ಮಡಿಕೇರಿ, ಸೆ. ೨೬: ಪ್ರಾಕೃತಿಕ ವಿಕೋಪದಿಂದ ಉಂಟಾದ ದುರಂತಗಳು ಇದಾದ ನಂತರದಲ್ಲಿ ವಕ್ಕರಿಸಿದ ಕೊರೊನಾ ಎಂಬ ಹೆಮ್ಮಾರಿಯ ಕಾರಣದಿಂದಾಗಿ ಕೊಡಗಿನಲ್ಲಿ ಕಳೆದ ಮೂರು - ನಾಲ್ಕು ವರ್ಷಗಳಿಂದ ದಸರಾ ಸಂದರ್ಭದ ಹಬ್ಬದ ಕಳೆ ಮರೆಯಾಗಿ ಹೋಗಿತ್ತು. ೨೦೧೮ರಲ್ಲಿ ಕೊಡಗು ಕಂಡು ಕೇಳರಿಯದ ಪ್ರಾಕೃತಿಕ ವೈಪರೀತ್ಯ ಎದುರಿಸಿತ್ತು. ಮರು ವರ್ಷ ೨೦೧೯ರಲ್ಲೂ ಮತ್ತೆ ದುರಂತ ಘಟಿಸಿತ್ತು. ಈ ಕಾರಣದಿಂದಾಗಿ ಆಗಿನ ಸನ್ನಿವೇಶದಲ್ಲಿ ಎಲ್ಲರೂ ಅದ್ಧೂರಿಯ ಆಚರಣೆಯ ದಸರಾ ಉತ್ಸವದ ಬದಲಾಗಿ ಸರಳ ಕಾರ್ಯಕ್ರಮ ನಡೆಸಲು ಅಭಿಪ್ರಾಯಪಟ್ಟಿದ್ದರು.

ಇದರಿಂದಾಗಿ ಆ ವರ್ಷಗಳಲ್ಲಿ ಸರಳ ರೀತಿಯಲ್ಲಿ ಮಾತ್ರ ದಸರಾ ನಡೆದಿತ್ತು. ಕೇವಲ ಸಾಂಪ್ರದಾಯಿಕತೆಗಷ್ಟೇ ಪ್ರಾತಿನಿಧ್ಯ ನೀಡಲಾಗಿತ್ತು. ಆದರೆ ೨೦೨೦ ಹಾಗೂ ೨೦೨೧ರಲ್ಲಿ ಇಡೀ ಜಗತ್ತನ್ನು ತಲ್ಲಣಗೊಳಿಸಿದ ಕೊರೊನಾ ಮತ್ತೆ ಸಂಭ್ರಮಕ್ಕೆ ತಡೆಯೊಡ್ಡಿತ್ತು. ಲಾಕ್‌ಡೌನ್ ಸೇರಿದಂತೆ ಹತ್ತಾರು ನಿರ್ಬಂಧಗಳಿAದಾಗಿ ಈ ಎರಡು ವರ್ಷಗಳಲ್ಲೂ ದಸರಾದ ವೈಭವ ಕೊಡಗಿನಲ್ಲಿ ಅನಿವಾರ್ಯವಾಗಿ ಮರೆಯಾಗಿತ್ತು.

ಇದೀಗ ಮೆಲ್ಲಮೆಲ್ಲನೆ ಪರಿಸ್ಥಿತಿ ತಿಳಿಯಾಗಿದ್ದು, ೨೦೨೨ರಲ್ಲಿ ದಸರಾದ ವೈಭವ ಮರುಕಳಿಸುತ್ತಿದೆ. ತಾ. ೨೬ ರಿಂದ ನವರಾತ್ರಿ ಆರಂಭಗೊAಡಿದ್ದು, ಮಡಿಕೇರಿ ನಗರದಲ್ಲಿ ಐತಿಹಾಸಿಕ ಹಿನ್ನೆಲೆಯ ಕರಗ ದೇವತೆಗಳ ನಗರ ಸಂಚಾರ ಪ್ರಾರಂಭದೊAದಿಗೆ ಉತ್ಸವ ಆರಂಭಗೊAಡಿದೆ. ಅತ್ತ ಗೋಣಿಕೊಪ್ಪಲುವಿನಲ್ಲೂ ಶ್ರೀ ಚಾಮುಂಡೇಶ್ವರಿ ದೇವಿಯ ಪ್ರತಿಷ್ಠಾಪನೆ - ಪೂಜೆಯೊಂದಿಗೆ ದಸರಾಕ್ಕೆ ಚಾಲನೆ ದೊರೆತಿದೆ. ಮುಂದಿನ ೯ ದಿನಗಳ ಕಾಲ ಮಡಿಕೇರಿ ಹಾಗೂ ಗೋಣಿಕೊಪ್ಪಲುವಿನಲ್ಲಿ ಒಂದಷ್ಟು ಹಬ್ಬದ ಕಳೆ ಕಂಡು ಬರಲಿದೆ. ಎರಡೂ ಕಡೆಗಳಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳು ಈ ದಿನಗಳಲ್ಲಿ ನಡೆಯಲಿವೆ.

ಅಕ್ಟೋಬರ್ ೫ರ ವಿಜಯದಶಮಿಯ ದಿನದಂದು ಎರಡೂ ಕಡೆಗಳಲ್ಲಿ ಮಂಟಪಗಳ ಶೋಭಾಯಾತ್ರೆಯೊಂದಿಗೆ ಈ ಬಾರಿ ಕಾರ್ಯಕ್ರಮಕ್ಕೆ ತೆರೆಬೀಳಲಿದೆ. ಈ ಉತ್ಸವದ ಯಶಸ್ಸಿಗೆ ಆಯಾ ಮಂಟಪ ಸಮಿತಿಯವರು, ದಸರಾ ಸಮಿತಿ ಪದಾಧಿಕಾರಿಗಳು, ಜಿಲ್ಲಾಡಳಿತ, ಪೊಲೀಸ್ ಇಲಾಖೆ, ಜನಪ್ರತಿನಿಧಿಗಳು ಕೈಜೋಡಿಸಿದ್ದಾರೆ. ಕೊಡಗಿಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರೂ ಆಗಮಿಸಲಿದ್ದು, ಈಗಾಗಲೇ ಹಬ್ಬದ ಕಳೆ ಆರಂಭಗೊAಡಿದೆ. ಆದರೆ ಆಗಾಗ್ಗೆ ಸುರಿಯುವ ವರುಣನ ಅವಕೃಪೆ ಮಾತ್ರ ಒಂದಷ್ಟು ಆತಂಕ ಮುಂದುವರಿಸಿದೆ. ವರುಣ ಕೃಪೆ ತೋರಿದರೆ ಹಿಂದಿನ ವೈಭವ ಮತ್ತೆ ರಾರಾಜಿಸಲಿವೆ.