ಚೆಟ್ಟಳ್ಳಿ, ಸೆ. ೨೫: ವೀರಾಜಪೇಟೆ ತಾಲೂಕಿನ ರಸ್ತೆಗಳು ಸಂಪೂರ್ಣ ಗುಂಡಿಮಯವಾಗಿದ್ದು, ಸಂಚಾರಕ್ಕೆ ಯೋಗ್ಯವಲ್ಲದ ಸ್ಥಿತಿಗೆ ತಲುಪಿದೆ. ವೀರಾಜಪೇಟೆಯಿಂದ ಸಿದ್ದಾಪುರವರೆಗಿನ ರಸ್ತೆಗಳು ಗುಂಡಿಗಳಿAದ ಕೂಡಿದ್ದು ವಾಹನ ಸವಾರರು ಹರಸಾಹಸ ಪಡುವಂತಾಗಿದೆ ಎಂದು ವೀರಾಜಪೇಟೆ ತಾಲೂಕು ಜೆಡಿಎಸ್ ಅಧ್ಯಕ್ಷ ಪಿ.ಎಂ ಮಂಜುನಾಥ್ ಆಕ್ಷೇಪಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ವೀರಾಜಪೇಟೆಯಿಂದ ಆರ್ಜಿ ಮಾರ್ಗವಾಗಿ ಹೋಗುವ ರಸ್ತೆಯಲ್ಲಿ ಬೈಕ್ ಹಾಗೂ ಆಟೋರಿಕ್ಷಾ ಚಾಲಕರು ಸಂಚರಿಸಲು ಹಿಂದೇಟು ಹಾಕುತ್ತಿದ್ದಾರೆ. ರಸ್ತೆಯಲ್ಲಿ ಗುಂಡಿಗಳೇ ಇದ್ದು, ಹಲವಾರು ಬಾರಿ ಈ ಮಾರ್ಗದಲ್ಲಿ ಅಪಘಾತಗಳು ಸಂಭವಿಸಿದೆ. ಗುಂಡಿಗಳಿAದ ಕೂಡಿರುವ ರಸ್ತೆಗಳು ಅಪಾಯಕ್ಕೆ ಆಹ್ವಾನ ನೀಡುತ್ತಿದೆ. ಅಧಿಕಾರಿಗಳು ಗಮನ ಹರಿಸುತ್ತಿಲ್ಲ ಎಂದು ಆರೋಪಿಸಿದ್ದಾರೆ.
ವೀರಾಜಪೇಟೆ ತಾಲೂಕಿನಾದ್ಯಂತ ರಸ್ತೆ ದುರಸ್ಥಿ ಪಡಿಸದಿದ್ದರೆ, ಜೆಡಿಎಸ್ ವತಿಯಿಂದ ಲೋಕೋಪಯೋಗಿ ಇಲಾಖೆಯ ಮುಂದೆ ಅಹೋರಾತ್ರಿ ಪ್ರತಿಭಟನೆ ನಡೆಸಲಾಗುವುದು ಎಂದು ಅವರು ತಿಳಿಸಿದ್ದಾರೆ.