ಮಡಿಕೇರಿ, ಸೆ. ೨೪ : ಕೊಡಗು ಜಿಲ್ಲೆಯ ‘ಕುಶಾಲನಗರ’ ತಾಲ್ಲೂಕಿನಲ್ಲಿ ವಾಸ್ತವ್ಯವಿರುವ ಮಾಜಿ ಸೈನಿಕರು ಮತ್ತು ಅವರ ಅವಲಂಬಿತರು, ಅವರುಗಳ ಯಾವುದೇ ಸಾಮೂಹಿಕ/ ವೈಯಕ್ತಿಕ ಕುಂದುಕೊರತೆಗಳು ಇದ್ದಲ್ಲಿ ಅವುಗಳ ಬಗ್ಗೆ ಚರ್ಚಿಸಲು, ಜಿಲ್ಲಾಧಿಕಾರಿ ಅವರ ಅಧ್ಯಕ್ಷತೆಯಲ್ಲಿ ಅಕ್ಟೋಬರ್, ೧೯ ರಂದು ಬೆಳಿಗ್ಗೆ ೧೦.೩೦ ಗಂಟೆಗೆ ಕುಶಾಲನಗರ ತಹಶೀಲ್ದಾರರ ಕಾರ್ಯಾಲಯ ಸಭಾಂಗಣದಲ್ಲಿ ಮಾಜಿ ಸೈನಿಕರ ಕುಂದುಕೊರತೆಗಳ ಸಭೆ ನಡೆಯಲಿದೆ.
ಈ ಬಗ್ಗೆ ಕುಂದುಕೊರತೆಗಳ ಮನವಿಗಳನ್ನು ಸಲ್ಲಿಸುವವರು ಅಕ್ಟೋಬರ್, ೧೩ ರ ಒಳಗೆ ಜಂಟಿ ನಿರ್ದೇಶಕರ ಕಾರ್ಯಾಲಯ, ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ, ಮಡಿಕೇರಿ, ಕೊಡಗು ಜಿಲ್ಲೆ, ಇವರಿಗೆ ಪತ್ರ ಅಥವಾ ಮಿಂಚAಚೆ ಇ-ಮೇಲ್ ರಿಣಜiಡಿeಛಿಣoಡಿಜsತಿಡಿmಜಞ@ಥಿಚಿhoo.ಛಿom ಮೂಲಕ ಜೊತೆಗೆ ದಾಖಲಾತಿಗಳನ್ನು ಸಲ್ಲಿಸುವಂತೆ ಕೋರಿದೆ.
ಕುಂದುಕೊರತೆ ಸಲ್ಲಿಸುವಾಗ ತಮ್ಮ ಮಾಜಿ ಸೈನಿಕರ ಗುರುತಿನ ಚೀಟಿ ಪ್ರತಿ ಮತ್ತು ಮೊಬೈಲ್ ಸಂಖ್ಯೆಯನ್ನು ನಮೂದಿಸುವಂತೆ ಸೈನಿಕ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಬಾಲಸುಬ್ರಮಣ್ಯ ತಿಳಿಸಿದ್ದಾರೆ.