ಶಾಸಕ ಅಪ್ಪಚ್ಚು ರಂಜನ್
ಕುಶಾಲನಗರ, ಸೆ. ೨೫: ಮಾಧ್ಯಮಗಳಿಂದ ಸಮಾಜವನ್ನು ತಿದ್ದುವ ಕೆಲಸ ನಿರಂತರವಾಗಿ ನಡೆಯಬೇಕು ಎಂದು ಮಡಿಕೇರಿ ಕ್ಷೇತ್ರ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಹೇಳಿದರು.
ಕುಶಾಲನಗರದಲ್ಲಿ ಕೊಡಗು ಪತ್ರಕರ್ತರ ಸಂಘದ ಕುಶಾಲನಗರ ತಾಲೂಕು ಘಟಕದ ಉದ್ಘಾಟನೆ, ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸಮಾಜದ ಅಂಕುಡೊAಕುಗಳ ವಿಮಶೆೆð ಆಗಬೇಕಿದೆ. ಜನಪ್ರತಿನಿಧಿಗಳಿಗೆ ಸಲಹೆ ಸೂಚನೆಗಳ ಅಗತ್ಯತೆ ಇರುವುದಾಗಿ ತಿಳಿಸಿದ ರಂಜನ್ ಪತ್ರಕರ್ತರ ಕರ್ತವ್ಯಕ್ಕೆ ನಿರ್ಬಂಧ ಸಲ್ಲದು ಎಂದು ಅಭಿಪ್ರಾಯಪಟ್ಟರು. ಪತ್ರಕರ್ತರು ಯಾವುದೇ ಸಂದರ್ಭ ವರದಿ ಮಾಡುವಾಗ ವ್ಯಕ್ತಿಗತ ತೇಜೋವಧೆ ಆಗದಂತೆ ಎಚ್ಚರ ವಹಿಸುವುದು ಅಗತ್ಯ ಎಂದು ಅವರು ಹೇಳಿದರು. ದಿಕ್ಸೂಚಿ ಭಾಷಣ ಮಾಡಿದ ಸಂಘದ ಗೌರವ ಸಲಹೆಗಾರರಾದ ಬಿ.ಜಿ. ಅನಂತಶಯನ ಮಾತನಾಡಿ, ಸುದ್ದಿಗಳು ಓದುಗರಲ್ಲಿ ಗೊಂದಲ ಉಂಟು ಮಾಡಬಾರದು. ಸುದ್ದಿಯಲ್ಲಿ ಆತುರ ಸಲ್ಲದು. ಪ್ರಸಕ್ತ ಪರಿಸ್ಥಿತಿಯಲ್ಲಿ ಪತ್ರಕರ್ತರು ರಕ್ಷಣೆ, ಭದ್ರತೆಯ ಕೊರತೆ ಎದುರಿಸುತ್ತಿದ್ದು, ಪತ್ರಕರ್ತನ ಅಭಿವ್ಯಕ್ತಿ ಸ್ವಾತಂತ್ರö್ಯ ಹತ್ತಿಕ್ಕುವ ಯತ್ನ, ದೈಹಿಕ ಹಲ್ಲೆ ಪ್ರಕರಣಗಳು ಅಧಿಕಗೊಳ್ಳುತ್ತಿರುವುದು ಆತಂಕಕಾರಿ ವಿಷಯವಾಗಿದೆ. ಕೆಲವರಿಂದ ಸಾಮಾಜಿಕ ಜಾಲತಾಣಗಳ ದುರುಪಯೋಗ ಆಗುತ್ತಿದ್ದು, ಇದರಿಂದ ಅನಾಹುತಗಳು ಸೃಷ್ಟಿ ಆಗುತ್ತಿರುವುದು ಕಂಡುಬರುತ್ತಿದೆ. ಇದಕ್ಕೆ ಕಡಿವಾಣದ ಅಗತ್ಯವಿದೆ ಎಂದು ಅನಂತಶಯನ ಹೇಳಿದರು. ಕೊಡಗು ಜಿಲ್ಲಾಡಳಿತ ಕಾನೂನು ಸಲಹೆಗಾರರಾದ ಎ. ಲೋಕೇಶ್ ಕುಮಾರ್ ಅವರು, ಕುಶಾಲನಗರ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷರಾದ ವಿಘ್ನೇಶ್ ಎಂ. ಭೂತನಕಾಡು ನೇತೃತ್ವದ ನಿಯೋಜಿತ ಪದಾಧಿಕಾರಿಗಳಿಗೆ ಪ್ರಮಾಣ ವಚನ ಬೋಧಿಸಿದರು. ಸಂಘದ ಸದಸ್ಯರ ಮಕ್ಕಳಾದ ಬಿ.ಡಿ ಮಧುರ, ಅಹನ್ ಪೂಜಾರಿ, ಆರ್ಯ, ದೀಪಿಕ, ಯದುನಂದ್, ಭುವಿತ್, ಬೆನೆಕ, ಸೋವಿತಾ, ಹರ್ಷಿತ್ ಅವರಿಗೆ ಕೃತಜ್ಞತಾ ಟ್ರಸ್ಟ್ನ ಮುರುಳಿಧರ್ ಮತ್ತು ಗಣ್ಯರಿಂದ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಉದ್ಯಮಿ ಹೆನ್ರಿಕ್ ಮಾರ್ಟಿನ್ ಅವರು ಸಂಘದ ಸದಸ್ಯರಿಗೆ ಪವರ್ ಬ್ಯಾಂಕ್ ವಿತರಿಸಿದರು. ಕೊಡಗು ಪತ್ರಕರ್ತರ ಸಂಘದ ಅಧ್ಯಕ್ಷ ಎಸ್.ಎ ಮುರುಳಿಧರ್ ಅಧ್ಯಕ್ಷತೆಯಲ್ಲಿ ನಡೆÀದ ಕಾರ್ಯಕ್ರಮದಲ್ಲ್ಲಿ ಕುಶಾಲನಗರ ಪಟ್ಟಣ ಪಂಚಾಯಿತಿ ಅಧ್ಯಕ್ಷ ಜಯವರ್ಧನ್, ಕಂಬಿಬಾಣೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಧು ನಾಗಪ್ಪ ಇದ್ದರು. ಗೌರವಾಧ್ಯಕ್ಷರಾದ ಕೆ.ತಿಮ್ಮಪ್ಪ, ಉಪಾಧ್ಯಕ್ಷ ಬಿ.ಸಿ ದಿನೇಶ್, ಪ್ರಧಾನ ಕಾರ್ಯದರ್ಶಿ ವಿನ್ಸೆಂಟ್ ವಿನೋದ್, ಖಜಾಂಚಿ ಎನ್.ಎ ಅಶ್ವಥ್ ಕುಮಾರ್ ಮತ್ತು ನಿರ್ದೇಶಕರುಗಳಾದ ಬಿ.ಎಸ್ ಲೋಕೇಶ್ ಸಾಗರ್, ಜಿ.ಕೆ ಬಾಲಕೃಷ್ಣ, ಅಲ್ಫçಡ್ ಡಿಸೋಜಾ, ಕೆ.ಎಸ್ ಮೂರ್ತಿ, ವಿಶ್ವ ಕುಮಾರ್, ಶಿವಣ್ಣ, ಜೆ.ಎಲ್ ಸೋನ್ಸ್, ಜಿಲ್ಲಾ ಸಂಘದ ಪ್ರಮುಖರು ಭಾಗವಹಿಸಿದ್ದರು. ಮಧುರ ದಿನೇಶ್ ಪ್ರಾರ್ಥಿಸಿದರು. ವಿಘ್ನೇಶ್ ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು. ಕೆ. ತಿಮ್ಮಪ್ಪ ಮತ್ತು ಎಂ.ಎಸ್. ಸುನೀಲ್ ಕಾರ್ಯಕ್ರಮ ನಿರೂಪಿಸಿದರು.