ನಾಪೋಕ್ಲು, ಸೆ. ೨೪: ನಾಪೋಕ್ಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ೨೦೨೧-೨೨ನೇ ಸಾಲಿನಲ್ಲಿ ರೂ. ೪೩.೧೩ ಲಕ್ಷ ನಿವ್ವಳ ಲಾಭಗಳಿಸಿದೆ ಎಂದು ಸಂಘದ ಅಧ್ಯಕ್ಷ ಕಾಂಡAಡ ಜಯಾ ಕರುಂಬಯ್ಯ ತಿಳಿಸಿದರು.
ಸಂಘದ ಸಭಾಂಗಣದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ಸಂಘವು ೨,೪೭೦ ಸದಸ್ಯರನ್ನು ಹೊಂದಿದೆ. ಸಂಘದ ಎ ತರಗತಿ ಪಾಲು ಹಣ ೧.೧೫ ಕೋಟಿ ರೂಪಾಯಿಗಳಾಗಿದೆ. ಅದರಂತೆ ೩೨.೯೦ ಕೋಟಿ ಹಣದ ಠೇವಣಿ ಸಂಗ್ರಹಿಸಿದೆ. ೨೮.೪೭ ಕೋಟಿ ರೂಪಾಯಿಗಳನ್ನು ಸಾಲ ರೂಪದಲ್ಲಿ ಸದಸ್ಯರಿಗೆ ನೀಡಲಾಗಿದೆ. ಸಂಘದ ದುಡಿಯುವ ಬಂಡವಾಳ ೪೨ ಕೋಟಿ ರೂ.ಗಳಾಗಿದೆ ಎಂದು ತಿಳಿಸಿದರು.
೨೦೨೧-೨೨ನೇ ಸಾಲಿನಲ್ಲಿ ಸಂಘದ ಒಟ್ಟು ವ್ಯವಹಾರವು ೧೫೬.೭೫ ಕೋಟಿ ರೂ.ಗಳಾಗಿದ್ದು, ಸಾಲ ವಸೂಲಾತಿ ಪ್ರಮಾಣ ಶೇ. ೯೫ ಆಗಿದೆ ಎಂದರು. ಸಂಘ ಎ ತರಗತಿಯನ್ನು ಕಾಯ್ದುಕೊಂಡು ಬಂದಿದ್ದು, ಸದಸ್ಯರಿಗೆ ಈ ಬಾರಿ ಶೇ. ೧೩ ಡಿವಿಡೆಂಡ್ ನೀಡಲು ನಿರ್ಧರಿಸಲಾಗಿದೆ ಎಂದರು.
ಸAಘದ ಹತ್ಯಾರು ವಿಭಾಗದಲ್ಲಿ ಕ್ರಿಮಿನಾಶಕ, ಕಳೆನಾಶಕ, ಕಳೆ ಕೀಳುವ ಯಂತ್ರ, ಮತ್ತಿತರ ಉಪಕರಣಗಳನ್ನು ಮಾರಾಟ ಮಾಡಲಾಗುತ್ತಿದೆ. ನೂತನವಾಗಿ ಮನೆ ಹಾಗೂ ಕಟ್ಟಡಗಳಿಗೆ ಬಳಸಲಾಗುವ ಪೈಂಟ್ ಮತ್ತು ಅದನ್ನು ಮಿಶ್ರಣ ಮಾಡುವ ಯಂತ್ರವನ್ನು ಖರೀದಿಸಲಾಗಿದೆ. ಅದರೊಂದಿಗೆ ಜೆರಾಕ್ಸ್, ಮೋದಿಕೇರ್ ಉತ್ಪನ್ನಗಳು, ಇ-ಸ್ಟಾಂಪ್, ಆಧುನಿಕ ಅಕ್ಕಿ ಗಿರಣಿ, ಗೊಬ್ಬರ ದಾಸ್ತಾವು, ನೂತನ ಟ್ರಾö್ಯಕ್ಟರ್ ವ್ಯವಸ್ಥೆಯಿದ್ದು, ಎಲ್ಲಾ ಸದಸ್ಯರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು. ಸಂಘದ ನಿರ್ದೇಶಕ ಹಾಗೂ ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಕೇಟೋಳಿರ ಹರೀಶ್ ಪೂವಯ್ಯ ಅವರ ಪ್ರಯತ್ನದಿಂದ ಅಪೆಕ್ಸ್ ಬ್ಯಾಂಕ್ನಿAದ ಕಂಪ್ಯೂಟರ್ ನೋಟ್ ಎಣಿಸುವ ಯಂತ್ರ, ಪ್ರಿಂಟರ್ ಅನ್ನು ಉಚಿತವಾಗಿ ಪಡೆಯಲಾಗಿದೆ ಎಂದು ತಿಳಿಸಿದರು.
ಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷೆ ಬಿದ್ದಾಟಂಡ ರಾಧಾ ಗಣಪತಿ, ನಿರ್ದೇಶಕರಾದ ಎನ್.ಎಸ್. ಉದಯಶಂಕರ್, ಕೇಟೋಳಿರ ಹರೀಶ್ ಪೂವಯ್ಯ, ಅರೆಯಡ ಅಶೋಕ್, ಪಾಡಿಯಮ್ಮಂಡ ಕೆ. ಮುರಳೀಧರ್, ಕೇಲೇಟಿರ ಬಿ. ಮುತ್ತಮ್ಮ, ಕುಂಡ್ಯೋಳAಡ ಎಂ. ಕವಿತಾ, ಚೀಯಕಪೂವಂಡ ಎಂ. ದೇವಯ್ಯ, ಹೆಚ್.ಎ. ಬೊಳ್ಳು, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಶಿವಚಾಳಿಯಂಡ ಪೂಣಚ್ಚ ಇದ್ದರು.