ಸೋಮವಾರಪೇಟೆ, ಸೆ. ೨೫: ಸಮೀಪದ ಗೋಣಿಮರೂರು ಹಾಲು ಉತ್ಪಾದಕರ ಸಹಕಾರ ಸಂಘದ ವಾರ್ಷಿಕ ಮಹಾಸಭೆ ಸಂಘದ ಅಧ್ಯಕ್ಷೆ ಜಿ.ಡಿ. ಕೋಮಲ ಅವರ ಅಧ್ಯಕ್ಷತೆಯಲ್ಲಿ ಗೋಣಿಮರೂರು ಬಸವೇಶ್ವರ ದೇವಾಲಯ ಸಭಾಂಗಣದಲ್ಲಿ ನಡೆಯಿತು.

ಮಹಾಸಭೆಯನ್ನು ಸೋಮವಾರ ಪೇಟೆ ಪಶು ವೈದ್ಯಕೀಯ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಎಸ್.ವಿ. ಬದಾಮಿ ಉದ್ಘಾಟಿಸಿ ಮಾತನಾಡಿ, ಗೋಣಿಮರೂರು ಹಾಲು ಉತ್ಪಾದಕರ ಸಹಕಾರ ಸಂಘವು ಸ್ಥಾಪನೆಯಾಗಿ ಒಂದೂವರೆ ವರ್ಷದಲ್ಲೆ ಉತ್ತಮ ಸಾಧನೆ ಮಾಡುತ್ತಿರುವುದು ಶ್ಲಾಘನೀಯ ಎಂದರು.

ಪಶು ಸಾಕಾಣಿಕೆ, ಜಾನುವಾರುಗಳಿಗೆ ಹರಡುವ ರೇಬಿಸ್ ವೈರಸ್ ಮುಂಜಾಗ್ರತೆ, ಜಾನುವಾರು ಮತ್ತು ಸಾಕುಪ್ರಾಣಿಗಳಿಗೆ ರೇಬಿಸ್ ನಿರೋಧಕ ಚುಚ್ಚುಮದ್ದು ಹಾಕಿಸುವ ಬಗ್ಗೆ ಇದೇ ಸಂದರ್ಭ ಮಾಹಿತಿ ನೀಡಿದರು.

ಆಡಳಿತ ಮಂಡಳಿಯ ಹಿರಿಯ ನಿರ್ದೇಶಕ ಎ.ಬಿ. ಧರ್ಮಪ್ಪ ಮಾತನಾಡಿ, ಸಂಘವು ಸ್ಥಾಪನೆಗೊಂಡ ಅಲ್ಪ ಸಮಯದಲ್ಲೆ ಅಭಿವೃದ್ಧಿಯತ್ತ ದಾಪುಗಾಲು ಹಾಕಲು ಸಂಘದ ಜಾನುವಾರುಗಳಿಗೆ ಹರಡುವ ರೇಬಿಸ್ ವೈರಸ್ ಮುಂಜಾಗ್ರತೆ, ಜಾನುವಾರು ಮತ್ತು ಸಾಕುಪ್ರಾಣಿಗಳಿಗೆ ರೇಬಿಸ್ ನಿರೋಧಕ ಚುಚ್ಚುಮದ್ದು ಹಾಕಿಸುವ ಬಗ್ಗೆ ಇದೇ ಸಂದರ್ಭ ಮಾಹಿತಿ ನೀಡಿದರು.

ಆಡಳಿತ ಮಂಡಳಿಯ ಹಿರಿಯ ನಿರ್ದೇಶಕ ಎ.ಬಿ. ಧರ್ಮಪ್ಪ ಮಾತನಾಡಿ, ಸಂಘವು ಸ್ಥಾಪನೆಗೊಂಡ ಅಲ್ಪ ಸಮಯದಲ್ಲೆ ಅಭಿವೃದ್ಧಿಯತ್ತ ದಾಪುಗಾಲು ಹಾಕಲು ಸಂಘದ ಮಂಡಿಸಿದರು. ಹಾಸನ ಹಾಲು ಒಕ್ಕೂಟದ ಕೂಡಿಗೆ ಡೇರಿಯ ವಿಸ್ತರಣಾಧಿಕಾರಿ ಬಿ.ವಿ. ವೀಣಾ, ಆಡಳಿತ ಮಂಡಳಿ ನಿರ್ದೇಶಕರುಗಳಾದ ಯಶೋಧ ತಿಮ್ಮಯ್ಯ, ಜಿ.ಎಂ. ಮೋಹನ್, ಕೆ.ಪಿ. ಸುಲೋಚನ, ವಿಮಲ ತಿಮ್ಮಯ್ಯ, ಕೆ.ಜೆ. ಕಲಾವತಿ, ವಿಶಾಲಾಕ್ಷಿ ಸಿದ್ದಪ್ಪ, ರಾಣಿ ಜೋಯಪ್ಪ, ಟಿ.ಆರ್. ಓಂಕಾರೇಶ್ವರ, ಬಿ.ಡಿ. ಶಾಂತಮ್ಮ, ಆಶಾ ದೇವರಾಜು ಉಪಸ್ಥಿತರಿದ್ದರು.