ಗುಡ್ಡೆಹೊಸೂರು, ಸೆ. ೨೪: ಇಲ್ಲಿಗೆ ಸಮೀಪದ ನಂಜರಾಯ ಪಟ್ಟಣ ಕೃಷಿ ಪತ್ತಿನ ಸಹಕಾರ ಸಂಘದ ಸಭೆಯು ಶಾಲಾ ಆವರಣದಲ್ಲಿ ಸಂಘದ ಅಧ್ಯಕ್ಷ ಬಲ್ಲಡಿಚಂಡ ಸಿ. ಮಾದಯ್ಯ (ಮುರಳಿ) ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಈ ಸಂದರ್ಭ ಸಂಘದ ಸದಸ್ಯರು ಕಾರ್ಯ ಚಟುವಟಿಕೆಯ ಬಗ್ಗೆ ಚರ್ಚೆ ನಡೆಸಲಾಯಿತು. ಸದಸ್ಯರ ಪಾಲು ಹಣದ ಮೇಲೆ ಶೇ. ೧೩ ಡಿವಿಡೆಂಡ್ ನೀಡಲು ಮಹಾಸಭೆ ಯಲ್ಲಿ ಒಪ್ಪಿಗೆ ಪಡೆಯಲಾಯಿತು. ಸಂಘದಲ್ಲಿ ಒಟ್ಟು ೨೩೦೦ ಸದಸ್ಯರಿದ್ದು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯರು ಸಭೆಯಲ್ಲಿ ಭಾಗವಹಿಸಿದ್ದರು. ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಕೆ.ಟಿ. ಧನಂಜಯ ಅವರು ಸರ್ವರನ್ನು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

ಸಂಘದ ಸಿಬ್ಬಂದಿಗಳಾದ ರೇಶ್ಮಾ ಮತ್ತು ಅಕ್ಷತಾ ಅವರು ಪ್ರಾರ್ಥಿಸಿದರು. ಸಂಘದ ವ್ಯಾಪ್ತಿಗೆ ಒಳಪಡುವ ೭ ಮತ್ತು ೧೦ನೇ ತರಗತಿಯಲ್ಲಿ ಹೆಚ್ಚು ಅಂಕ ಪಡೆದ ತಲಾ ಮೂವರು ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಅಲ್ಲದೆ ಉತ್ತಮ ವಾಗಿ ಕಾರ್ಯ ನಿರ್ವಹಿಸುತ್ತಿರುವ ೬ ಸ್ವಸಹಾಯ ಸಂಘಗಳನ್ನು ಗುರುತಿಸಿ ಬಹುಮಾನ ನೀಡಲಾಯಿತು.

ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷ ಬಿ.ಎಸ್. ಧನಪಾಲ್ ಮತ್ತು ನಿರ್ದೇಶಕರುಗಳಾದ ಡಿ.ಎಲ್. ಮಹೇಶ್‌ಚಂದ್ರ (ಮನುಮಹೇಶ್), ಪಿ.ಬಿ. ಅಶೋಕ್ (ನಂದ) ಬಿ.ಎನ್. ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

ಸಂಘದ ಸಿಬ್ಬಂದಿಗಳಾದ ರೇಶ್ಮಾ ಮತ್ತು ಅಕ್ಷತಾ ಅವರು ಪ್ರಾರ್ಥಿಸಿದರು. ಸಂಘದ ವ್ಯಾಪ್ತಿಗೆ ಒಳಪಡುವ ೭ ಮತ್ತು ೧೦ನೇ ತರಗತಿಯಲ್ಲಿ ಹೆಚ್ಚು ಅಂಕ ಪಡೆದ ತಲಾ ಮೂವರು ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಅಲ್ಲದೆ ಉತ್ತಮ ವಾಗಿ ಕಾರ್ಯ ನಿರ್ವಹಿಸುತ್ತಿರುವ ೬ ಸ್ವಸಹಾಯ ಸಂಘಗಳನ್ನು ಗುರುತಿಸಿ ಬಹುಮಾನ ನೀಡಲಾಯಿತು.

ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷ ಬಿ.ಎಸ್. ಧನಪಾಲ್ ಮತ್ತು ನಿರ್ದೇಶಕರುಗಳಾದ ಡಿ.ಎಲ್. ಮಹೇಶ್‌ಚಂದ್ರ (ಮನುಮಹೇಶ್), ಪಿ.ಬಿ. ಅಶೋಕ್ (ನಂದ) ಬಿ.ಎನ್. ಜಗ್ಗ, ಭುವನ್, ಶಿವಕುಮಾರ್, ಬಿ.ಜಿ. ಸುರೇಶ್, ರತೀಶ್, ಎನ್.ಯು. ವಿಜು ಇದ್ದರು. ಸಂಘದ ಏಳಿಗೆಯ ಪೂರಕವಾಗಿ ಮಹಾಸಭೆಯಲ್ಲಿ ಸಲಹೆ ಸೂಚನೆ ನೀಡಲಾಯಿತು. ೨೦೨೧-೨೨ನೇ ಸಾಲಿನಲ್ಲಿ ಇಲ್ಲಿನ ಸಹಕಾರ ಸಂಘವು ೬೮.೦೫ ಲಕ್ಷಗಳ ಲಾಭದಲ್ಲಿ ಮುನ್ನಡೆಯುತ್ತಿರುವುದಾಗಿ ಮುರಳಿ ಮಾದಯ್ಯ ವಿವರಿಸಿದರು. ಸಹಾಯಕ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಬಿ.ವಿ. ಲತೀಶ್ ರೈ ಸೇರಿದಂತೆ ಎಲ್ಲಾ ಸಿಬ್ಬಂದಿಗಳು ಹಾಜರಿದ್ದರು.