ವೀರಾಜಪೇಟೆ, ಸೆ. ೨೪: ವಿಜಯದಶಮಿ ಮತ್ತು ಆಯುಧ ಪೂಜಾ ಕಾರ್ಯಕ್ರಮದ ಅಂಗವಾಗಿ ಕೊಡಗು ಜಿಲ್ಲಾ ಖಾಸಗಿ ಬಸ್ ಕಾರ್ಮಿಕರ ಸಂಘದ ವತಿಯಿಂದ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ ಎಂದು ಕೊ.ಜಿ.ಖಾ.ಬ. ಕಾರ್ಮಿಕರ ಸಂಘದ ಸಮಿತಿ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದೆ.
ಸಂಘದ ಕಚೇರಿಯಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಕುಂಬೇಯAಡ ಸುರೇಶ್ ದೇವಯ್ಯ ಅವರು ಕೊಡಗಿನಲ್ಲಿ ಸಂಭವಿಸಿದ ಜಲಪ್ರಳಯ ಮತ್ತು ಕೊರೊನಾದಿಂದಾಗಿ ಆಯುಧ ಪೂಜೆಯನ್ನು ಸರಳವಾಗಿ ಆಚರಿಸಿದ್ದು, ಪ್ರಸ್ತುತ ವರ್ಷದಲ್ಲಿ ೧೫ ನೇ ವರ್ಷದ ಆಯುಧ ಪೂಜಾ ಮಹೋತ್ಸವವನ್ನು ಅದ್ಧೂರಿಯಾಗಿ ಆಚರಿಸಲಾಗುತ್ತಿದೆ. ಖಾಸಗಿ ಬಸ್ ಕಾರ್ಮಿಕ ಕುಟುಂಬಗಳಿಗೆ ವಿವಿಧ ಕಾರ್ಯಕ್ರಮಗಳನ್ನು ವೇದಿಕೆಯಲ್ಲಿ ಹಮ್ಮಿಕೊಳ್ಳಲಾಗುತ್ತಿದೆ ಎಂದರು.
ಕೊಡಗು ಜಿಲ್ಲಾ ಖಾಸಗಿ ಬಸ್ ಕಾರ್ಮಿಕರ ಸಂಘದ ಕಾರ್ಯದರ್ಶಿ ಗಳಾದ ಜ್ಯೂಡಿವಾಜ್ ಅವರು ಮಾತನಾಡಿ, ಆಯುಧ ಪೂಜಾ ಅಂಗವಾಗಿ ಅ. ೪ ರಂದು ಬೆಳಿಗ್ಗೆ ೧೦.೩೦ಕ್ಕೆ ಸಂಘದ ಕಚೇರಿಯಲ್ಲಿ ಸಾಮೂಹಿಕ ಆಯುಧ ಪೂಜೆ, ಅಂದು ಮಧ್ಯಾಹ್ನ ಸಾರ್ವಜನಿಕರಿಗೆ ಅನ್ನ ಸಂತರ್ಪಣೆ ಕಾರ್ಯಕ್ರಮ, ಸಂಜೆ ೫ ಗಂಟೆಗೆ ಕೊಡಗು ಜಿಲ್ಲೆಯ ಪ್ರತಿಷ್ಠಿತ ಕಲಾ ತಂಡದಿAದ ರಸಮಂಜರಿ ಕಾರ್ಯಕ್ರಮ, ವೇದಿಕೆಯಲ್ಲಿ ಎಸ್.ಎಸ್.ಎಲ್.ಸಿ., ಪಿ.ಯು.ಸಿ. ಮತ್ತು ಪದವಿ ಸಂಘದ ಸದಸ್ಯರ ಕುಟುಂಬ ವರ್ಗದ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮ ನಗರ ಮತ್ತು ಸುತ್ತಮುತ್ತಲಿನ ಪ್ರತಿಭಾನ್ವಿತ ಮಕ್ಕಳಿಂದ ಸಾಂಸ್ಕೃತಿಕಾ ಕಾರ್ಯಕ್ರಮ ನಡೆಯಲಿವೆ. ಬಳಿಕ ರಾತ್ರಿ ೯ ಗಂಟೆಗೆ ಡಿ.ಜೆ. ನೈಟ್ ಕಾರ್ಯಕ್ರಮ ನಡೆಯಲಿದೆ.
ಪ್ರತಿಕಾಗೋಷ್ಠಿಯಲ್ಲಿ ಸಂಘದ ಮಾಜಿ ಅಧ್ಯಕ್ಷ ಎಂ.ಸಿ. ಅಶೋಕ್, ಕೋಶಾಧಿಕಾರಿ ವಿ.ಎ. ದಿನೇಶ್, ನಿರ್ದೇಶಕ ಎಂ.ಕೆ. ಮಹೇಶ್ ಅವರುಗಳು ಹಾಜರಿದ್ದರು.