ಮಡಿಕೇರಿ, ಸೆ. ೨೫: ಕೊಡಗು ಜಿಲ್ಲಾ ವಾಣಿಜ್ಯೋದ್ಯಮಿಗಳ ವಿವಿಧೋದ್ದೇಶ ಸಹಕಾರ ಸಂಘಕ್ಕೆ ಪ್ರಸಕ್ತ ಸಾಲಿನಲ್ಲಿ ರೂ. ೪ ಲಕ್ಷ ೧೭ ಸಾವಿರದ ೭೬೫ ಲಾಭವಾಗಿದೆ ಎಂದು ಸಂಘದ ಅಧ್ಯಕ್ಷ ಕೆ.ಕೆ. ಶ್ರೀನಿವಾಸ್ ಅವರು ಮಾಹಿತಿ ನೀಡಿದರು. ಮಡಿಕೇರಿ ಕೊಹಿನೂರು ರಸ್ತೆಯಲ್ಲಿ ರುವ ಸಂಘದ ಕಟ್ಟಡದ ಸಭಾಂಗಣ ದಲ್ಲಿ ನಡೆದ ೨೦೨೧-೨೨ ನೇ ಸಾಲಿನ ೨೧ನೇ ವರ್ಷದ ಮಹಾಸಭೆಯಲ್ಲಿ ಅವರು ಮಾಹಿತಿ ನೀಡಿದರು.
ಸಂಘದಲ್ಲಿ ಒಟ್ಟು ೧,೮೬೩ ಸದಸ್ಯರಿದ್ದು, ಈ ಪೈಕಿ ೭೩೪ ಸದಸ್ಯರು ಪೂರ್ಣ ಮುಖ ಬೆಲೆ ಶೆೆÃರು ಮೊತ್ತವನ್ನು ಪಾವತಿಸಿದ್ದಾರೆ. ಸಂಘದ ಸದಸ್ಯರಿಂದ ಒಟ್ಟು ರೂ. ೭೪,೭೫,೫೦೦ ಪಾಲು ಬಂಡವಾಳ ಸಂಗ್ರಹವಾಗಿದೆ. ಸಂಘದಲ್ಲಿ ಅಡಮಾನ ಸಾಲ, ಜಾಮೀನು ಸಾಲ, ಆಭರಣ ಸಾಲ, ಪಿಗ್ಮಿ ಓವರ್‌ಡ್ರಾಫ್ಟ್ ಸಾಲ, ಮತ್ತು ಸಿಬ್ಬಂದಿಗಳಿಗೆ ಆಸಾಮಿ ಸಾಲ ನೀಡಲಾಗಿದೆ. ೨೦೨೨ರ ಮಾರ್ಚ್ ೩೧ರ ಅಂತ್ಯಕ್ಕೆ ವಿವಿಧ ಠೇವಣಾತಿಗಳಿಂದ ರೂ. ೨,೨೭,೯೪,೩೪೨ ಠೇವಣಾತಿ ಸಂಗ್ರಹವಾಗಿದೆ ಹಾಗೂ ರೂ. ೭,೪೦,೬೩,೦೦೦ ವಿವಿಧ ಸಾಲಗಳ ರೂಪದಲ್ಲಿ ನೀಡಲಾಗಿದೆ.
೨೦೧೪-೧೫ನೇ ಸಾಲಿನಲ್ಲಿ ಇಲಾಖಾ ಅನುಮತಿ ಪಡೆದು ಮಡಿಕೇರಿ ನಗರದ ಕೊಹಿನೂರು ರಸ್ತೆಯಲ್ಲಿ ಸಂಘಕ್ಕೆ ಒಂದು ಸಂಘದ ಸ್ವಂತ ಕಟ್ಟಡವನ್ನು ಖರೀದಿಸಲಾಗಿದೆ. ಹಾಗೂ ೨೦೧೬-೧೭ನೇ ಸಾಲಿನಲ್ಲಿ ಸಹಕಾರ ಸಂಘಗಳ ಜಂಟಿ ನಿಬಂಧಕರ ಅನುಮತಿ ಪಡೆದು ಸಂಘದ ಸದಸ್ಯರ ಸಹಕಾರದೊಂದಿಗೆ ಈ ಹಿಂದೆ ಇದ್ದ ಕಟ್ಟಡದ ಮೇಲೆ ಇನ್ನೊಂದು ಅಂತಸ್ತನ್ನು ನಿರ್ಮಾಣ ಮಾಡಲಾಗಿದೆ.
ಸಂಘದಲ್ಲಿ ೨೧ ಜನ ಪಿಗ್ಮಿ ಸಂಗ್ರಹಗಾರರು ಜಿಲ್ಲೆಯ ಹಲವು ಕಡೆಗಳಲ್ಲಿ ದಿನನಿತ್ಯ ಪಿಗ್ಮಿ ಠೇವಣಿ ಸಂಗ್ರಹಿಸುತ್ತಿದ್ದಾರೆ. ಪ್ರಸ್ತುತ ಸಂಘದ ಸ್ವಂತ ಕಟ್ಟಡವನ್ನು ಸಭೆ ಸಮಾ ರಂಭಗಳಿಗೆ ಬಾಡಿಗೆಗೆ ನೀಡಲಾಗುತ್ತಿದೆ. ೨೦೦೭ ರಲ್ಲಿ ಕುಶಾಲನಗರದಲ್ಲಿ ಹಾಗೂ ೨೦೧೨ರಲ್ಲಿ ಸಿದ್ದಾಪುರದಲ್ಲಿ ಸಂಘದ ಶಾಖೆಗಳನ್ನು ಪ್ರಾರಂಭಿಸಿದ್ದು, ವ್ಯವಹಾರ ಚೆನ್ನಾಗಿ ನಡೆಯುತ್ತಿರು ವುದಾಗಿ ಸಭೆಗೆ ಮಾಹಿತಿ ನೀಡಿದರು.
ಸಂಘದ ಸ್ಥಾಪಕ ಅಧ್ಯಕ್ಷ ಜಿ. ರಾಜೇಂದ್ರ ಅವರು ಮಾತನಾಡಿ, ಬೃಹತ್ ಮೊತ್ತದ ಸಾಲವೂ ಸೇರಿದಂತೆ ವಸೂಲಿ ಬಾಕಿಯಿರುವ ಬಗ್ಗೆ ಆತಂಕ ವ್ಯಕ್ತಪಡಿಸಿದರು. ಬಡ್ಡಿ ಸಹಿತ ಈ ಸಾಲದ ಮರುಪಾವತಿ ಕಾಲಕಾಲಕ್ಕೆ ಮಾಡುವಲ್ಲಿ ಆಡಳಿತ ಮಂಡಳಿ ಕಾರ್ಯಪ್ರವೃತ್ತರಾಗಬೇಕೆಂದರು. ಈಗಾಗಲೇ ಶೇ. ೩೮ರಷ್ಟು ಸಾಲ ವಸೂಲಾತಿ ಮಾಡಿರುವುದು ಗಮ ನಾರ್ಹವಾಗಿದೆ ಎಂದು ಪ್ರಸ್ತಾಪಿಸಿದರು. ಸಂಘದ ಸದಸ್ಯ ಜಯಕುಮಾರ್ ಅವರು ಮಾತನಾಡಿ, ಸಂಘದಿAದ ಸದಸ್ಯರಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡುವಂತೆ ಒತ್ತಾಯಿಸಿದರು. ಇದಕ್ಕೆ ಉತ್ತರಿಸಿದ ಸಂಘದ ಮಾಜಿ ಅಧ್ಯಕ್ಷ ಕೆ.ಎಂ ಗಣೇಶ್, ಇದು ರಾಷ್ಟಿçÃಕೃತ ಬ್ಯಾಂಕ್ ಅಲ್ಲ. ಸಂಘದ ಉಳಿವಿಗೆ ಬಡ್ಡಿ ಕಡಿಮೆ ಮಾಡುವುದು ಅಸಾಧ್ಯ ಎಂದರು.
ಸಾಲ ಪಡೆದವರಿಗೆ ಮರುಪಾವತಿ ಸಂದರ್ಭ ಬಡ್ಡಿ ರಿಯಾಯಿತಿ ದರ ಅತಿ ಹೆಚ್ಚಿದೆ. ಇದರಿಂದ ಸಂಘಕ್ಕೆ ನಷ್ಟ ಉಂಟಾಗುವ ಸಾಧ್ಯತೆ ಇದೆ. ಈ ರಿಯಾಯಿತಿಯನ್ನು ಕಡಿಮೆ ಮಾಡಬೇಕೆಂದು ರಾಜೇಂದ್ರ ಹಾಗೂ ಜಯಕುಮಾರ್ ಅವರುಗಳು ಅಭಿಪ್ರಾಯಿಸಿದರು.
ಸಂಘದ ಸದಸ್ಯೆ ಮೋಂತಿ ಗಣೇಶ್ ಅವರು ಮಾತನಾಡಿ, ವರ್ತಕರಲ್ಲದ ಕೆಲವರಿಗೆ ಸದಸ್ಯತ್ವ ನೀಡಿದ್ದಾಗಿ ಆಕ್ಷೇಪಿಸಿದರು. ಇದಕ್ಕೆ ಆಡಳಿತ ಮಂಡಳಿ ಸಮಜಾಯಿಷಿಕೆ ನೀಡಿತು.
ಪ್ರಸ್ತುತ ೧ ಶೇರಿಗಿರುವ ರೂ. ೫ ಸಾವಿರವನ್ನು ರೂ. ೨.೫ ಸಾವಿರಕ್ಕೆ ಇಳಿಸುವಂತೆ ಸಂಘದ ಸದಸ್ಯರ ಒತ್ತಾಯದ ಮೇರೆಗೆ ಬೈಲಾ ತಿದ್ದುಪಡಿ ಮಾಡಲಾಗಿದೆ.
ಪ್ರಸ್ತುತ ರೂ. ೫ ಸಾವಿರ ನೀಡಿರುವವರಿಗೆ ೨ ಶೇರು ನೀಡುವುದಾಗಿ ಈ ಸಂದರ್ಭ ಅಧ್ಯಕ್ಷ ಶ್ರೀನಿವಾಸ್ ಅವರು ಮಾಹಿತಿಯಿತ್ತರು.
ಸಂಘದ ಸದಸ್ಯರಾದ ಎಂ.ಎ ವಸಂತ್, ರವಿ ಉತ್ತಪ್ಪ, ನವೀನ್ ಅಂಬೇಕಲ್, ಧನಂಜಯ ಸೇರಿದಂತೆ ಇತರರು ಮಾತನಾಡಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊAಡರು.
ವೇದಿಕೆಯಲ್ಲಿ ಸಂಘದ ಅಧ್ಯಕ್ಷ ಕೆ.ಕೆ. ಶ್ರೀನಿವಾಸ್, ಉಪಾಧ್ಯಕ್ಷ ಬಿ. ರಾಮಕೃಷ್ಣಯ್ಯ, ನಿರ್ದೇಶಕರುಗಳಾದ ಕೆ.ಎಂ. ಗಣೇಶ್, ಕೆ.ಬಿ. ಗಿರೀಶ್ ಗಣಪತಿ, ಬಾಬುಚಂದ್ರ ಉಳ್ಳಾಗಡ್ಡಿ, ಸವಿತಾ ರೈ, ಮುನೀರ್ ಅಹ್ಮದ್, ಎಂ.ಪಿ. ಕಾವೇರಪ್ಪ, ಎಂ. ಬಿಜಾಯ್, ಅನಿಲ್ ಹೆಚ್.ಕೆ., ಮ್ಯಾಥ್ಯೂ ಕೆ.ಇ., ಜನಾರ್ಧನ ಪ್ರಭು, ಡೆನ್ನಿ ಬರೋಸ್, ಜಯಂತಿ ಎಸ್.ಎಂ., ನಾಗೇಶ್ ಕೆ.ಎಸ್., ನರಸಿಂಹ ಡಿ. ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ಯಾಮಲಾ ಟಿ.ಡಿ. ಉಪಸ್ಥಿತರಿದ್ದರು.