ಮಡಿಕೇರಿ, ಸೆ. ೨೫: ಹಂಡ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾಸಭೆ ಸಂಘದ ಅಧ್ಯಕ್ಷ ಎ.ಟಿ. ಜಯರಾಂ ಅಧ್ಯಕ್ಷತೆಯಲ್ಲಿ ಸಂಘದ ಸಭಾಂಗಣದಲ್ಲಿ ನಡೆಯಿತು.

ಜಯರಾಂ ಮಾತನಾಡಿ, ಸಂಘವು ಬೆಳೆಯಬೇಕಾದರೆ ಪ್ರತಿಯೊಬ್ಬ ಸದಸ್ಯರು ಎಲ್ಲಾ ವ್ಯವಹಾರಗಳನ್ನು ಸಂಘದಲ್ಲಿ ಮಾಡಿದರೆ ಮಾತ್ರ ಸಾಧ್ಯವಾಗುತ್ತದೆ. ಸಂಘದಲ್ಲಿ ೨೫೦೧ ಸದಸ್ಯರು ಇದ್ದು, ರೂ. ೧,೪೩,೪೫,೬೯೪ ಪಾಲು ಬಂಡವಾಳವಿದೆ. ಸಂಘದಲ್ಲಿ ರೂ. ೨,೪೬,೨೩,೭೦೯ ವಿವಿಧ ಠೇವಣಿಯಿದ್ದು, ಸದಸ್ಯರುಗಳಿಗೆ ರೂ. ೧೨,೮೧,೪೬,೬೪೫ ವಿವಿಧ ರೀತಿಯ ಸಾಲ ವಿತರಿಸಲಾಗಿದೆ. ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಶಾಖೆ ಶನಿವಾರಸಂತೆಯಿAದ ರೂ. ೧೧,೯೫,೩೯,೪೭೦ ಕೆ.ಸಿ.ಸಿ. ಸಾಲವನ್ನು ಪಡೆಯಲಾಗಿದೆ. ಸಂಘದಿAದ ಪ್ರಸಕ್ತ ಸಾಲಿನಲ್ಲಿ ಶೇ. ೧೦೦ ರಷ್ಟು ವಸೂಲಾತಿಯಾಗಿದ್ದು, ರೂ. ೧೬,೧೯,೪೪೩.೩೮ ನಿವ್ವಳ ಲಾಭಗಳಿಸಿದೆ ಎಂದರು.

ಈ ಸಂದರ್ಭ ಉಪಾಧ್ಯಕ್ಷೆ ಎಸ್.ಜಿ. ಕುಸುಮ, ನಿರ್ದೇಶಕರುಗಳಾದ ಕೆ.ಪಿ. ಯಶೋದ, ಎಸ್.ಎಸ್. ಗಣೇಶ್, ಎಸ್.ಆರ್. ವೀರೇಂದ್ರ ಕುಮಾರ್, ಎಸ್.ಜೆ. ರವಿಕುಮಾರ್, ಕೆ.ಆರ್. ಲಕ್ಷö್ಮಶೆಟ್ಟಿ, ಕೆ.ಎನ್. ಮಧು, ಎಂ.ಪಿ. ನಾಗೇಶ, ಕೆ.ಪಿ. ನಿರಂಜನ್, ಕೆ.ಎಂ. ದೇವರಾಜು, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಂ.ಎನ್. ಬಸಪ್ಪ ಹಾಗೂ ಸಿಬ್ಬಂದಿ ವರ್ಗದವರು ಹಾಜರಿದ್ದರು. ಸಂಘದ ಸದಸ್ಯರುಗಳಾದ ಎಸ್.ಕೆ. ವೀರಪ್ಪ, ಕೆ.ವಿ. ಮಂಜುನಾಥ್, ಎ.ಟಿ. ಹನುಮಂತಪ್ಪ, ಜಿ.ಎಂ. ಕಾಂತರಾಜು, ಎಸ್.ಬಿ. ನಂಜಪ್ಪ, ಎ.ಕೆ. ವೇದಮೂರ್ತಿ, ಎಂ.ಪಿ. ಮೋಹನ್, ಹೆಚ್.ಎಸ್. ಶಿವಾನಂದ, ಎಂ.ಸಿ. ವೀರಭದ್ರಪ್ಪ, ಕೆ.ಎಂ. ವಿನೂತ, ಶಂಕರ್ ಇವರುಗಳು ಸಂಘದ ಅಭಿವೃದ್ಧಿಗೆ ಸಲಹೆ ನೀಡಿದರು.