ಕೂಡಿಗೆ, ಸೆ. ೨೫: ಸಹಕಾರ ಸಂಘಗಳ ಮೂಲಕ ಆಯಾ ಭಾಗದ ಕೃಷಿ ಪತ್ತಿನ ಸಹಕಾರ ಸಂಘಗಳ ಮೂಲಕ ಮತ್ತು ಕೊಡಗು ಜಿಲ್ಲೆಯಲ್ಲಿ ರುವ ವಿವಿಧ ಉಪಕೇಂದ್ರದ ಸಹಕಾರ ಬ್ಯಾಂಕ್ಗಳ ಮೂಲಕ ರೈತರಿಗೆ ಅನುಕೂಲ ಕಲ್ಪಿಸುವ ಹಿತದೃಷ್ಟಿಯಿಂದ ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ಇದರ ಸದುಪಯೋಗವನ್ನು ಆಯಾ ಭಾಗದ ರೈತರು ಬಳಕೆ ಮಾಡಿಕೊಂಡು ಆರ್ಥಿಕವಾಗಿ ಮುಂದುವರೆಬೇಕೆAದು ಕೊಡಗು ಜಿಲ್ಲಾ ಕೇಂದ್ರ ಬ್ಯಾಂಕ್ ಅಧ್ಯಕ್ಷ ಬಾಂಡ್ ಗಣಪತಿ ತಿಳಿಸಿದರು.
ಅವರು ಹೆಬ್ಬಾಲೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಇ-ಸ್ಟಾö್ಯಂಟ್ (ಸ್ಟಾö್ಯಂಪ್ ಪೇಪರ್) ನೀಡುವ ನೂತನ ಘಟಕದ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದರು. ಜಿಲ್ಲೆಯಲ್ಲಿ ೨೧ ಜಿಲ್ಲಾ ಕೇಂದ್ರ ಬ್ಯಾಂಕ್ನ ಶಾಖೆಗಳಿದ್ದು, ನಾಲ್ಕು ಗ್ರಾಮ ಪಂಚಾಯಿತಿ ವ್ಯಾಪ್ತಿಯ ರೈತರಿಗೆ ಅನುಕೂಲವಾಗುವಂತೆ ಶಾಖೆಗಳನ್ನು ತೆರೆಯಲಾಗಿದೆ. ಇದರ ಮೂಲಕ ರೈತರು ಮನೆ ಕಟ್ಟಡ ನಿರ್ಮಾಣ ಸಾಲ, ಸೇರಿದಂತೆ ವಿವಿಧ ವಾಹನಗಳ ಖರೀದಿ ಸಾಲ ಸೇರಿದಂತೆ ವಿವಿಧ ಸಾಲ ಸೌಲಭ್ಯಗಳನ್ನು ನೀಡಲಾಗುವುದು ಇದರ ಬಳಕೆ ಮಾಡಿಕೊಂಡು ಮರು ಪಾವತಿ ಮಾಡುವ ಮೂಲಕ ಬ್ಯಾಂಕ್ನ ಬೆಳವಣಿಗೆ ಸಹಕಾರಿಗಳಾಗಬೇಕೇಂದು ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಂ.ಎA. ಮಹಾದೇವ ವಹಿಸಿ ಇ-ಸ್ಟಾö್ಯಂಪ್ ಯೋಜನೆಗಳ ಬಳಕೆ ಬಗ್ಗೆ ತಿಳಿಸಿದರು.
ಈ ಸಂದರ್ಭ ಹೆಬ್ಬಾಲೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಹೆಚ್.ಎಸ್. ಮಂಜುನಾಥ, ಶಿರಂಗಾಲ ಸಹಕಾರ ಸಂಘದ ಅಧ್ಯಕ್ಷ ಲೋಕೇಶ್, ತೊರೆನೂರು ಸಹಕಾರ ಸಂಘದ ಅಧ್ಯಕ್ಷ ಕುಶಾಲಪ್ಪ, ಉಪಾಧ್ಯಕ್ಷ ಹೆಚ್.ಆರ್. ಮಣಿಕಂಠ, ನಿರ್ದೇಶಕ ರಾದ ಹೆಚ್.ಸಿ. ಜಲೇಂದ್ರ, ಹೆಚ್.ಕೆ. ಕವಿತಾ, ಹೆಚ್.ಜೆ. ಪರಮೇಶ್, ಹೆಚ್.ವಿ. ಸೋಮ ಶೇಖರ್, ಎಂ.ಎಸ್. ಶಶಿಕಲಾ, ಸ್ವಾಮಿ, ಹೆಚ್.ಎನ್. ಮಹದೇವ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹೆಚ್.ಎನ್. ಗಿರೀಶ್ ಸೇರಿದಂತೆ ಅನೇಕ ರೈತರು ಭಾಗವಹಿಸಿದ್ದರು.