ಮಡಿಕೇರಿ, ಸೆ. ೨೫: ಮದೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮಹಾಸಭೆ ಇತ್ತೀಚೆಗೆ ನಡೆಯಿತು. ಸಭೆಯಲ್ಲಿ ವಿಶೇಷವಾಗಿ ೨೦೧೯-೨೦ ರಲ್ಲಿ ಸಂಘದಲ್ಲಿ ಅಗೋಳಿಕಜೆ ಧನಂಜಯ ಅವರು ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ನಂತರ ಹೆಚ್ಚು ಲಾಭಗಳಿಸಿದೆ. ರೂ. ೬ ಲಕ್ಷದ ೨೮ ಸಾವಿರ ಲಾಭದಲ್ಲಿ ಇದ್ದ ಸಂಘವನ್ನು ಸತತ ಪ್ರಯತ್ನದಿಂದ ೩ ವರ್ಷದಲ್ಲಿ ರೂ. ೨೨ ಲಕ್ಷದ ೨೬ ಸಾವಿರಕ್ಕೆ ಹೆಚ್ಚಿಸಿರುವುದನ್ನು ಸ್ವಾಗತಿಸಲಾಯಿತು. ಅದಲ್ಲದೆ ರೂ. ೪೦ ಲಕ್ಷದಲ್ಲಿ ಸಂಘದ ಅಭಿವೃದ್ಧಿ ಕೆಲಸವನ್ನು ಇವರು ಮಾಡಿದ್ದಾರೆ. ಈ ಹಿನ್ನೆಲೆ ಗ್ರಾಮಸ್ಥರು ಇವರನ್ನು ಸನ್ಮಾನಿಸಿದರು.