಹಾಗೂ ರೋಟರಿ ಕ್ಲಬ್ ಮಡಿಕೇರಿ, ಸ್ವಸ್ಥ ಸಂಸ್ಥೆಯ ಜಂಟಿ ಸಹಯೋಗದಲ್ಲಿ ಉಚಿತ ಕಾಲಿನ ಮಾಪನ ಶಿಬಿರ ಸುಂಟಿಕೊಪ್ಪ ಸ್ವಸ್ಥ ಸಂಸ್ಥೆಯಲ್ಲಿ ನಡೆಯಿತು.

ಸಂಸ್ಥೆಯ ನಿರ್ದೇಶಕಿ ಆರತಿ ಸೋಮಯ್ಯ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಸಮುದಾಯದಲ್ಲಿರುವ ಫಲಾನುಭವಿಗಳ ಕೃತಕ ಉಪಕರಣ ಪಡೆದು ಸದುಪಯೋಗಪಡಿಸಿಕೊಳ್ಳಬೇಕೆಂದು ತಿಳಿಸಿದರು. ಡಾ. ಮೋಹನ್ ಅಪ್ಪಾಜಿ ಅವರು ಕೃತಕ ಕಾಲಿನ ಬಗ್ಗೆ ಸವಿವರವಾಗಿ ಮಾಹಿತಿ ನೀಡಿದರು. ಅತಿಥಿಗಳಾಗಿ ಆಗಮಿಸಿದ್ದ ಸುಂಟಿಕೊಪ್ಪ ಟಾಟಾ ಕಾಫಿ ಸಂಸ್ಥೆಯ ವ್ಯವಸ್ಥಾಪಕ ಗೌತಮ ಮೆನಿ ಅವರು ಮಾತನಾಡಿ, ಇಂತಹ ಶಿಬಿರಗಳು ಸಮಾಜಕ್ಕೆ ಅತಗತ್ಯವಾಗಿದ್ದು, ಫಲಾನುಭವಿಗಳಿಗೆ ಅನುಕೂಲವಾಗುತ್ತದೆಂದು ತಿಳಿಸಿದರು.

ಮೂಳೆ ತಜ್ಞ ಡಾ. ಮುತ್ತಪ್ಪ ಮಾತನಾಡಿ, ಆರೋಗ್ಯ ಅತಿ ಮುಖ್ಯವಾಗಿದ್ದು, ಪ್ರತಿಯೊಬ್ಬರು ಆರೋಗ್ಯವಂತರಾಗಬೇಕು ಆದ ಕಾರಣ ಪ್ರತಿದಿನ ಬೆಳಗ್ಗಿನ ಜಾವದ ಸೂರ್ಯನ ಕಿರಣಕ್ಕೆ ಮೈತಾಗಿಸಬೇಕು ಮತ್ತು ಉತ್ತಮವಾದ ಸಮತೋಲನ ಆಹಾರ, ಶುದ್ಧವಾರ ನೀರು, ಗಾಳಿ ಪಡೆಯುವುದರಿಂದ ತಮ್ಮ ಆರೋಗ್ಯವನ್ನು ಕಾಪಾಡಬಹುದೆಂದು ತಿಳಿಸಿದರು.

ಮಡಿಕೇರಿ ರೋಟರಿ ಕಾರ್ಯದರ್ಶಿ ಸುಜಯ್ ನಾಣಯ್ಯ ಅವರು ಮಾತನಾಡಿ, ಶಿಬಿರ ಉದ್ದೇಶದ ಬಗ್ಗೆ ಸವಿವರವಾಗಿ ಮಾಹಿತಿ ನೀಡಿದರು. ಈ ಕಾರ್ಯದಲ್ಲಿ ೨೦ಕ್ಕೂ ಹೆಚ್ಚು ಫಲಾನುಭವಿಗಳು ಭಾಗವಹಿಸಿ ಕೃತÀಕ ಕಾಲಿನ ಮಾಪನ ಶಿಬಿರವನ್ನು ಸದುಪಯೋಗಪಡಿಸಿಕೊಂಡರು. ಈ ಕಾರ್ಯಕ್ರಮವನ್ನು ಶಿಕ್ಷಕಿ ಮಂಜುಳ ಅವರು ನಿರೂಪಿಸಿದರು. ರೇಖಾ ಅವರು ಪ್ರಾರ್ಥನೆ ನೆರವೇರಿಸಿದರು. ಲತಾ ಪಿ. ಅವರು ಸ್ವಾಗತಿಸಿದರು.