ಕೂಡಿಗೆ, ಸೆ.೨೫: ತೊರೆನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಿದ್ದಲಿಂಗಪುರ ಗ್ರಾಮಕ್ಕೆ ಹೊಂದಿಕೊAಡAತೆ ಇರುವ ನವಗ್ರಾಮದಲ್ಲಿ ನೂತನವಾಗಿ ಕಾಂಕ್ರೀಟ್ ರಸ್ತೆಯ ನಿರ್ಮಾಣಕ್ಕೆ ಎಸ್‌ಸಿಪಿ ಯೋಜನೆ ಮೂಲಕ ೨೦ ಲಕ್ಷ ವೆಚ್ಚದ ರಸ್ತೆ ಕಾಮಗಾರಿಗೆ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಭೂಮಿ ಪೂಜೆ ನೆರವೇರಿಸಿದರು.

ಈ ಸಂದರ್ಭ ತೊರೆನೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೂಪ, ಉಪಾಧ್ಯಕ್ಷ ಎಂ.ಟಿ. ಬೇಬಿ, ಸದಸ್ಯರಾದ ಕೆ.ಬಿ. ದೇವರಾಜ್, ಟಿ.ಸಿ. ಶಿವಕುಮಾರ್, ನಿಂಗಾಜಮ್ಮ, ಸಾವಿತ್ರಿ, ತೀರ್ಥಾನಂದ, ಮಹದೇವ, ಶೋಭ, ಯಶೋಧ, ಶಾಸಕರ ಆಪ್ತ ಸಹಾಯಕ ರವಿ, ಸಿದ್ದಲಿಂಗಪುರ ಗ್ರಾಮ ಪ್ರಮುಖರಾದ ಆನಂದ, ಪೂವಯ್ಯ, ತಮ್ಮಯ್ಯ, ಧನಂಜಯ ಬಾಲಪ್ಪ ಪೂಜಾರಿ, ವಿವಿಧ ಮಹಿಳಾ ಘಟಕ ಸದಸ್ಯರು ಸೇರಿದಂತೆ ಸಿದ್ದಲಿಂಗಪುರ ಹಸಿನಗುಪ್ಪಿ ಬಸವಗುಪ್ಪಿ ಸಿದ್ದಲಿಂಗಪುರ ಗ್ರಾಮಸ್ಥರು ಹಾಜರಿದ್ದರು.