ಮಡಿಕೇರಿ, ಸೆ. ೨೫: ತಾಳತ್ತಮನೆಯಲ್ಲಿ ಪ್ರತಿಷ್ಠಾಪನೆಗೊಂಡಿರುವ ಶ್ರೀ ದುರ್ಗಾಭಗವತಿ ದೇವಸ್ಥಾನದಲ್ಲಿ ಶರನ್ನವರಾತ್ರಿಯ ಅಂಗವಾಗಿ ತಾ.೨೬ರಿಂದ (ಇಂದಿನಿAದ) ಅ.೫ರವರೆಗೆ ನವರಾತ್ರಿ ಆಚರಣೆ ನಡೆಯಲಿದೆ. ಪ್ರತೀ ದಿನ ಬೆಳಿಗ್ಗೆ ೯ಕ್ಕೆ ವಿಶೇಷ ಅಲಂಕಾರ ಪೂಜೆಯನ್ನು ಏರ್ಪಡಿಸಲಾಗಿದೆ. ಅ.೩ರಂದು ದುರ್ಗಾಷ್ಟಮಿಯ ಅಂಗವಾಗಿ ಬೆಳಿಗ್ಗೆ ೯.೩೦ ಗಂಟೆಗೆ ಗಣಪತಿ ಹೋಮ ನಂತರ ಶ್ರೀ ದುರ್ಗಾ ಹವನ, ಬಳಿಕ ಅನ್ನ ಸಂತರ್ಪಣೆ ಇರುತ್ತದೆ. ಅಂದು ಸಂಜೆ ೭ ಗಂಟೆಗೆ ದುರ್ಗಾಪೂಜೆಯನ್ನು ನಡೆಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.