ವೀರಾಜಪೇಟೆ, ಸೆ. ೨೫: ದಿನನಿತ್ಯ ಪಟ್ಟಣ ಶುಚಿಗೊಳಿಸುವ ಪೌರ ಕಾರ್ಮಿಕರು ಆರೋಗ್ಯದ ಮೇಲೆ ತೀವ್ರ ನಿಗಾ ಇರಿಸಬೇಕು. ಕನಿಷ್ಟ ೬ ತಿಂಗಳಿಗೊಮ್ಮೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು. ಶುಚಿತ್ವದಿಂದ ಉತ್ತಮ ಆರೋಗ್ಯಕರ ಜೀವನವನ್ನು ನಡೆಸಬಹುದು. ಪೌರಕಾರ್ಮಿಕರ ಕಾರ್ಯವೈಖರಿ ಶ್ಲಾಘನೀಯ ಎಂದು ವೀರಾಜಪೇಟೆ ಸಾರ್ವಜನಿಕ ಆಸ್ಪತ್ರೆ ವೈದ್ಯಾಧಿಕಾರಿ ಡಾ. ಶ್ರೀನಿವಾಸ್ ಹೇಳಿದರು.

ಜೈಭಾರತ್ ಆಟೋ ಚಾಲಕರು ಮತ್ತು ಮಾಲೀಕರ ಸಂಘದ ವತಿಯಿಂದ ಸರ್ಕಾರಿ ಆಸ್ಪತ್ರೆಯಲ್ಲಿ ಪೌರ ಕಾರ್ಮಿಕರ ದಿನಾಚರಣೆ ಅಂಗವಾಗಿ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಮಾತನಾಡಿ, ಮೂವತ್ತು ವರ್ಷ ಮೇಲ್ಪಟ್ಟವರು ಕಡ್ಡಾಯವಾಗಿ ವರ್ಷಕ್ಕೆ ಒಂದು ಬಾರಿ ಆರೋಗ್ಯ ತಾಪಾಸಣೆ ಮಾಡಿಕೊಳ್ಳುವುದು ಉತ್ತಮ. ಪೌರ ಕಾರ್ಮಿಕರು ಕನಿಷ್ಟ ೬ ತಿಂಗಳಿಗೊಮ್ಮೆ ರಕ್ತದ ಒತ್ತಡ, ಮಧುಮೇಹ, ರಕ್ತ ಪರೀಕ್ಷೆ ಮಾಡಿಕೊಂಡರೆ ದೇಹದಲ್ಲಿರುವ ಬಹುತೇಕ ಕಾಯಿಲೆಗಳನ್ನು ಕಂಡು ಹಿಡಿಯಬಹುದಾಗಿದೆ. ಸ್ಚಚ್ಛತೆಯೆ ನಮ್ಮ ಆರೋಗ್ಯ ಭಾಗ್ಯ ಎಂದು ಹೇಳಿದರು.

ಸ್ತಿçÃರೋಗ ತಜ್ಞೆ ಡಾ. ರೇಣುಕಾ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಮಹಿಳೆಯರಲ್ಲಿ ಸ್ತನದÀ ಕ್ಯಾನ್ಸರ್, ಗರ್ಭಕೋಶದ ತೊಂದರೆಗಳು ಹೆಚ್ಚಾಗುತ್ತಿವೆ. ಇವೆಲ್ಲವನ್ನು ಸಕಾಲಕ್ಕೆ ಚಿಕಿತ್ಸೆಗಳ ಮೂಲಕ ಸರಿಪಡಿಸಿ ಕೊಳ್ಳಬಹುದು ಎಂದು ಸಲಹೆ ನೀಡಿದರು.

ಪರೀಕ್ಷೆ ಮಾಡಿಕೊಂಡರೆ ದೇಹದಲ್ಲಿರುವ ಬಹುತೇಕ ಕಾಯಿಲೆಗಳನ್ನು ಕಂಡು ಹಿಡಿಯಬಹುದಾಗಿದೆ. ಸ್ಚಚ್ಛತೆಯೆ ನಮ್ಮ ಆರೋಗ್ಯ ಭಾಗ್ಯ ಎಂದು ಹೇಳಿದರು.

ಸ್ತಿçÃರೋಗ ತಜ್ಞೆ ಡಾ. ರೇಣುಕಾ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಮಹಿಳೆಯರಲ್ಲಿ ಸ್ತನದÀ ಕ್ಯಾನ್ಸರ್, ಗರ್ಭಕೋಶದ ತೊಂದರೆಗಳು ಹೆಚ್ಚಾಗುತ್ತಿವೆ. ಇವೆಲ್ಲವನ್ನು ಸಕಾಲಕ್ಕೆ ಚಿಕಿತ್ಸೆಗಳ ಮೂಲಕ ಸರಿಪಡಿಸಿ ಕೊಳ್ಳಬಹುದು ಎಂದು ಸಲಹೆ ನೀಡಿದರು.

ಒಂದು ದಿನ ಪೌರ ಕಾರ್ಮಿಕರು ನಗರವನ್ನು ಶುಚಿಗೊಳಿಸದಿದ್ದರೆ ನಮಗೆ ಪಟ್ಟಣದೊಳಗೆ ಕಾಲಿಡಲು ಸಾಧ್ಯವಾಗದಂತಹ ಪರಿಸ್ಥಿತಿ ಎದುರಾಗುತ್ತದೆ.

ಕ್ಲಿಷ್ಟಕರ ಸಂದÀರ್ಭದಲ್ಲೂ ಪೌರ ಕಾರ್ಮಿಕರು ಶುಚಿಗೊಳಿಸಲು ಹಿಂಜರಿಯುವುದಿಲ್ಲ. ಇಂತಹ ಕೆಲಸ ಕಾರ್ಯಗಳನ್ನು ಮಾಡುತ್ತಿರುವ ಪೌರ ಕಾರ್ಮಿಕರು ಒಂದು ತಿಂಗಳಿಗೊಮ್ಮೆ ಆರೋಗ್ಯ ತಪಾಸಣೆ ನಡೆಸಿದರೆ ಉತ್ತಮ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಇದೇ ಸಂದರ್ಭ ೪೧ ಪೌರ ಕಾರ್ಮಿಕರಿಗೆ ಆರೋಗ್ಯ ತಪಾಸಣೆ ನಡೆಸಲಾಯಿತು. ತಪಾಸಣಾ ಕಾರ್ಯದಲ್ಲಿ ಡಾ. ಗಿರಿಧರ್, ಮೂಳೆ ತಜ್ಞ ಡಾ. ಸತ್ಯಜಿತ್, ಡಾ. ಪ್ರಿಯಾ, ಡಾ. ಫಾತಿಮಾ ತಸ್ಲಿ ತಪಾಸಣೆ ನಡೆಸಿದರು.

ವೇದಿಕೆಯಲ್ಲಿ ಜೈ ಭಾರತ್ ಆಟೋ ಚಾಲಕರ ಮತ್ತು ಮಾಲೀಕರ ಸಂಘದ ಗೌರವ ಅಧ್ಯಕ್ಷ ತೋರೆರ ಪ್ರಭು ಕುಟ್ಟಪ್ಪ ಉಪಸ್ಥಿತರಿದ್ದರು.