ಮಡಿಕೇರಿ, ಸೆ. ೨೪: ನಗರದ ನಾಲ್ಕು ಶಕ್ತಿ ದೇವತೆಗಳ ಪೈಕಿ ಹಿರಿಯ ಅಕ್ಕಳೆಂದೇ ಖ್ಯಾತಿಪಡೆದಿರುವ ಕುಂದುರುಮೊಟ್ಟೆ ಶ್ರೀ ಚೌಟಿ ಮಾರಿಯಮ್ಮ ದೇವಾಲಯ ದಸರಾ ಮಂಟಪ ಸಮಿತಿ ೪೯ನೇ ವರ್ಷದ ಉತ್ಸವ ಆಚರಣೆಗೆ ಸಜ್ಜಾಗುತ್ತಿದೆ ಎಂದು ಕುಂದುರುಮೊಟ್ಟೆ ಶ್ರೀ ಚೌಟಿ ಮಾರಿಯಮ್ಮ ದೇವಾಲಯ ಮಂಟಪ ಸಮಿತಿ ಅಧ್ಯಕ್ಷ ತಾತಪಂಡ ನಂದಾ ಉತ್ತಪ್ಪ ತಿಳಿಸಿದ್ದಾರೆ.
ಎರಡು ಟ್ರಾö್ಯಕ್ಟರ್‌ಗಳನ್ನು ಬಳಸಲಾಗುತ್ತಿದ್ದು, ದಿಂಡಿಗಲ್‌ನ ಮಾತಾ ಎಲೆಕ್ಟಿçಕಲ್ಸ್ನವರು ಲೈಟಿಂಗ್‌ಬೋರ್ಡ್ ಅಳವಡಿಸಲಿದ್ದಾರೆ. ಪ್ಲಾಟ್‌ಫಾರಂ ಅನ್ನು ಪದ್ಮನಾಭ ಮತ್ತು ತಂಡದವರು ನಿರ್ಮಿಸಲಿದ್ದಾರೆ. ಈ ಬಾರಿ ಮಂಟಪದಲ್ಲಿ ಶಿವನಿಂದ ಅಂಧಕಾಸುರನ ವಧೆ ಕಥಾ ಸಾರಾಂಶವನ್ನು ಅಳವಡಿಸಲಾಗುತ್ತಿದೆ. ಧ್ವನಿವರ್ಧಕ ಮತ್ತು ಸ್ಟುಡಿಯೋ ಲೈಟ್ ವ್ಯವಸ್ಥೆಯನ್ನು ಮಡಿಕೇರಿಯ ಇವೆನ್‌ಟೆಕ್‌ನ ಅವಿನ್‌ಕುಮಾರ್ ಮಾಡಲಿದ್ದಾರೆ. ಒಟ್ಟು ೧೯ ಕಲಾಕೃತಿಗಳನ್ನು ಬಳಸಲಾಗುತ್ತಿದ್ದು, ಹುದುಬೂರಿನ ಮಹದೇವಪ್ಪ ಅಂಡ್ ಸನ್ಸ್ ಕಲಾವಿದರು ಕಲಾಕೃತಿಗಳನ್ನು ತಯಾರಿಸಲಿದ್ದಾರೆ. ಟ್ರಾö್ಯಕ್ಟರ್ ಸೆಟ್ಟಿಂಗ್ಸ್ನ್ನು ಎಂ.ಬಿ. ಮಂಜು, ಕೋಡಿ ಭರತ್ ಇವರುಗಳು ಮಾಡಲಿದ್ದು, ಕಲಾಕೃತಿಗಳಿಗೆ ಚಲನವಲನವನ್ನು ಎ.ಆರ್.ಮಂಜುನಾಥ್, ಲಾರೆನ್ಸ್, ಮಿಥುನ್, ಸಂದೇಶ್ ಮತ್ತು ತಂಡದವರು ನೀಡಲಿದ್ದಾರೆ. ಬೆಂಗಳೂರಿನ ಆರ್.ಜೆ ಫರ‍್ಸ್ ತಂಡ ಸ್ಪೆಷಲ್ ಎಪೆಕ್ಟ್ ವ್ಯವಸ್ಥೆ ಮಾಡಲಿದೆ. ಒಟ್ಟು ೧೮ ಲಕ್ಷ ವೆಚ್ಚದಲ್ಲಿ ಮಂಟಪವನ್ನು ಹೊರತರಲಾಗುತ್ತಿದ್ದು, ಜನಾಕರ್ಷಣೆ ಪಡೆಯುವುದರ ಜೊತೆಗೆ ಬಹುಮಾನಕ್ಕೂ ಪೈಪೋಟಿ ನೀಡಲಾಗುವುದು ಎಂದು ನಂದಾ ಉತ್ತಪ್ಪ ಮಾಹಿತಿ ನೀಡಿದರು. -ಉಜ್ವಲ್ ರಂಜಿತ್