*ಗೋಣಿಕೊಪ್ಪ, ಸೆ. ೨೫: ಇಲ್ಲಿನ ಕೊಡಗು ಇಂಟರ್ ನ್ಯಾಷನಲ್ ಸಭಾಂಗಣದಲ್ಲಿ ಕೊಡಗು ಹಿಂದೂ ಮಲಯಾಳಿ ಸಮಾಜದ ಓಣಂ ಮತ್ತು ಪದಗ್ರಹಣ ಕಾರ್ಯಕ್ರಮದಲ್ಲಿ ಸಮಾಜದ ಮುಖ್ಯ ಸಮಿತಿಯ ಪದಾಧಿಕಾರಿಗಳು, ಶ್ರೀಮಂಗಲ, ಪಾಲಿಬೆಟ್ಟ ಉಪ ಸಮಿತಿಗಳ ಪದಾಧಿಕಾರಿಗಳು ಪದಗ್ರಹಣ ಸ್ವೀಕರಿಸಿದರು.
ಸಮಾಜದಿಂದ ರೂಪಿಸಿರುವ ನೂತನ ಕಾರ್ಯಕ್ರಮಗಳ ಪಟ್ಟಿಯನ್ನು ಅಂತಾರಾಷ್ಟಿçÃಯ ಓಟಗಾರ್ತಿ ಡಾ. ಪಿ.ಟಿ. ಉಷಾ ಬಿಡುಗಡೆಗೊಳಿಸಿದರು. ಸಮಾಜಕ್ಕೆ ೩ ಕೋಟಿ ವೆಚ್ಚದಲ್ಲಿ ಸಮುದಾನ ಭವನ ನಿರ್ಮಾಣ, ಎಸ್ಸೆಸ್ಸೆಲ್ಸಿ, ದ್ವಿತೀಯ ಪಿಯುಸಿ ಶಿಕ್ಷಣಕ್ಕೆ ಪೋತ್ಸಾಹ ನೀಡುವುದು, ಸದಸ್ಯರ ಅಗತ್ಯತೆಗೆ ಪೂರಕ ನೆರವು, ವಾರ್ಷಿಕ ಕ್ರೀಡಾಕೂಟ, ಭರತನಾಟ್ಯ, ನೃತ್ಯ ಕಲೆಗೆ ಪ್ರೋತ್ಸಾಹಿಸಲು ಮಹಿಳೆಯರಿಗೆ ತರಬೇತಿ ಯೋಜನೆಗಳನ್ನು ಪ್ರಕಟಿಸಲಾಯಿತು.
ಸನ್ಮಾನ; ಸಮಾಜದ ಎಸ್ಸೆಸ್ಸೆಲ್ಸಿ, ದ್ವಿತೀಯ ಪಿಯುಸಿ, ಕ್ರೀಡೆ, ವಿವಿಧ ಕ್ಷೇತ್ರ, ಸಾಮಾಜಿಕ ಸೇವೆ, ರಕ್ತದಾನ, ಕೊರೊನಾ ವಾರಿಯರ್ ಸೇವೆ ನೀಡಿದವರನ್ನುಹಾಗೂ ರಾಜ್ಯಸಭಾ ಸದಸ್ಯೆ, ಅಂರ್ರಾಷ್ಟಿçÃಯ ಮಾಜಿ ಓಟಗಾರ್ತಿ ಪಿ.ಟಿ. ಉಷಾ ಅವರನ್ನು ಸನ್ಮಾನಿಸಲಾಯಿತು. ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ಎಂ.ಎA. ನೀಶ್ಮಾ, ಪಿ.ಎಲ್. ಗಗನ್ ಸುಬ್ರಮಣಿ, ಪಿ.ಎಂ. ನಂದನ, ಎಸ್. ಕೃತಿಕ, ಪಿ.ಪಿ. ಪ್ರಾರ್ಥನ, ಎಂ.ಎಸ್. ನಿತಿನ್ರಾಜ್, ಎಂ.ಎ. ಅಂಜನಾ, ಎಂ.ವಿ. ಲಕ್ಷö್ಯ, ವಿ.ಎಸ್. ಅಮೃತ, ಇ.ಎ. ಹರ್ಷಿತ್, ಟಿ.ಎಸ್. ಸನಾ, ವಿ.ಎ. ಚಿಂತನ್, ಬಿ.ಯು. ಮೋನಿಕ, ಎಂ. ಅಶ್ವಿನಿ, ದ್ವಿತೀಯ ಪಿಯುಸಿ ವಿಭಾಗದಲ್ಲಿ ಹೆಚ್ಚು ಅಂಕ ಪಡೆದ ಎನ್.ಕೆ. ಲೋಚನಾ, ಕೆ. ಅಜನ್ಯ, ಪಿ. ಅನುಷಾ, ಪಿ. ಅನಗಶ್ರೀ, ಎಂ.ಎA ಗ್ರೀಷ್ಮಾ, ಕೋವಿಡ್ ವಾರಿಯರ್ ಶಶಿಕುಮಾರಿ, ಲಲಿತಾ ವೇಣು, ನಿರ್ಮಲ, ಶೋಭಾ ಮೋಹನ್, ಪ್ರಿಯಮಣಿ, ಪಿ.ಎಸ್. ಶರತ್ಕಾಂತ್, ಕೆ.ಸಿ. ಶೈಜು, ಎ.ಎಂ. ಅಖಿಲ್, ಗ್ರಿಮಿಷ್ ಗೋಬಿ, ರಕ್ತದಾನಿ ವಿ.ವಿ. ಅರುಣ್ಕುಮಾರ್, ಸಿ.ಕೆ. ವೇಣುಗೋಪಾಲ್, ಪ್ರಿಯ ಸುರೇಂದ್ರನ್, ಎ.ಎಂ. ಶೈಲ, ಟಿ.ಕೆ. ಮೋಹನ್, ಕೆ.ಬಿ. ಸಂಜೀವ್, ಫೋಟೋಗ್ರಫಿ ಪ್ರಶಸ್ತಿ ಪಡೆದ ಸಿ.ಕೆ. ಸುರೇಶ್, ಸಾಧಕರಾದ ಕೆ.ಕೆ. ಸುಷಾ, ಪುಷ್ಪಾ ಅಶೋಕ್, ಗೌತಂ ಕೃಷ್ಣ ವಿಜಯನ್, ಸಾಮಾಜಿಕ ಕ್ಷೇತ್ರದಲ್ಲಿ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ, ಜಿಲ್ಲಾ ಪ್ರಶಸ್ತಿ ಪುರಸ್ಕೃತ ಪತ್ರಕರ್ತರುಗಳಾದ ಸಣ್ಣುವಂಡ ಕಿಶೋರ್ ನಾಚಪ್ಪ, ಕೆ.ಬಿ. ಜಗದೀಶ್ ಜೋಡುಬೀಟಿ, ಎಚ್.ಕೆ. ಜಗದೀಶ್ ಅವರುಗಳನ್ನು ಸನ್ಮಾನಿಸಲಾಯಿತು.
ಆಂಜನೇಯ ಸೇವಾ ಟ್ರಸ್ಟ್ ಅಧ್ಯಕ್ಷೆ ಸ್ಮಿತಾ ಜಯಮೋಹನ್ ಆಚಾರ-ವಿಚಾರದ ಬಗ್ಗೆ ವಿಚಾರ ಮಂಡನೆ ಮಾಡಿದರು. ಭಾಷೆ, ಸಂಸ್ಕೃತಿ ಪೋಷಣೆಗೆ ಪಾಲಕರ ಪಾತ್ರ ಮುಖ್ಯವಾಗುತ್ತದೆ. ಮನೆಯಿಂದ ಸಂಸ್ಕೃತಿ ರಕ್ಷಣೆಯಾಗಬೇಕು ಎಂದರು. ಓಣಂ ಸದ್ಯ ಕಾರ್ಯಕ್ರಮದ ಮೂಲಕ ಸಹಭೋಜನ ನಡೆಯಿತು.
ಶಾಸಕ ಕೆ. ಜಿ. ಬೋಪಯ್ಯ ಉದ್ಘಾಟಿಸಿ ಮಾತನಾಡಿ, ಜನಾಂಗದ ಆಚಾರ-ವಿಚಾರ, ಸಂಸ್ಕೃತಿ ಪೋಷಣೆ ಮುಖ್ಯ. ಸಮಾಜಕ್ಕೆ ಬೇಕಾದ ಸರ್ಕಾರದ ಅನುದಾನ ನೀಡುವುದಾಗಿ ಭರವಸೆ ನೀಡಿದರು.
ಚಲನಚಿತ್ರ ನಿರ್ದೇಶಕಿ ಕೊಟ್ಟುಕತ್ತೀರ ಯಶೋಧಾ ಪ್ರಕಾಶ್ ಮಾತನಾಡಿ, ಹಬ್ಬಗಳನ್ನು ಸರಳವಾಗಿಯಾದರೂ ಮನೆಗಳಲ್ಲಿ ಆಚರಣೆ ಮಾಡುವುದು. ಜನಾಂಗದ ಸಂಸ್ಕೃತಿ ಪೋಷಣೆಗೆ ಒತ್ತು ನೀಡಬೇಕು ಎಂದರು.
ಸಮಾಜದ ಅಧ್ಯಕ್ಷ ಎನ್.ಆರ್. ಅಮೃತ್ ರಾಜ ಮಾತನಾಡಿ, ಸಮಾಜವು ನಮ್ಮ ಜನಾಂಗದ ಒಗ್ಗಟ್ಟು, ಪರಸ್ಪರ ಸಹಭಾಗಿತ್ವ, ನೋವು-ನಲಿವುಗಳ ಸಂಗಮಕ್ಕೆ ವೇದಿಕೆ ಕಲ್ಪಿಸಿಕೊಟ್ಟಿದೆ. ಸಮುದಾಯ ಭವನ ನಿರ್ಮಾಣ, ನಮ್ಮ ಸಂಸ್ಕೃತಿ ಪೋಷಣೆಗೆ ಯೋಜನೆ ರೂಪಿಸಲಾಗಿದೆ ಎಂದರು.
ಹೈಕೋರ್ಟ್ ಹಿರಿಯ ವಕೀಲ ಎ.ಎಸ್. ಪೊನ್ನಣ್ಣ, ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ ಸಮಾಜದ ಗೌ. ಅಧ್ಯಕ್ಷ ಕೆ. ವೇಣುಗೋಪಾಲ್ ಮೆನೊನ್, ಸ್ಥಾಪಕ ಅಧ್ಯಕ್ಷ ಪಿ.ಎಸ್. ಶರತ್ಕಾಂತ್, ಕಾನೂನು ಸಲಹೆಗಾರ ಕೆ.ಬಿ. ಸಂಜೀವ್, ಉದ್ಯಮಿ ಕೆ.ಪಿ. ಮೀರಾ ಗೋಪಿನಾಥ್ ಇದ್ದರು. ಉಪಾಧ್ಯಕ್ಷ ಸುಬ್ರಮಣಿ ಸ್ವಾಗತಿಸಿದರು. ಕಾನೂನು ಸಲಹೆಗಾರ ಕೆ.ಬಿ. ಸಂಜೀವ ಪ್ರಾಸ್ತಾವಿಕ ಭಾಷಣ ಮಾಡಿದರು. ಜ್ಯೋತಿ ಅರುಣ್ ನಿರೂಪಿಸಿದರು.