ಉಜ್ವಲ್ ರಂಜಿತ್ ಮಡಿಕೇರಿ, ಸೆ. ೨೪: ಐತಿಹಾಸಿಕ ನಾಡಹಬ್ಬ ಮಡಿಕೇರಿ ದಸರಾ ಜನೋತ್ಸವಕ್ಕೆ ಅಂತಿಮ ಸಿದ್ಧತೆಗಳು ನಡೆಯುತ್ತಿದ್ದು, ತಾ. ೨೬ರಂದು (ನಾಳೆ) ಸಂಜೆೆ ೫ ಗಂಟೆಗೆ ನಗರದ ಪಂಪಿನಕೆರೆಯಲ್ಲಿ ನಾಲ್ಕು ಶಕ್ತಿ ದೇವತೆಗಳ ಕರಗ ಉತ್ಸವಕ್ಕೆ ಚಾಲನೆ ದೊರೆಯುವ ಮೂಲಕ ಉತ್ಸವ ಆರಂಭವಾಗಲಿದ್ದು, ತಾ. ೨೭ರಂದು ನವರಾತ್ರಿಯ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರಾರಂಭಗೊಳ್ಳಲಿವೆ. ಈ ನಿಟ್ಟಿನಲ್ಲಿ ಮಡಿಕೇರಿ ದಸರಾ ಸಮಿತಿ ವತಿಯಿಂದ ಅಂತಿಮ ತಯಾರಿ ನಡೆಯುತ್ತಿದೆ.

ನಾಲ್ಕು ಶಕ್ತಿ ದೇವತೆಗಳಾದ ಕುಂದುರುಮೊಟ್ಟೆ ಶ್ರೀ ಚೌಟಿ ಮಾರಿಯಮ್ಮ ದೇವಾಲಯ, ಶ್ರೀ ಕೋಟೆ ಮಾರಿಯಮ್ಮ ದೇವಾಲಯ, ಶ್ರೀ ದಂಡಿನ ಮಾರಿಯಮ್ಮ ದೇವಾಲಯ ಹಾಗೂ ಶ್ರೀ ಕಂಚಿಕಾಮಾಕ್ಷಿ ದೇವಾಲಯದ ಕರಗಗಳಿಗೆ ನಾಳೆ ಸಂಜೆ ಪಂಪಿನಕೆರೆಯಲ್ಲಿ ಸಾಂಪ್ರದಾಯಿಕ ಪೂಜೆ - ಪುನಸ್ಕಾರಗಳೊಂದಿಗೆ ಕರಗಗಳ ನಗರ ಪ್ರದಕ್ಷಿಣೆಗೆ ಚಾಲನೆ ನೀಡಲಾಗುತ್ತದೆ.

ಕರಗ ಪ್ರದಕ್ಷಿಣೆ ಮಾರ್ಗ

ನಾಳೆ ಸಂಜೆ ಪಂಪಿನ ಕೆರೆಯಿಂದ ಹೊರಡುವ ಕರಗಗಳು ಕೋದಂಡರಾಮ ದೇವಾಲಯ, ಚೌಡೇಶ್ವರಿ ದೇವಾಲಯ , ಕನ್ನಿಕಾಪರಮೇಶ್ವರಿ ಹಾಗೂ ಪೇಟೆ ಶ್ರೀ ರಾಮಮಂದಿರ ದೇವಾಲಯಗಳಿಗೆ ತೆರಳಿ ಪೂಜೆ ಸಲ್ಲಿಸಿ, ನಂತರ ತಮ್ಮ ತಮ್ಮ ದೇವಾಲಯಗಳಿಗೆ ಹಿಂತಿರುಗಲಿವೆ. ತಾ.೨೭ರಂದು ಕುಂದುರುಮೊಟ್ಟೆ ಶ್ರೀ ಚೌಟಿ ಮಾರಿಯಮ್ಮ ದೇವಾಲಯ ಕರಗವು ಮಧ್ಯಾಹ್ನ ೧ ಗಂಟೆಗೆ ದೇವಾಲಯದಿಂದ ಹೊರಟು ಚಿಕ್ಕಪೇಟೆ, ಶಾಂತಿನಿಕೇತನ, ಸುದರ್ಶನ ಅತಿಥಿಗೃಹ, ಮುನೀಶ್ವರ ದೇವಸ್ಥಾನ ರಸ್ತೆ, ಬ್ರಾಹ್ಮಣರ ಬೀದಿ, ಪುಟಾಣಿ ನಗರ, ದೇಚೂರಿನಲ್ಲಿ ಪ್ರದಕ್ಷಿಣೆ ಹಾಕಲಿದೆ. ತಾ. ೨೮ರಂದು ಮಧ್ಯಾಹ್ನ ೧ ಗಂಟೆಗೆ ದೇವಾಲಯದಿಂದ ಹೊರಟು ಚಿಕ್ಕಪೇಟೆ ಮಾರ್ಗದ ಮೂಲಕ ಓಂಕಾರೇಶ್ವರ ದೇವಾಲಯ ರಸ್ತೆ, ಸಿವಿಎಸ್ ರಸ್ತೆ, ಚೈನ್‌ಗೇಟ್, ಗೌಡ ಸಮಾಜ, ದಾಸವಾಳ, ರಾಣಿಪೇಟೆಯಿಂದ ವಿನಾಯಕ ರೈಸ್‌ಮಿಲ್‌ವರೆಗೆ ಪ್ರದಕ್ಷಿಣೆ ತೆರಳಲಿದೆÉ. ತಾ. ೩೦ರಂದು ಗೌಳಿಬೀದಿ, ಪೆನ್ಷನ್‌ಲೇನ್, ಕೆಇಬಿ ರಸ್ತೆ, ಮೊಣ್ಣಪ್ಪ ಗ್ಯಾರೇಜ್ ವೃತ್ತ, ಅ. ೧ರಂದು ಸ್ಟಿವರ್ಟ್ಹಿಲ್, ಹೊಸ ಬಡಾವಣೆ, ಡಿಎಆರ್ ವಸತಿಗೃಹ, ಕಾನ್ವೆಂಟ್ ರಸ್ತೆ, ಕಾನ್ವೆಂಟ್ ಜಂಕ್ಷನ್‌ನಿAದ ವಿನಾಯಕ ರೈಸ್‌ಮಿಲ್‌ವರೆಗೆ ಪ್ರದಕ್ಷಿಣೆ ನಡೆಸಲಿದೆ.

ಶ್ರೀಕೋಟೆ ಮಾರಿಯಮ್ಮ ದೇವಾಲಯ ಕರಗವು ತಾ. ೨೭ರಂದು ಬೆಳಿಗ್ಗೆ ೧೧.೩೦ ಗಂಟೆಗೆ ನೈವೇದ್ಯ ಪೂಜೆಯೊಂದಿಗೆ

(ಮೊದಲ ಪುಟದಿಂದ) ಮಧ್ಯಾಹ್ನ ೧೨.೩೦ ಗಂಟೆಗೆ ನಗರ ಪ್ರದಕ್ಷಿಣೆ ಆರಂಭಿಸಲಿದ್ದು, ಶಾಂತಿನಿಕೇತನ ಮೂಲಕ ಸುದರ್ಶನ ಅತಿಥಿಗೃಹ ಕೆಳಭಾಗ, ಜಯನಗರ, ಬ್ರಾಹ್ಮಣರ ಬೀದಿ, ಅಶ್ವಥಕಟ್ಟೆ, ದೇಚೂರು ಶ್ರೀರಾಮಮಂದಿರ, ತಾ. ೨೮ರಂದು ಬೆಳಿಗ್ಗೆ ೧೧.೩೦ ಗಂಟೆ ಬಳಿಕ ಓಂಕಾರೇಶ್ವರ ದೇವಾಲಯ ಮೂಲಕ ಬ್ರಾಹ್ಮಣರ ಬೀದಿ, ದೇಚೂರು, ಜೂನಿಯರ್ ಕಾಲೇಜು ರಸ್ತೆ, ದಾಸವಾಳ, ಖಾದಿ ಭಂಡಾರದ ಮೂಲಕ ಅಪ್ಪಚ್ಚಕವಿ ರಸ್ತೆ, ಪ್ರಸಾದ್‌ಲಾಡ್ಜ್ ಮುಂಭಾಗದಿAದ ಕೈಗಾರಿಕಾ ಬಡಾವಣೆ, ಡೈರಿಫಾರಂ ರಸ್ತೆ, ರಿಮ್ಯಾಂಡ್ ಹೋಂ ಹಿಂಭಾಗ, ಎಲ್‌ಐಸಿ ಕಚೇರಿ ರೇಸ್‌ಕೋರ್ಸ್ ರಸ್ತೆ, ತಾ. ೩೦ರಂದು ಮಧ್ಯಾಹ್ನ ೧೨.೩೦ ಗಂಟೆಗೆ ಪೆನ್ಷನ್‌ಲೇನ್, ರಾಜ್‌ದರ್ಶನ್ ಹಿಂಭಾಗದ ಮುನೀಶ್ವರ ದೇವಾಲಯದ ಮೂಲಕ ಕುಂದುರುಮೊಟ್ಟೆ ದೇವಾಲಯದಲ್ಲಿ ಪೂಜೆ ಸಲ್ಲಿಸಿ, ಜಡ್ಜ್ ಕ್ವಾಟ್ರಸ್‌ಗಾಗಿ ಸ್ಟಿವರ್ಟ್ಹಿಲ್, ಶ್ರೀಪ್ರಸನ್ನ ಗಣಪತಿ ದೇವಾಲಯ, ಹೊಸಬಡಾವಣೆ, ಗೌಳಿಬೀದಿಯಲ್ಲಿ ಪ್ರದಕ್ಷಿಣೆ ನಡೆಯಲಿದೆ.

ಶ್ರೀ ಕಂಚಿಕಾಮಾಕ್ಷಿ ಹಾಗೂ ದಂಡಿನ ಮಾರಿಯಮ್ಮ ದೇವಾಲಯ ಕರಗಗಳು ತಾ.೨೭ರಂದು ಕುಂದುರುಮೊಟ್ಟೆ ದೇವಾಲಯ, ಮಂಗಳಾದೇವಿನಗರ, ಶಾಂತಿನಿಕೇತನ, ಸುದರ್ಶನ ಅತಿಥಿಗೃಹ, ಬ್ರಾಹ್ಮಣರ ಬೀದಿ, ಪುಟಾಣಿನಗರ, ತಾ.೨೮ರಂದು ದಂಡಿನ ಮಾರಿಯಮ್ಮ ದೇವಾಲಯ ವ್ಯಾಪ್ತಿ, ಜೂನಿಯರ್ ಕಾಲೇಜು ರಸ್ತೆ, ದಾಸವಾಳ ರಸ್ತೆ, ಪೆನ್‌ಷನ್‌ಲೇನ್, ತಾ.೨೯ರಂದು ಕೈಗಾರಿಕಾ ಬಡಾವಣೆ, ರಾಣಿಪೇಟೆ, ಕಾನ್ವೆಂಟ್ ಜಂಕ್ಷನ್, ಡೈರಿಫಾರಂ, ರಿಮ್ಯಾಂಡ್ ಹೋಂ ವ್ಯಾಪ್ತಿ, ತಾ.೩೦ರಂದು ಹೊಸಬಡಾವಣೆ ಹಾಗೂ ಗೌಳಿಬೀದಿಯಲ್ಲಿ ಪ್ರದಕ್ಷಿಣೆ ನಡೆಸಲಿವೆ. ಅ.೫ರ ವಿಜಯದಶಮಿಯಂದು ನಾಲ್ಕೂ ಕರಗಗಳು ನಗರ ವ್ಯಾಪ್ತಿಯಲ್ಲಿ ಪ್ರದಕ್ಷಿಣೆ ಹಾಕಿ ದಶಮಂಟಪಗಳಿಗೆ ಪೂಜೆ ಸಲ್ಲಿಸಿ ನಂತರ ಬನ್ನಿಮಂಟಪಕ್ಕೆ ತೆರಳಿ ಬನ್ನಿ ಕಡಿಯುವ ಮೂಲಕ ಉತ್ಸವಕ್ಕೆ ತೆರೆ ಬೀಳಲಿದೆ.

ದಶಮಂಟಪಗಳ ತಯಾರಿ

ಮಡಿಕೇರಿ ದಸರಾ ಉತ್ಸವದ ಪ್ರಮುಖ ಆಕರ್ಷಣೆಯಾದ ದಶಮಂಟಪಗಳು ಈ ಬಾರಿಯ ಉತ್ಸವಕ್ಕೆ ಸಜ್ಜಾಗುತ್ತಿವೆ. ವಿವಿಧ ಕಥಾ ಸಾರಾಂಶಗಳೊAದಿಗೆ ಒಂದಕ್ಕಿAತ ಒಂದು ವಿಭಿನ್ನವಾಗಿ ತಯಾರಾಗುತ್ತಿದ್ದು, ವಿಜಯದಶಮಿಯಂದು ರಾತ್ರಿ ಮಡಿಕೇರಿ ನಗರದಲ್ಲಿ ದೇವಲೋಕವನ್ನು ಸೃಷ್ಟಿಸುವ ನಿಟ್ಟಿನಲ್ಲಿ ಸಿದ್ಧತೆ ಕೈಗೊಂಡಿವೆ. ಜನಾಕರ್ಷಣೆ ಪಡೆಯುವುದರ ಜೊತೆಗೆ ಬಹುಮಾನ ಗಳಿಸುವ ನಿಟ್ಟಿನಲ್ಲಿ ಹಗಲು - ರಾತ್ರಿ ಎನ್ನದೆ ಮಂಟಪ ಸಮಿತಿಗಳು ಕೆಲಸ ಮಾಡುತ್ತಿವೆ. ಈ ನಡುವೆ ಪೊಲೀಸ್ ಇಲಾಖೆಯಿಂದ ಇಂದು ಡಿವೈಎಸ್ಪಿ ಗಜೇಂದ್ರ ಪ್ರಸಾದ್ ನೇತೃತ್ವದಲ್ಲಿ ದಶಮಂಟಪ ಸಮಿತಿ ಸಭೆ ನಡೆಸಲಾಯಿತು. ಸಭೆಯಲ್ಲಿ ದಶಮಂಟಪಗಳು ಶೋಭಾಯಾತ್ರೆ ಹೊರಡುವ ಸಮಯ, ಮಂಟಪ ಸಮಿತಿಗಳು ಕೈಗೊಂಡಿರುವ ಸಿದ್ಧತೆ ಇತ್ಯಾದಿ ಬಗ್ಗೆ ಡಿವೈಎಸ್ಪಿ ಗಜೇಂದ್ರ ಪ್ರಸಾದ್ ಮಾಹಿತಿ ಪಡೆದುಕೊಂಡರು. ಧ್ವನಿವರ್ಧಕ ಬಳಕೆಗೆ ಸಂಬAಧಿಸಿದAತೆ ಇರುವ ನ್ಯಾಯಾಲಯದ ಆದೇಶದ ಬಗ್ಗೆಯೂ ಮಂಟಪ ಸಮಿತಿಗಳ ಗಮನ ಸೆಳೆದ ಗಜೇಂದ್ರ ಪ್ರಸಾದ್, ನಿಯಮ ಪಾಲಿಸುವ ಮೂಲಕ ಮಂಟಪ ಸಮಿತಿಗಳು ಇಲಾಖೆಯೊಂದಿಗೆ ಕೈಜೋಡಿಸುವಂತೆ ಮನವಿ ಮಾಡಿದರು. ಮಡಿಕೇರಿ ದಸರಾ ಐತಿಹಾಸಿಕ ಹಿನ್ನೆಲೆಯುಳ್ಳ ಆಚರಣೆಯಾಗಿದ್ದು, ಧ್ವನಿರ್ವಧಕ ಬಳಕೆಗೆ ವಿಜಯದಶಮಿಯಂದು ಇಡೀ ರಾತ್ರಿ ಅವಕಾಶ ನೀಡಬೇಕೆಂದು ದಶಮಂಟಪ ಹಾಗೂ ಮಂಟಪ ಸಮಿತಿಗಳ ಪ್ರಮುಖರು ಕೋರಿದರು. ನ್ಯಾಯಾಲಯದ ಆದೇಶ ಪಾಲನೆ ಮಾಡಬೇಕಾಗಿರುವುದು ಇಲಾಖೆಯ ಕರ್ತವ್ಯವಾಗಿದ್ದು, ಈ ನಿಟ್ಟಿನಲ್ಲಿ ಮಂಟಪ ಸಮಿತಿಗಳು ಸಹಕಾರ ನೀಡಬೇಕೆಂದು ಗಜೇಂದ್ರ ಪ್ರಸಾದ್ ಹೇಳಿದರು. ಸಭೆಯಲ್ಲಿ ದಶಮಂಟಪ ಸಮಿತಿ ಅಧ್ಯಕ್ಷ ಮನು ಮಂಜುನಾಥ್ ಹಾಗೂ ಮಂಟಪ ಸಮಿತಿಗಳ ಪ್ರಮುಖರು, ಪೊಲೀಸ್ ಇಲಾಖಾಧಿಕಾರಿಗಳು ಹಾಜರಿದ್ದರು.

ಸಾಂಸ್ಕೃತಿಕ ಕಾರ್ಯಕ್ರಮಗಳು

ದಸರಾ ಉತ್ಸವದ ಹಿನ್ನೆಲೆಯಲ್ಲಿ ಮಡಿಕೇರಿ ದಸರಾ ಸಾಂಸ್ಕೃತಿಕ ಸಮಿತಿಯಿಂದ ಒಂಭತ್ತು ದಿನಗಳ ಕಾಲ ಗಾಂಧಿಮೈದಾನದ ಭವ್ಯ ವೇದಿಕೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಮಳೆಯಿಂದ ಕಾರ್ಯಕ್ರಮಗಳ ವೀಕ್ಷಣೆಗೆ ಯಾವುದೇ ಅಡ್ಡಿಯಾಗದ ರೀತಿಯಲ್ಲಿ ಗಾಂಧಿ ಮೈದಾನದಲ್ಲಿ ಈಗಾಗಲೇ ಸುಮಾರು ೭೫ ಲಕ್ಷ ವೆಚ್ಚದಲ್ಲಿ ಶಾಶ್ವತ ಗ್ಯಾಲರಿ ನಿರ್ಮಾಣ ಕಾರ್ಯವು ಭರದಿಂದ ನಡೆಯುತ್ತಿದ್ದು, ತಾ. ೨೭ರಂದು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಚಾಲನೆ ದೊರೆಯಲಿದೆ. ಪ್ರತಿದಿನ ಸಂಜೆ ೬.೩೦ ಗಂಟೆಗೆ ಸಾಂಸ್ಕೃತಿಕ ಕಲರವ ಆರಂಭವಾಗಲಿದೆ. ತಾ. ೨೭ರಂದು ಕುಶಾಲನಗರದ ಕುಂದನ ನೃತ್ಯಾಲಯದಿಂದ ನೃತ್ಯ ವೈವಿಧ್ಯ, ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ರಿಯಾಲಿಟಿ ಶೋ ಖ್ಯಾತಿಯ ಚೈತಾಲಿ ಚಿಲಾತ ಅವರಿಂದ ನೃತ್ಯ, ರವಿ ಭೂತನಕಾಡು ತಂಡದಿAದ ಗಾನವೈವಿಧ್ಯ, ವೀರಾಜಪೇಟೆ ನಾಟ್ಯ ಮಯೂರಿ ನೃತ್ಯ ಶಾಲೆಯಿಂದ ನೃತ್ಯ ವೈಭವ, ಶಾಂತಳ್ಳಿಯ ಬಿ.ಎ. ಗಣೇಶ್ ಅವರಿಂದ ಸುಗಮ ಸಂಗೀತ ಮೂಡಿಬರಲಿದೆ. ತಾ. ೨೮ರಂದು ಮಡಿಕೇರಿಯ ಟೀಂ ಆ್ಯಟಿಟ್ಯೂಡ್ ತಂಡದಿAದ ಪ್ಯೂಶನ್ ಡ್ಯಾನ್ಸ್, ಮಡಿಕೇರಿಯ ಸ್ನೇಹ ಮಧುಕರ್ ಶೇಟ್ ತಂಡದಿAದ ಸಂಗೀತ ಸುಧೆ, ವೀರಾಜಪೇಟೆ ಜಗನ್ಮೋಹನ ನಾಟ್ಯಾಲಯದಿಂದ ಭಾರತೀಯ ಶಾಸ್ತಿçÃಯ ನೃತ್ಯ ಪ್ರಾಕಾರ, ಜ್ಞಾನ ಐತಾಳ್ ನೇತೃತ್ವದ ಹೆಜ್ಜೆನಾದ ತಂಡದಿAದ ನೃತ್ಯ ವೈವಿಧ್ಯ, ಕುಶಾಲನಗರದ ನಟರಾಜ ಸಂಗೀತ ನೃತ್ಯ ಕಲಾವೃಂದದಿAದ ನೃತ್ಯ ರೂಪಕ, ಕುಶಾಲನಗರದ ಉದಯ ನಂಜಪ್ಪ ಅವರಿಂದ ಭಾವ ಸಂಗೀತ ನಡೆಯಲಿದೆ.

ತಾ.೨೯ರಂದು ಮಂಗಳೂರಿನ ಅರೆಹೊಳೆ ಪ್ರತಿಷ್ಠಾನದಿಂದ ಸಂಗೀತ ನೃತ್ಯ ವೈವಿಧ್ಯ, ಮಡಿಕೇರಿಯ ಡ್ಯಾನ್ಸ್ ಲ್ಯಾಬ್ ಅಂಡ್ ಫಿಟ್‌ನೆಸ್ ಸ್ಟುಡಿಯೋದಿಂದ ನೃತ್ಯ, ಕುಶಾಲನಗರದ ನಿವೇದಿತ ಸುಭಾಶ್ ಅವರಿಂದ ಗೀತಗಾಯನ, ಅವಂದೂರಿನ ಇಂಚರ ಕಲಾತಂಡದಿAದ ನೃತ್ಯ, ಕೊಡಗು ಪತ್ರಕರ್ತರ ಸಂಘದಿAದ ಗಾನ ವೈವಿಧ್ಯ, ಕೂರ್ಗ್ ಹನಿಮೆಲೊಡಿಸ್ ತಾತಂಡ ಪ್ರತಾಪ್ ಬೆಳ್ಯಪ್ಪ ತಂಡದಿAದ ಸಂಗೀತ ರಸಮಂಜರಿ ಮೂಡಿ ಬರಲಿದೆ.

ತಾ. ೩೦ರಂದು ಮಹಿಳಾ ದಸರಾ ಪ್ರಯುಕ್ತ ಸಂಜೆ ೬.೩೦ರಿಂದ ನಗರಸಭಾ ಸದಸ್ಯೆಯರಿಂದ ಸ್ವಾಗತ ನೃತ್ಯ, ಕೊಡವ ಪೊಮ್ಮಕ್ಕಡ ಕೂಟದಿಂದ ಕಲಾವೈವಿಧ್ಯ, ಮಂಗಳೂರಿನ ವೈಷ್ಣವಿ ಭಟ್ ಅವರಿಂದ ಸ್ಯಾಕ್ಸೋಫೋನ್ ವಾದನ, ಗೋಣಿಕೊಪ್ಪ ನಿಸರ್ಗಕಲಾ ತಂಡದಿAದ ನೃತ್ಯ, ಜಿಲ್ಲಾ ಸಹಕಾರಿ ಮಹಿಳಾ ನೌಕರರಿಂದ ನೃತ್ಯ ವೈವಿಧ್ಯ, ಮಡಿಕೇರಿ ಹಿಂದೂ ಮಲಯಾಳಿ ಸಂಘದಿAದ ತಿರುವಾದಿರ ಕಳಿ, ಕೊಡಗು ಗೌಡ ಮಹಿಳಾ ಒಕ್ಕೂಟದಿಂದ ಯಕ್ಷಗಾನ ವೈಭವ, ಲಯನ್ಸ್ ಕ್ಲಬ್ ಸದಸ್ಯೆಯರಿಂದ ದಾಂಡಿಯಾ ನೃತ್ಯ, ಪ್ರೀತಾಕೃಷ್ಣ ತಂಡದಿAದ ನೃತ್ಯ ವೈಭವ, ಮೈಸೂರಿನ ಗಾನಲಹರಿ ತಂಡದ ದಿವ್ಯಾರಾಮಚಂದ್ರ, ಶರಧಿ ಪಾಟೀಲ್ ಅವರಿಂದ ಸಂಗೀತ ಸಂಭ್ರಮ ನಡೆಯಲಿದೆ. ಅಕ್ಟೋಬರ್ ೧ ರಂದು ಯುವ ಕಲೋತ್ಸವ ನಡೆಯಲಿದ್ದು, ಯುವ ಕಲೋತ್ಸವದಂದು ಬೆಳಿಗ್ಗೆ ೧೧ ಗಂಟೆಗೆ ಕರವಲೆ ಭಗವತಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಗಾಂಧಿ ಮೈದಾನದವರೆಗೆ ಸುಸ್ಥಿರ ಪ್ರವಾಸೋದ್ಯಮ ಹಾಗೂ ವೈಜ್ಞಾನಿಕ ಕಸನಿರ್ವಹಣೆ ಬಗ್ಗೆ ಬೈಕ್‌ಗಳ ಮೂಲಕ ಜಾಗೃತಿ ಜಾಥಾ ನಡೆಯಲಿದೆ. ಮಧ್ಯಾಹ್ನ ೨ ಗಂಟೆಗೆ ರಿಮೋಟ್ ಕಂಟ್ರೋಲ್ ಕಾರ್ ಬ್ಯಾಟಲ್, ಸಂಜೆ ೪.೩೦ ಗಂಟೆಗೆ ಸ್ವಾಗತ ನೃತ್ಯ ಬಳಿಕ ೫ ಗಂಟೆಗೆ ದಸರಾ ಸಮಿತಿಯ ಸಭಾ ಕಾರ್ಯಕ್ರಮ, ೬.೩೦ರ ನಂತರ ನೃತ್ಯ ಸ್ಪರ್ಧೆ, ೭.೩೦ ಗಂಟೆಗೆ ಸೌಂದರ್ಯ ಸ್ಪರ್ಧೆ, ಸಾಂಪ್ರದಾಯಿಕ ನಡಿಗೆ, ಮಾತು, ರಾತ್ರಿ ೮ ಗಂಟೆಗೆ ಚಿತ್ರರಂಗದ ಗಣ್ಯರಿಂದ ಕಾರ್ಯಕ್ರಮ, ೮.೧೫ಕ್ಕೆ ಯುವ ಸಾಧಕರಿಗೆ ಸನ್ಮಾನ, ಪದಕ ಪ್ರದಾನ ಸಮಾರಂಭ, ರಾತ್ರಿ ೯ ಗಂಟೆ ಬಳಿಕ ರ‍್ಯಾಪ್‌ಗೀತೆ ಹಾಗೂ ನೃತ್ಯ ಸ್ಪರ್ಧೆ, ರಾತ್ರಿ ೧೦.೩೦ಕ್ಕೆ ಡಿಜೆ ಕಾರ್ಯಕ್ರಮ, ರಾತ್ರಿ ೧೧ರಿಂದ ೧೧.೩೦ರವರೆಗೆ ಸಮಾರೋಪ ಸಮಾರಂಭ ನಡೆಯಲಿದೆ.

ಅ. ೨ರಂದು ಜಾನಪದ ದಸರಾ ಪ್ರಯುಕ್ತ ನಾಗರಹೊಳೆ ನಾಣಚ್ಚಿ ಹಾಡಿಯ ರಮೇಶ್ ತಂಡದಿAದ ಜಾನಪದ ನೃತ್ಯ ಗಾನ ವೈವಿಧ್ಯ, ಮಡಿಕೇರಿ ಕೊಡವ ಸಮಾಜ ತಂಡದಿAದ ಉಮ್ಮತ್ತಾಟ್, ಹೆಸರಾಂತ ವಾಗ್ಮಿ ಪ್ರೊ. ಕೃಷ್ಣೇಗೌಡ ಅವರ ಪ್ರಸ್ತುತಿ ಜಾನಪದ ಮತ್ತು ಜೀವನೋಲ್ಲಾಸ, ಬಳ್ಳಾರಿಯ ಬಸವರಾಜ್ ಅವರಿಂದ ಉಘೇ ಉಘೇ ಕಾರ್ಯಕ್ರಮಗಳು ಮೂಡಿಬರಲಿವೆ. ಅ.೩ರಂದು ಮಕ್ಕಳ ದಸರಾ ಪ್ರಯುಕ್ತ ಟಿವಿ ರಿಯಾಲಿಟಿ ಶೋ ಖ್ಯಾತಿಯ ಜ್ಞಾನ ಗುರುರಾಜ್, ಮಿಥುನ್ ಮುದ್ದಯ್ಯ ಪ್ರಸ್ತುತಿ ಪುಟಾಣಿ ಕಲರವ, ಜಿಲ್ಲೆಯ ಬಾಲಪ್ರತಿಭೆಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ವಿದುಷಿ ಕಾವ್ಯಶ್ರೀ ಕಪಿಲ್ ದುಗ್ಗಳ ಇವರ ಕಲಾಕಾವ್ಯ ನಾಟ್ಯ ಶಾಲೆಯಿಂದ ರಾಮಾಯಣದರ್ಶನಂ ನೃತ್ಯ, ವಿಕ್ರಂ ಜಾದೂಗಾರ್ ಅವರಿಂದ ಜಾದೂ ಪ್ರದರ್ಶನ ಏರ್ಪಡಿಸಲಾಗಿದೆ. ಅ. ೪ರಂದು ಆಯುಧ ಪೂಜೆ ಪ್ರಯುಕ್ತ ಹೇಮಂತ್ ಹೇರಂಭ ಸಹೋದರರಿಂದ ವೇಣುವಾದನ, ಮಂಗಳೂರಿನ ನೃತ್ಯಲಹರಿ ನೃತ್ಯಾಲಯದಿಂದ ಪುಣ್ಯಕೋಟಿ ನೃತ್ಯ ರೂಪಕ, ಭಾಗಮಂಡಲ ಅಭಿನಯ ಕಲಾಮಿಲನ ತಂಡದಿAದ ನೃತ್ಯ ವೈವಿಧ್ಯ, ಮಡಿಕೇರಿಯ ನಾಟ್ಯನಿಕೇತನ ಸಂಗೀತ ನೃತ್ಯ ಶಾಲೆಯಿಂದ ಸಾಂಸ್ಕೃತಿಕ ವೈವಿಧ್ಯ, ಮೈಸೂರಿನ ರಿದಂ ಮೇರ‍್ಸ್ ತಂಡದಿAದ ಸಂಗೀತ ರಸಮಂಜರಿ, ಕಂಚಿಕಾಮಾಕ್ಷಿ ಮಹಿಳಾ ಸಂಘದಿAದ ತಿರುವಾದಿರಕಳಿ, ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ರಿಯಾಲಿಟಿ ಶೋ ವಿಜೇತ ಕೊಡಗಿನ ರಾಹುಲ್ ರಾವ್ ಅವರಿಂದ ನೃತ್ಯ ಕಾರ್ಯಕ್ರಮಗಳು ನಡೆಯಲಿದೆ. ಅ.೫ರ ವಿಜಯದಶಮಿಯಂದು ಸುಬ್ರಮಣ್ಯದ ಮುದ್ರಾ ಸ್ಕೂಲ್ ಆಫ್ ಡ್ಯಾನ್ಸ್ ತಂಡದಿAದ ನೃತ್ಯ ವೈಭವ, ಹೆಸರಾಂತ ಯುವ ಗಾಯಕ ಶರಣ್ ಅಯ್ಯಪ್ಪ ವೈಷ್ಣವಿ ಅವರಿಂದ ಸಂಗೀತ ರಸಮಂಜರಿ, ಅನ್ವಿತ ಕುಮಾರ್ ತಂಡದಿAದ ಗೀತಗಾಯನ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ರಾತ್ರಿ ೧೦ ಗಂಟೆಯ ನಂತರ ಕನ್ನಡ ಚಲನಚಿತ್ರ ಹಿನ್ನೆಲೆ ಗಾಯಕಿ ಚೈತ್ರಾ ತಂಡದಿAದ ಸಂಗೀತ ರಸಮಂಜರಿ ಮೂಡಿಬರಲಿದೆ. ಇವುಗಳಲ್ಲದೆ ಅ. ೪ರಂದು ದಸರಾ ಬಹುಭಾಷಾ ಕವಿಗೋಷ್ಠಿ ಗಾಂಧಿ ಮೈದಾನದಲ್ಲಿ ನಡೆಯಲಿದ್ದು, ತಾ. ೨೮, ೨೯, ಅ. ೨ರಂದು ದಸರಾ ಕ್ರೀಡಾಕೂಟಗಳನ್ನು ದಸರಾ ಕ್ರೀಡಾ ಸಮಿತಿಯಿಂದ ಏರ್ಪಡಿಸಲಾಗಿದೆ.