ಚೆಯ್ಯಂಡಾಣೆ, ಸೆ. ೨೫: ಕಕ್ಕಬ್ಬೆಯ ಭಾರತ ರತ್ನ ಡಾಕ್ಟರ್ ಬಿ.ಆರ್.ಅಂಬೇಡ್ಕರ್ ವಸತಿ ಶಾಲೆಯಲ್ಲಿ ಪೋಷಕರ ಸಭೆ ನಡೆಯಿತು.

ಅಧ್ಯಕ್ಷತೆಯನ್ನು ಮುಖ್ಯ ಶಿಕ್ಷಕಿ ಸುಮಯ್ಯ ಕೆ.ಎಂ. ವಹಿಸಿ ಮಾತನಾಡಿ ಮುಖ್ಯವಾಗಿ ವೈಯಕ್ತಿಕ ಶುಚಿತ್ವ ಆರೋಗ್ಯ ರಕ್ಷಣೆ ಆಧಾರ್ ಕಾರ್ಡ್, ಜಾತಿ ಮತ್ತು ಆದಾಯ ದೃಢೀಕರಣ ಪತ್ರ ಇತ್ಯಾದಿ ಮಾಡಲು ಪೋಷಕರ ಸಹಕಾರ ಕೋರಲಾಯಿತು. ರಜಾ ದಿನಗಳಲ್ಲಿ ಪೋಷಕರ ಅರಿವಿಗೆ ಬಾರದೆ ವಿದ್ಯಾರ್ಥಿಗಳು ಹೊಳೆ, ತೋಡು ಮುಂತಾದ ಅಪಾಯಕಾರಿ ಸ್ಥಳಗಳಲ್ಲಿ ಆಟವಾಡದಂತೆ ಎಚ್ಚರವಹಿಸಲು ಸೂಚಿಸಲಾಯಿತು.

ತಾಲೂಕು ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಛದ್ಮವೇಷ, ಚರ್ಚೆಗಳಲ್ಲಿ ಭಾಗವಹಿಸಿ ಬಹುಮಾನ ಪಡೆದ ವಿದ್ಯಾರ್ಥಿ ನಿತಿನ್ ಸೃಜನಶೀಲತೆಯನ್ನು ಸಮಾಜ ಕಲ್ಯಾಣ ಇಲಾಖೆ ಅಧಿಕೃತ ಟ್ವಿಟರ್ ಖಾತೆಯಲ್ಲಿ ಪ್ರಶಂಶಿಸಿರುವುದನ್ನು ಸಭೆಯಲ್ಲಿ ತಿಳಿಸಿ ಅಭಿನಂದಿಸಿ ಬಹುಮಾನ ವಿತರಿಸಲಾಯಿತು. ಪ್ರಾರ್ಥನೆಯನ್ನು ಶಾಲಾ ವಿದ್ಯಾರ್ಥಿಗಳು ನೆರವೇರಿಸಿ, ಸಹಶಿಕ್ಷಕಿ ಕವಿತಾ ಸ್ವಾಗತಿಸಿ, ಅಶ್ವಿನಿ ವಂದಿಸಿದರು.