*ಗೋಣಿಕೊಪ್ಪ, ಸೆ. ೨೩: ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ತಾಲೂಕು ಮಟ್ಟದ ಕ್ರೀಡಾಕೂಟಕ್ಕೆ ಪೊನ್ನಂಪೇಟೆ ಕರ್ನಾಟಕ ಪಬ್ಲಿಕ್ ಶಾಲೆ ಮೈದಾನದಲ್ಲಿ ತಾಲೂಕು ತಹಶೀಲ್ದಾರ್ ಎನ್.ಎಸ್. ಪ್ರಶಾಂತ್ ಚಾಲನೆ ನೀಡಿದರು. ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ಮೂಕಳೆರ ಕುಶಾಲಪ್ಪನವರು ಅಂರ‍್ರಾಷ್ಟಿçÃಯ ರಗ್ಬಿ ಆಟಗಾರ ಮಾದಂಡ ತಿಮ್ಮಯ್ಯ ಕ್ರೀಡಾ ಜ್ಯೋತಿ ಬೆಳಗಿದರು. ಅಂರ‍್ರಾಷ್ಟಿçÃಯ ಹಾಕಿ ಕ್ರೀಡಾಪಟು ಎನ್.ಪಿ ಯಜ್ಞರವರು ಮಕ್ಕಳಿಗೆ ಕ್ರೀಡಾ ಪ್ರತಿಜ್ಞಾ ವಿಧಿ ಭೋದಿಸಿದರು. ಪೊನ್ನಂಪೇಟೆ ಗ್ರಾಪಂ ಉಪಾಧ್ಯಕ್ಷೆ ಬೊಟ್ಟಂಗಡ ದಶಮಿ ಸದಾ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಿತು.
ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀಶೈಲ ಬೀಳಗಿ ಸಮನ್ವಯಾಧಿಕಾರಿ ವನಜಾಕ್ಷಿ, ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕಿ ಗಾಯತ್ರಿ, ಎಸ್‌ಡಿಎಂಸಿ ಅಧ್ಯಕ್ಷೆ ರಘುನಾಥ್ ಶರ್ಮ, ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಡಾ. ಸದಾಶಿವಯ್ಯ ಪಲ್ಲೆದ್, ಪ್ರಗತಿ ಶಾಲೆಯ ಮುಖ್ಯ ಶಿಕ್ಷಕ ಬಿಂದು ವಿ ಕುರುಪ್, ನಿರ್ದೇಶಕ ಡಾ ಮಾರ್ಗರೇಟ್ ಆಗಸ್ಟಿನ್, ಕೆಪಿಎಸ್ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಎಂ.ಯು ಚಂಗಪ್ಪ , ಕೆಪಿಎಸ್ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಬಿ. ಎಂ. ವಿಜಯ್, ರಾಜ್ಯ ಸರಕಾರಿ ನೌಕರರ ಸಂಘದ ಅಧ್ಯಕ್ಷ ಬಿ.ಎಸ್ ಗುರುರಾಜು, ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಬಯವಂಡ ಉತ್ತಪ್ಪ, ಜಿಲ್ಲಾ ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಪುಗ್ಗೆರ ಪ್ರವೀಣ್, ತಾಲೂಕು ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಕೆ.ಆರ್ ಸುಬ್ಬಯ್ಯ, ಜಿಲ್ಲಾ ಅನುದಾನಿತ ಶಾಲಾ ನೌಕರರ ಸಂಘದ ಅಧ್ಯಕ್ಷ ಪಿ.ಎ ಪ್ರಭುಕುಮಾರ್ ಸೇರಿದಂತೆ ಇನ್ನಿತರರು ಹಾಜರಿದ್ದರು.
ಕ್ರೀಡಾಕೂಟದಲ್ಲಿ ಜಿಲ್ಲಾಮಟ್ಟಕ್ಕೆ ಪ್ರಾಥಮಿಕ ಬಾಲಕರ ವಿಭಾಗದಲ್ಲಿ ೧೦೦ ಮೀಟರ್ ಓಟ ರಾಜೇಶ್ ಬಾಡಗರಕೇರಿ, ೪೦೦ ಮೀಟರ್ ಓಟ ಸಿದ್ದು ಬಿ.ಎಸ್ ಗ್ಲೇಲೂರ್ನ್, ೬೦೦ ಮೀಟರ್ ಓಟ ಅಯ್ಯಪ್ಪ ಪಿ.ಸಿ ಕೆಪಿಎಸ್ ಪೊನ್ನಂಪೇಟೆ, ಉದ್ದಜಿಗಿತ ವೈ.ಎ. ಸಂದೀಪ್ ಜಿಎಂಪಿ ಹಾತೂರು, ಭಾರತ ಗುಂಡು ಎಸೆತ ವಿ.ಆರ್ ಕೌಶಿಕ್, ಚಕ್ರ ಎಸೆತ ವೈ.ಸಿ ಸುಬ್ರಮಣಿ, ಬಾಲಕಿಯರ ವಿಭಾಗ ೧೦೦ ಮೀಟರ್ ಓಟ ನೇನಾ ಕರುಂಬಯ್ಯ, ಟಿ. ಶೆಟ್ಟಿಗೇರಿ ರೂಟ್ಸ್ ಶಾಲೆ, ೪೦೦ಮೀಟರ್ ಓಟ ಬಿಜೆ ಭುವಿ ಲಿಟಲ್ ಫ್ಲವರ್ ಶಾಲೆ ಗೋಣಿಕೊಪ್ಪ, ೬೦೦ ಮೀಟರ್ ಸಜಿನಿ ಕೆಪಿಎಸ್ ಪೊನ್ನಂಪೇಟೆ, ಉದ್ದ ಜಿಗಿತ ಜನನಿ ಎಚ್.ಜಿ ರಾಜೇಶ್ವರಿ ಶಾಲೆ ದೇವರಪುರ, ಪ್ರೌಢ ಶಾಲಾ ಬಾಲಕರ ವಿಭಾಗ ೧೦೦ಮೀಟರ್ ಓಟ ದವಲ್ ಎಸ್, ನಮ್ಮ ಪ್ರೌಢ ಶಾಲೆ ಪಾಲಿಬೆಟ್ಟ, ೪೦೦ ಮೀಟರ್ ಓಟ ರುತ್ವಿಕ್ ಲಯನ್ಸ್ ಕಳತ್ಮಾಡು, ೮೦೦ ಮೀಟರ್ ಓಟ ಶಿವಾನ್ ಪೊನ್ನಣ್ಣ ಸಂತ ಅಂತೋಣಿ ಪೊನ್ನಂಪೇಟೆ, ೩೦೦೦ ಮೀಟರ್ ಓಟ ಗಣಪತಿ ಬಿ.ಜೆ ಸಂತ ಅಂತೋಣಿ ಪ್ರೌಢ ಶಾಲೆ ಪೊನ್ನಂಪೇಟೆ, ಭಾರದ ಗುಂಡು ಎಸೆತ ಧನುಷ್ ಕುಮಾರ್, ಸಂತ ಅಂತೋಣಿ ಪೊನ್ನಂಪೇಟೆ, ಭರ್ಜಿ ಎಸೆತ ಪ್ರಾರ್ಥನ್ ಪಾಲಿಬೆಟ್ಟ ಲೂರ್ಡ್ಸ್, ತಟ್ಟೆ ಎಸೆತ ಮೊಹಮದ್ ಆಜಿಮ್ ಲೂರ್ಡ್ಸ್, ಉದ್ದ ಜಿಗಿತ ಇರ್ಫಾನ್ ಬಿಳುಗುಂದ, ಎತ್ತರ ಜಿಗಿತ ರಾಮು ಪಿ.ಎ ಶ್ರೀಮಂಗಲ ಪ್ರೌಢಶಾಲೆ, ಪ್ರೌಢ ಶಾಲಾ ಸಮಗ್ರ ಪ್ರಶಸ್ತಿ ಲಯನ್ಸ್ ಪ್ರೌಢಶಾಲೆ ಕಳತ್ಮಾಡು ಮತ್ತು ಪ್ರಾಥಮಿಕ ಸಮಗ್ರ ಪ್ರಶಸ್ತಿ ಸರ್ವದೈವತಾ ಶಾಲೆ ಅರುವತೋಕ್ಲು ಪಡೆದುಕೊಂಡಿತು.