ಮಡಿಕೇರಿ, ಸೆ. ೨೩: ಕೊಡಗು ಅನುದಾನರಹಿತ ಶಾಲೆಗಳ ಒಕ್ಕೂಟದ ಆಡಳಿತ ಮಂಡಳಿ ಮಹಾಸಭೆಯನ್ನು ಮಡಿಕೇರಿಯ ಹೊಟೇಲ್ ಮಯೂರ ವ್ಯಾಲಿ ವ್ಯೂನಲ್ಲಿ ಇತ್ತೀಚೆಗೆ ಆಯೋಜಿಸಲಾಗಿತ್ತು.

ಸಭೆಯ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಝರು ಗಣಪತಿ ಅವರು ವಹಿಸಿದ್ದರು. ಸಂಘದ ಕಾರ್ಯದರ್ಶಿ ಕೋಟ್ರಂಗಡ ತಿಮ್ಮಯ್ಯ, ಉಪಾಧ್ಯಕ್ಷ ದಾಮೋದರ್ ಹಾಗೂ ಕಾನೂನು ಸಲಹೆಗಾರ ಎಂ.ಕೆ. ಪೂವಯ್ಯ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಮುಂದಿನ ಮೂರು ವರ್ಷಕ್ಕೆ ಆಡಳಿತ ಮಂಡಳಿಯನ್ನು ರಚಿಸಲಾಯಿತು. ಅಧ್ಯಕ್ಷರಾಗಿ ಕೋಳೇರ ಝರು ಗಣಪತಿ, ಉಪಾಧ್ಯಕ್ಷರಾಗಿ ಎಂ.ಟಿ. ದಾಮೋದರ್ ಹಾಗೂ ಕಾರ್ಯದರ್ಶಿಯಾಗಿ ಕೋಟ್ರಂಗಡ ತಿಮ್ಮಯ್ಯ ಅವರು ಹಾಗೂ ಕಾನೂನು ಸಲಹೆಗಾರರಾಗಿ ಮಾದಂಡ ಕೆ. ಪೂವಯ್ಯ ಅವರನ್ನು ಆಯ್ಕೆ ಮಾಡಲಾಯಿತು.

ಒಕ್ಕೂಟದ ಆಡಳಿತ ಮಂಡಳಿ ಸದಸ್ಯರಾಗಿ ಮಣಿ ಮಹಮ್ಮದ್, ಎನ್.ಡಿ. ವಿಜು, ಸಚಿನ್ ವಾಸುದೇವ್, ಬೋಪಣ್ಣ, ಮೋಹನ್, ಲಿಖಿತ್ ದಾಮೋದರ್, ರಶ್ಮಿ, ಸುನಿತ, ಶ್ರೀಹರಿ, ವೆಂಕಟೇಶ್ ಹಾಗೂ ಜಿತೇಂದ್ರ ಆಯ್ಕೆಯಾಗಿದ್ದಾರೆ.

ರಾಜ್ಯ ಕೇಮ್ಸ್ ಜಿಲ್ಲಾ ಪ್ರತಿನಿಧಿಯಾಗಿ ಸುಜಲಾದೇವಿ ಹಾಗೂ ರಾಜ್ಯ ರುಪ್ಸಾ ಜಿಲ್ಲಾ ಪ್ರತಿನಿಧಿಯಾಗಿ ಉಮಾ ಪ್ರಭಾಕರ್ ಮುಂದುವರಿಯಲಿದ್ದಾರೆ.