ಮಡಿಕೇರಿ, ಸೆ. ೨೩: ಕೇಂದ್ರ ಸರಕಾರದ ಹಣಕಾಸು ಸಚಿವಾಲಯ ರಾಷ್ಟçಮಟ್ಟದ ನಿರ್ದೇಶಕರು ಹಾಗೂ ಕಾರ್ಯಕ್ರಮ ನಿರ್ವಾಹಕರು ಆಗಿರುವ ಅಪೂರ್ವ ಸಿಂದೆ ಜಿಲ್ಲೆಗೆ ಆಗಮಿಸಿ ನಗರದ ಕಾವೇರಿ ಲೇಔಟ್‌ನಲ್ಲಿರುವ ನೆಹರು ಯುವ ಕೇಂದ್ರದ ಕಚೇರಿಗೆ ಭೇಟಿ ನೀಡಿದರು.
ಈ ಸಂದರ್ಭ ನೆಹರು ಯುವ ಕೇಂದ್ರ ಕೊಡಗು ಜಿಲ್ಲಾ ಯುವ ಒಕ್ಕೂಟ, ಮಡಿಕೇರಿ ತಾಲೂಕು ಯುವ ಒಕ್ಕೂಟದ ಮೂಲಕ ಪೇಟ ತೊಡಿಸಿ, ಶಾಲು ಹೊದಿಸಿ, ಫಲತಾಂಬೂಲ ಹಾಗೂ ಹೂವಿನ ಸಸಿಯೊಂದನ್ನು ನೀಡುವುದರ ಮೂಲಕ ಸ್ವಾಗತಿಸಲಾಯಿತು. ಸ್ವಾಗತ ಸ್ವೀಕರಿಸಿ ಮಾತನಾಡಿದ ಸಿಂದೆಯ ವರು, ಜಿಲ್ಲೆಗೆ ಇದೇ ಮೊದಲ ಭಾರಿಗೆ ಆಗಮಿಸುತ್ತಿದ್ದೇನೆ. ವೀರ-ಶೂರರ, ವಿಶಿಷ್ಟ ಸಂಸ್ಕೃತಿಯ ಜಿಲ್ಲೆಯ ಬಗ್ಗೆ ಕೇಳಿ ತಿಳಿದುಕೊಂಡಿದೇನಷ್ಟೆ. ಇದೀಗ ನೋಡಿ ಖುಷಿ ತಂದಿದೆ ಎಂದರು.
ನೆಹರು ಯುವ ಕೇಂದ್ರದ ಜಿಲ್ಲಾ ಯುವ ಸಮನ್ವಯಾಧಿಕಾರಿ ಕೆ.ಟಿ.ಕೆ. ಉಲ್ಲಾಸ್ ಮನವಿ ಪತ್ರ ನೀಡಿ, ಕಳೆದ ೧೫ ವರ್ಷಗಳಿಂದ ಕೇಂದ್ರದ ಕಚೇರಿಯಲ್ಲಿ ಶಾಶ್ವತ ಸಮನ್ವಯ ಅಧಿಕಾರಿ ಇಲ್ಲ. ಲೆಕ್ಕಾಧಿಕಾರಿಗಳು, ಕಚೇರಿ ಸಹಾಯಕರಿಲ್ಲದೆ ಯುವ ಚಟುವಟಿಕೆಗಳಿಗೆ ಹಿನ್ನಡೆ ಆಗುತ್ತಿರುವುದಲ್ಲದೆ, ಸುದರ್ಶನ ವೃತ್ತದಲ್ಲಿ ನೆಹರು ಯುವ ಕೇಂದ್ರಕ್ಕೆAದು ಮೀಸಲಿರಿಸಿದ ೧೦ ಸೆಂಟ್ ಜಾಗದಲ್ಲಿ ಇದುವರೆಗೂ ಕಟ್ಟಡ ನಿರ್ಮಿಸಲು ಸಾಧ್ಯವಾಗಿಲ್ಲ. ಸರಕಾರದ ಮೂಲಕ ೧ ಕೋಟಿ ಅನುದಾನ ಬಿಡುಗಡೆಗೊಳಿಸಿ, ಶಾಶ್ವತ ಕಚೇರಿಯ ಕಟ್ಟಡ ನಿರ್ಮಿಸು ವಂತಾಗಬೇಕೆAದು ಕೋರಿಕೊಂಡರು. ಮನವಿಗೆ ಸ್ಪಂದಿಸಿದ ಸಿಂದೆ ಅವರು, ಸದ್ಯದಲ್ಲಿಯೇ ಮನವಿಯನ್ನು ಕೇಂದ್ರ ಸರಕಾರದ ಗಮನಕ್ಕೆ ತರುವುದರ ಮೂಲಕ ಶಾಶ್ವತ ಪರಿಹಾರಕ್ಕಾಗಿ ಪ್ರಯತ್ನಿಸಲಾಗುವು ದೆಂದು ಭರವಸೆ ನೀಡಿದರು.
ಯುವ ಒಕ್ಕೂಟದ ಮೂಲಕ ವರ್ಷದಲ್ಲಿ ನಡೆಸಲಾಗುವ ವಿವಿಧ ಕಾರ್ಯಕ್ರಮಗಳ ವರದಿಯನ್ನು ಪಡೆದ ಸಿಂದೆ ಅವರು, ಒಕ್ಕೂಟದ ಬಗ್ಗೆ ಮೆಚ್ಚುಗೆ ಯೊಂದಿಗೆ, ಕಾರ್ಯವೈಖರಿಗೆ ಶ್ಲಾಘನೆ ವ್ಯಕ್ತಪಡಿ ಸಿದರು. ಮೂಲತಃ ಗ್ವಾಲಿಯರ್‌ನಲ್ಲಿ ನೆಲೆಸಿರುವ ಅಪೂರ್ವ ಸಿಂದೆ ಅವರೊಂದಿಗೆ ಪತ್ನಿ ಸುನಂದಾ ಹಾಗೂ ಪುತ್ರಿ ಅನನ್ಯ ಜೊತೆಗಿದ್ದರು.
ಸ್ವಾಗತದ ಸಂದರ್ಭ ಜಿಲ್ಲಾ ಯುವ ಒಕ್ಕೂಟದ ಅಧ್ಯಕ್ಷ ಪಿ.ಪಿ. ಸುಕುಮಾರ್, ಕಾರ್ಯದರ್ಶಿ ಕೊಕ್ಕಲೆ ಗಣೇಶ್, ಮಡಿಕೇರಿ ತಾಲೂಕು ಯುವ ಒಕ್ಕೂಟದ ಅಧ್ಯಕ್ಷ ಬಾಳಾಡಿ ದಿಲೀಪ್‌ಕುಮಾರ್, ಮಾಜಿ ಅಧ್ಯಕ್ಷರಾದ ಕೂಡಂಡ ಸಾಬ ಸುಬ್ರಮಣಿ, ಡಿ. ನವೀನ್ ದೇರಳ, ರಾಷ್ಟಿçÃಯ ಸೇವಾ ಕಾರ್ಯ ಕರ್ತರಾದ ಸಂತೋಷ್, ರಂಜಿತ್, ಕಚೇರಿ ಸಹಾಯಕಿ ದೀಪ್ತಿ ಉಪಸ್ಥಿತರಿದ್ದರು.