ಮಡಿಕೇರಿ, ಸೆ. ೨೬: ಪ್ರಸಕ್ತ (೨೦೨೨-೨೩) ಜುಲೈ ಆವೃತ್ತಿಯ ಸ್ನಾತಕ (ಬಿಎ, ಬಿ.ಕಾಂ, ಬಿಲಿಬ್‌ಐಎಸ್‌ಸಿ, ಬಿಬಿಎ, ಬಿಎಸ್ಸಿ, ಬಿಸಿಎ), ಸ್ನಾತಕೋತ್ತರ (ಎಂಎ, ಎಂಕಾA, ಎಂಬಿಎ, ಎಂಲಿಬ್‌ಐಎಸ್‌ಸಿ, ಎಂಎಸ್ಸಿ) ಹಾಗೂ ಪಿಜಿ, ಡಿಪ್ಲೊಮಾ ಮತ್ತು ಸರ್ಟಿಫಿಕೇಟ್ ಕೋರ್ಸ್ಗಳಿಗೆ ಶೈಕ್ಷಣಿಕ ಸಾಲಿನ ಪ್ರವೇಶಾತಿಯು ಈಗಾಗಲೇ ಆರಂಭವಾಗಿದೆ.

ಎರಡು ಶೈಕ್ಷಣಿಕ ಕಾರ್ಯಕ್ರಮಗಳನ್ನು (ಕೋರ್ಸ್ಗಳನ್ನು) ಏಕಕಾಲದಲ್ಲಿ ಓದಲು ಅವಕಾಶವಿದೆ. ಒಂದು ಭೌತಿಕ ಕ್ರಮದಲ್ಲಿ ಮತ್ತೊಂದು ದೂರಶಿಕ್ಷಣ ಕ್ರಮದಲ್ಲ್ಲಿ ಇದರ ಸದುಪಯೋಗವನ್ನು ವಿದ್ಯಾರ್ಥಿಗಳು ಪಡೆದುಕೊಳ್ಳಬಹುದು.

ಈಗಾಗಲೇ ಪ್ರಥಮ/ ದ್ವಿತೀಯ ಸಾಲಿನ ಯುಜಿ / ಪಿಜಿ ಶಿಕ್ಷಣ ಕ್ರಮ ವನ್ನು ಪೂರೈಸಿ, ನಾನಾ ಕಾರಣಗಳಿಂದ ವಿದ್ಯಾಭ್ಯಾಸವನ್ನು ಪೂರ್ಣಗೊಳಿಸಿ ಕೊಂಡಿಲ್ಲದ ವಿದ್ಯಾರ್ಥಿಗಳು ವಿವಿ ನಿಲಯದ ನಿಯಮಗಳನುಸಾರ ದ್ವಿತೀಯ/ ತೃತೀಯ ಯುಜಿ/ ಪಿಜಿ ಶಿಕ್ಷಣಗಳಿಗೆ ನೇರ ಪ್ರವೇಶಾತಿ ಪಡೆಯಬಹುದು.

ಪ್ರವೇಶಾತಿಯು ಆನ್‌ಲೈನ್ ಮೂಲಕ ದಂಡ ಶುಲ್ಕವಿಲ್ಲದೆ ಅಕ್ಟೋಬರ್, ೩೧ ರವರೆಗೆ ವಿಸ್ತರಿಸಲಾಗಿದೆ ಹಾಗೂ ಪ್ರವೇಶಾತಿ ಪಡೆದ ವಿದ್ಯಾರ್ಥಿಗಳಿಗೆ ಪರೀಕ್ಷಾ ಕೇಂದ್ರವನ್ನು ಮಡಿಕೇರಿಯಲ್ಲಿ ನೀಡಲಾಗುವುದು ಎಂದು ಕರಾಮುವಿ ಮಡಿಕೇರಿ ಪ್ರಾದೇಶಿಕ ಕೇಂದ್ರದ ನಿರ್ದೇಶಕಿ ಸ್ಮಿತಾ ಸುಬ್ಬಯ್ಯ ಅವರು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗೆ ಕರಾಮುವಿ, ಪ್ರಾದೇಶಿಕ ಕೇಂದ್ರ, ಮಡಿಕೇರಿ ಸರಕಾರಿ ಜೂನಿಯರ್ ಕಾಲೇಜು ಆವರಣ ಹಳೆ ಪ್ರಾಥಮಿಕ ಶಾಲಾ ಕಟ್ಟಡ ಮಡಿಕೇರಿ-೫೭೧೨೦೧. ದೂ.೦೮೨೭೨-೨೦೧೧೪೭/ ೭೪೦೬೦೭೫೨೧೨/ ೭೬೧೮೭೬೩೬೫೪, ಞsoumಚಿಜiಞeಡಿi೨೩@gmಚಿiಟ.ಛಿom ಇ-ಮೇಲ್ ತಿತಿತಿ.ಞsoumಥಿ suಡಿu.ಚಿಛಿ. iಟಿ , ಣeಛಿhsuಠಿoಡಿಣ@ಞsouಠಿoಡಿಣಚಿಟ.ಛಿom ನ್ನು ಸಂಪರ್ಕಿಸಬಹುದು.