*ಗೋಣಿಕೊಪ್ಪ, ಸೆ. ೨೪: ಯರವರ ಕುಲವರ್ಣ ಅಧ್ಯಯನಕ್ಕೆ ಸರ್ಕಾರ ಮುಂದಾಗಿರುವ ಕಾರ್ಯ ಸ್ವಾಗತಾರ್ಹ ಬೆಳವಣಿಗೆಯಾಗಿದ್ದು ಯರವ ಒಕ್ಕೂಟದ ಹೋರಾಟಕ್ಕೆ ಸಂದ ಜಯ ಎಂದು ಯರವ ಯುವ ಒಕ್ಕೂಟದ ಗೌರವ ಅಧ್ಯಕ್ಷ ಪಿ.ಎಸ್. ಮುತ್ತ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಗೋಣಿಕೊಪ್ಪದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ಶಾಸಕರುಗಳಾದ ಕೆ.ಜಿ. ಬೋಪಯ್ಯ, ಅಪ್ಪಚ್ಚು ರಂಜನ್, ಸುಜಾ ಕುಶಾಲಪ್ಪ, ಮಾಜಿ ವಿಧಾನ ಪರಿಷತ್ ಸದಸ್ಯ, ಸುನೀಲ್ ಸುಬ್ರಮಣಿ, ಮತ್ತು ಪರಿಶಿಷ್ಟ ಪಂಗಡದ ಕಲ್ಯಾಣ ಮಂತ್ರಿಗಳಾದ ಶ್ರೀರಾಮುಲು ಇವರೆಲ್ಲರ ಪ್ರಯತ್ನದಿಂದ ಯರವ ಸಮುದಾಯದ ಕುಲವರ್ಣ ಅಧ್ಯಾಯನಕ್ಕೆ ಕೇಂದ್ರ ಬುಡಕಟ್ಟು ಮಂತ್ರಾಲಯ ನಿರ್ದೇಶನ ನೀಡಲು ಸಾಧ್ಯವಾಗಿದೆ ಎಂದು ಶ್ಲಾಘಿಸಿದರು.
ಕೇಂದ್ರದ ನಿರ್ದೇಶನದಂತೆ ಮೈಸೂರು ಬುಡಕಟ್ಟು ಸಮುದಾಯದ ಸಂಶೋಧನಾ ಸಂಸ್ಥೆ, ಪೂರ್ವಭಾವಿ ಸಭೆ ನಡೆಸಲು ಜಿಲ್ಲಾ ಮತ್ತು ತಾಲೊಕು ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಗೆ ನಿರ್ದೇಶನ ನೀಡಿರುವುದನ್ನು ಯರವ ಯುವ ಒಕ್ಕೂಟ ಸ್ವಾಗತಿಸುತ್ತೇವೆ ಎಂದು ಹೇಳಿದ ಅವರು, ಯರವರ” ಜನಾಂಗವನ್ನು ಮೂಲ ನಿವಾಸಿಗಳೆಂದು ಕೇಂದ್ರ ಬುಡಕಟ್ಟು ಮಂತ್ರಾಲಯ ಘೋಷಣೆ ಮಾಡಲು ನಿರಂತರವಾಗಿ ಒತ್ತಾಯಿಸಲಾಗಿದೆ. “ಯರವ ಯುವ ಒಕ್ಕೂಟವು” - ೨೦೦೩ ನವೆಂಬರ್ ೨೩ರಂದು ಪ್ರಾರಂಭವಾಗಿ ೨೦೦೫ರ ಆಗಸ್ಟ್ ೧೫ರಂದು ಪ್ರಥಮವಾಗಿ ಗೋಣಿಕೊಪ್ಪಲಿನಲ್ಲಿ ಅರೆಬೆತ್ತಲೆ ಪಾದಯಾತ್ರೆ, ಆಗಸ್ಟ್ ೧೫ರಂದು ಅರೆಬೆತ್ತಲೆ ಪ್ರತಿಭಟನೆ ತಾಲೂಕು ಸಮಾಜ ಕಲ್ಯಾಣಾಧಿಕಾರಿ ಕಚೇರಿ, ತಹಶೀಲ್ದಾರ್ ಕಚೇರಿ ಮುಂಭಾಗ, ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗ, ಮೈಸೂರು ಯೂನಿವರ್ಸಿಟಿ ಮುಂಭಾಗ ಹೀಗೆ ನಿರಂತರವಾಗಿ ಅರೆಬೆತ್ತಲೆ ಪ್ರತಿಬಟನೆ ನಡೆಸಿ ಸರ್ಕಾರದ ಗಮನ ಸೆಳೆಯಲಾಯಿತು ಅದರ ಪರಿಣಾಮ ಸರ್ಕಾರ ಈ ನಿರ್ಧಾg Àಕೈಗೊಂಡಿರುವುದಾಗಿ ಹೇಳಿದರು.
ಗೋಷ್ಠಿಯಲ್ಲಿ ಪ್ರಮುಖರುಗಳದ ಪಿ.ಸಿ. ಚಂದ, ವೈ.ಸಿ. ಶಂಕರು, ವೈ.ಎಂ. ಸಿದ್ದು, ಮಣಿ ಕುಂಞ, ವೈ.ಬಿ. ಗಣೇಶ್, ಸದಸ್ಯರುಗಳಾದ ಪಿ.ಎಂ.ರಾಮು ಧನುಗಾಲ, ಪಿ.ಜಿ. ಸುಬ್ರಮಣಿ, ವೈ.ಎಂ. ಮಂಜುನಾಥ್, ಮೂಕ, ಪಿ.ಸಿ. ಸುರೇಶ, ಬೋಜ, ಚೆನ್ನಂಗೊಲ್ಲಿ, ಮೋಹನ ಪಿ.ಹೆಚ್.ಎಸ್. ಕಾಲೋನಿ, ಪಿ.ಬಿ. ರಾಜ, ಕಾರೆಕಾಡು, ಪಿ.ಬಿ. ಮಂಜು, ಎಂ. ಮಹೇಶ್, ಇದ್ದರು.