ಮಡಿಕೇರಿ, ಸೆ. ೨೪: ಕಾನೂನು ಮಾಪನಶಾಸ್ತç ಇಲಾಖೆ ವತಿಯಿಂದ ತಾತ್ಕಾಲಿಕ ಸತ್ಯಾಪನೆ ಮುದ್ರೆ ಶಿಬಿರ ತಾ. ೨೬ ರಿಂದ ೩೦ ರವರೆಗೆ ವಿ.ಎಸ್.ಎಸ್.ಎನ್. ಬ್ಯಾಂಕ್ ಸುಂಟಿಕೊಪ್ಪದಲ್ಲಿ ಏರ್ಪಡಿಸಲಾಗಿದೆ. ವರ್ತಕರು ಉಪಯೋಗಿಸುವ ಅಳತೆ, ತೂಕ ಮತ್ತು ತೂಕದ ಸಾಧನಗಳನ್ನು ಹಾಜರುಪಡಿಸಿ ಸತ್ಯಾಪನೆ ಮುದ್ರೆ ಮಾಡಿಸಿಕೊಳ್ಳುವಂತೆ ತಿಳಿಸಲಾಗಿದೆ.