ಮಡಿಕೇರಿ, ಸೆ. ೨೮: ಮಧ್ಯಮ, ಸಣ್ಣ ಹಾಗೂ ಅತಿ ಸಣ್ಣ ಉದ್ದಿಮೆದಾರರು ಉದ್ಯಮ್ ನೋಂದಣಿ ಮಾಡಿಸಿಕೊಳ್ಳುವ ಸಲುವಾಗಿ ಕೇಂದ್ರ ಸರಕಾರದ ಮಧ್ಯಮ, ಸಣ್ಣ ಹಾಗೂ ಅತಿ ಸಣ್ಣ ಉದ್ದಿಮೆಗಳ (ಎಮ್.ಎಸ್.ಎಮ್.ಇ) ಮಂತ್ರಾಲಯವು ಹಲವು ಜಿಲ್ಲೆಗಳಲ್ಲಿ ಉದ್ಯಮ್ ನೋಂದಣಿ ಅಭಿಯಾನ ನಡೆಸುತ್ತಿದ್ದು, ಕೊಡಗು ಜಿಲ್ಲೆಯಲ್ಲಿಯೂ ಉದ್ದಿಮೆದಾರರು ನೋಂದಣಿ ಮಾಡಿಸಿಕೊಳ್ಳುವ ಸಲುವಾಗಿ ಇತ್ತೀಚೆಗಷ್ಟೆ ನೋಂದಣಿ ಅಭಿಯಾನ ಏರ್ಪಡಿಸಲಾಗಿತ್ತು. ಅಭಿಯಾನದಲ್ಲಿ ಜಿಲ್ಲೆಯ ಕೆಲವು ಉದ್ದಿಮೆದಾರರು ಭಾಗಿಯಾಗಿ ತಮ್ಮ ಉದ್ದಿಮೆಗಳನ್ನು ನೋಂದಣಿ ಮಾಡಿಕೊಂಡರು. ಎಮ್.ಎಸ್.ಎಮ್.ಇ ಅಭಿವೃದ್ಧಿ ಸಂಸ್ಥೆ, ಮಂಗಳೂರು ಶಾಖೆಯ ಸಹಭಾಗಿತ್ವದಲ್ಲಿ ಮಡಿಕೇರಿಯ ಜಿಲ್ಲಾ ಕೈಗಾರಿಕಾ ಕೇಂದ್ರದ ಕಚೇರಿಯಲ್ಲಿ ಅಭಿಯಾನ ಆಯೋಜಿಸಲಾಗಿತ್ತು.
ಜಿಲ್ಲೆಯಲ್ಲಿನ ಉದ್ದಿಮೆದಾರರು ಉದ್ಯಮ್ ನೋಂದಣಿಯನ್ನು ಸುಲಭವಾಗಿ ಮಾಡಿಕೊಳ್ಳಬಹುದಾಗಿದೆ. ನೂತನ ಉದ್ಯಮ ಸೇರಿದಂತೆ ಈಗಾಗಲೇ ಚಾಲ್ತಿಯಲ್ಲಿರುವ ಉದ್ದಿಮೆಗಳನ್ನು ಸರಕಾರದ ಅಧಿಕೃತ ಮಡಿಕೇರಿ, ಸೆ. ೨೮: ಮಧ್ಯಮ, ಸಣ್ಣ ಹಾಗೂ ಅತಿ ಸಣ್ಣ ಉದ್ದಿಮೆದಾರರು ಉದ್ಯಮ್ ನೋಂದಣಿ ಮಾಡಿಸಿಕೊಳ್ಳುವ ಸಲುವಾಗಿ ಕೇಂದ್ರ ಸರಕಾರದ ಮಧ್ಯಮ, ಸಣ್ಣ ಹಾಗೂ ಅತಿ ಸಣ್ಣ ಉದ್ದಿಮೆಗಳ (ಎಮ್.ಎಸ್.ಎಮ್.ಇ) ಮಂತ್ರಾಲಯವು ಹಲವು ಜಿಲ್ಲೆಗಳಲ್ಲಿ ಉದ್ಯಮ್ ನೋಂದಣಿ ಅಭಿಯಾನ ನಡೆಸುತ್ತಿದ್ದು, ಕೊಡಗು ಜಿಲ್ಲೆಯಲ್ಲಿಯೂ ಉದ್ದಿಮೆದಾರರು ನೋಂದಣಿ ಮಾಡಿಸಿಕೊಳ್ಳುವ ಸಲುವಾಗಿ ಇತ್ತೀಚೆಗಷ್ಟೆ ನೋಂದಣಿ ಅಭಿಯಾನ ಏರ್ಪಡಿಸಲಾಗಿತ್ತು. ಅಭಿಯಾನದಲ್ಲಿ ಜಿಲ್ಲೆಯ ಕೆಲವು ಉದ್ದಿಮೆದಾರರು ಭಾಗಿಯಾಗಿ ತಮ್ಮ ಉದ್ದಿಮೆಗಳನ್ನು ನೋಂದಣಿ ಮಾಡಿಕೊಂಡರು. ಎಮ್.ಎಸ್.ಎಮ್.ಇ ಅಭಿವೃದ್ಧಿ ಸಂಸ್ಥೆ, ಮಂಗಳೂರು ಶಾಖೆಯ ಸಹಭಾಗಿತ್ವದಲ್ಲಿ ಮಡಿಕೇರಿಯ ಜಿಲ್ಲಾ ಕೈಗಾರಿಕಾ ಕೇಂದ್ರದ ಕಚೇರಿಯಲ್ಲಿ ಅಭಿಯಾನ ಆಯೋಜಿಸಲಾಗಿತ್ತು.
ಜಿಲ್ಲೆಯಲ್ಲಿನ ಉದ್ದಿಮೆದಾರರು ಉದ್ಯಮ್ ನೋಂದಣಿಯನ್ನು ಸುಲಭವಾಗಿ ಮಾಡಿಕೊಳ್ಳಬಹುದಾಗಿದೆ. ನೂತನ ಉದ್ಯಮ ಸೇರಿದಂತೆ ಈಗಾಗಲೇ ಚಾಲ್ತಿಯಲ್ಲಿರುವ ಉದ್ದಿಮೆಗಳನ್ನು ಸರಕಾರದ ಅಧಿಕೃತ ವೆಬ್ಸೈಟ್ hಣಣಠಿs://uಜಥಿಚಿmಡಿegisಣಡಿಚಿಣioಟಿ.gov.iಟಿ/ಉoveಡಿಟಿmeಟಿಣ-Iಟಿಜiಚಿ/ಒiಟಿisಣಡಿಥಿ-ಒSಒಇ-ಡಿegisಣಡಿಚಿಣioಟಿ.hಣm ನಲ್ಲಿ ಉದ್ಯಮ ನೋಂದಣಿ ಮಾಡಿಕೊಳ್ಳಬಹುದು. ಈ ವೆಬ್ಸೈಟ್ ಮೂಲಕ ನೋಂದಣಿ ಮಾಡಲು ಕಷ್ಟಸಾಧ್ಯವಾದಲ್ಲಿ ಅಥವಾ ಹೆಚ್ಚಿನ ಮಾಹಿತಿಗಾಗಿ sumಚಿಟಿ೨೪೧೧@hoಣmಚಿiಟ.ಛಿom ಮೇಲ್ಗೆ ಬರೆಯಬಹುದಾಗಿದೆ.
ವ್ಯಾಪಾರ ಪರವಾನಗಿ ಅವಶ್ಯಕತೆಯಿಲ್ಲ
ಪ್ರಸ್ತುತ ಹೊಸ ಎಮ್.ಎಸ್.ಎಮ್.ಇ ಉದ್ದಿಮೆಗಳನ್ನು ಸ್ಥಾಪಿಸುವುದಾಗಲಿ, ಈಗಾಗಲೇ ಇರುವ ಉದ್ದಿಮೆಗಳನ್ನು ನೋಂದಾಯಿಸುವುದಾಗಲಿ ಎಲ್ಲವು ಉಚಿತ ಹಾಗೂ ಶಾಶ್ವತ ಉದ್ಯಮ್ ನೋಂದಣಿ ಆನ್ಲೈನ್ ಪೋರ್ಟಲ್ ಮೂಲಕವೆ ನಡೆಯುತ್ತಿದೆ. ನವ ಉದ್ದಿಮೆಗಳು ಸ್ಥಳೀಯ ಸಂಸ್ಥೆಗಳಿAದ ವ್ಯಾಪಾರ ಪರವಾನಗಿ ಪಡೆಯುವುದು ಹಾಗೂ ಈಗಾಗಲೇ ಸ್ಥಾಪಿತವಾಗಿ ಕಾರ್ಯನಿರ್ವಹಿಸುತ್ತಿರುವ ಉದ್ದಿಮೆಗಳು ತಮ್ಮ ವ್ಯಾಪಾರ ಪರವಾನಗಿಯನ್ನು ವರ್ಷಂಪ್ರತಿ ನವೀಕರಣ ಮಾಡುವ ಅವಶ್ಯಕತೆಯೇ ಇಲ್ಲವೆಂಬುದು ಕರ್ನಾಟಕ ಕಾಯ್ದೆ ಸಂಖ್ಯೆ.೪೨ ರಲ್ಲಿ ಉಲ್ಲೇಖವಾಗಿದೆ.
೨೦೧೫ರ ಡಿಸೆಂಬರ್ ೨೩ ರಂದು ರಾಜ್ಯ ಸರಕಾರವು ‘ಕರ್ನಾಟಕ ಕಾಯ್ದೆ ಸಂಖ್ಯೆ.೪೨’ ಅಡಿಯಲ್ಲಿ ‘ಕರ್ನಾಟಕ ಮುನಿಸಿಪಲ್ ಕಾರ್ಪೋರೇಷನ್ಸ್ ಹಾಗೂ ಇತರ ಕಾನೂನೂ ತಿದ್ದುಪಡಿ ಕಾಯ್ದೆ, ೨೦೧೫’ ರ ಮೂಲಕ ಮುನಿಸಿಪಲ್ ಕಾರ್ಪೊರೇಷನ್ಸ್ ಕಾಯ್ದೆಯಲ್ಲಿ ಬದಲಾವಣೆ ತಂದಿದೆ. ಆದೇಶ ಹೊರಡಿಸಿದ ದಿನದಿಂದಲೇ: ಅಂದರೆ - ೨೦೧೫ ರ ಡಿಸೆಂಬರ್ ೨೩ ರಿಂದಲೇ ಜಾರಿ ಬರಲಿರುವುದಾಗಿ ಆದೇಶದಲ್ಲಿ ಉಲ್ಲೇಖಿಸಲಾಗಿದೆ.
ಸೇವಾ ಉದ್ಯಮಗಳಿಗೂ ಅನ್ವಯ
ಉದ್ಯಮ್ ನೋಂದಣಿ ಕೇವಲ ಉತ್ಪಾದನಾ ವಲಯಕ್ಕೆ ಮಾತ್ರ ಸೀಮಿತವಾಗಿಲ್ಲ. ಬದಲಿಗೆ ಸೇವಾ ವಲಯಗಳಿಗೂ ಅನ್ವಯವಾಗುತ್ತದೆ. ಆತಿಥ್ಯ ವಲಯವಾಗಿರುವ ಹೋಮ್ಸ್ಟೇಗಳು ಸಹ ಉದ್ಯಮ್ ನೋಂದಣಿ ಮಾಡಿಕೊಳ್ಳಬಹುದಾಗಿದೆ ಎಂದು ಮಂಗಳೂರು ಶಾಖಾ ಎಮ್.ಎಸ್.ಎಮ್.ಇ ಅಭಿವೃದ್ಧಿ ಕಚೇರಿಯ ಸಹಾಯಕ ನಿರ್ದೇಶಕಿ ಸುಮನ್ ರಾಜು ಅವರು ಮಾಹಿತಿ ನೀಡಿದ್ದಾರೆ.