ಶನಿವಾರಸಂತೆ, ಸೆ. ೨೨: ಸಮೀಪದ ಕೊಡ್ಲಿಪೇಟೆ ಹೋಬಳಿ ವ್ಯಾಪ್ತಿಯ ಬ್ಯಾಡಗೊಟ್ಟ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಭಾಂಗಣದಲ್ಲಿ ಶಾಲೆಯ ಹಳೇ ವಿದ್ಯಾರ್ಥಿ ಇಬ್ರಾಹಿಂ ಮಲ್ಲಳ್ಳಿ ಅಧ್ಯಕ್ಷತೆಯಲ್ಲಿ ನಡೆದ ಹಳೇ ವಿದ್ಯಾರ್ಥಿಗಳ ಸಭೆಯಲ್ಲಿ ನೂತನ ಸಂಘವನ್ನು ರಚನೆ ಮಾಡಲಾಯಿತು.

ಸಂಘದ ಅಧ್ಯಕ್ಷರಾಗಿ ಡಿ.ಆರ್. ವೇದಕುಮಾರ್, ಉಪಾಧ್ಯಕ್ಷ ಅಬೂಬಕ್ಕರ್ ಸಿದ್ದೀಕ್, ಕಾರ್ಯದರ್ಶಿ ಗಗನ ರೈ, ಸಹ ಕಾರ್ಯದರ್ಶಿಗಳಾಗಿ ಕೆ.ವಿ. ಅಸ್ಬಕ್, ಕೆ.ವಿ. ಪ್ರದೀಪ್, ಖಜಾಂಚಿ ಕೆ.ಎ. ಇಬ್ರಾಹಿಂ, ಸಂಘಟನಾ ಕಾರ್ಯದರ್ಶಿ ಬಿ.ಎಂ. ಅಬ್ದುಲ್ ಲತೀಫ್, ಸಾಮಾಜಿಕ ಜಾಲತಾಣದ ಕಾರ್ಯದರ್ಶಿ ಕೆ.ಎಂ. ಮಹಮ್ಮದ್ ರಾಫಿ ಆಯ್ಕೆಯಾದರು. ಕಾರ್ಯಕಾರಿ ಮಂಡಳಿ ಸದಸ್ಯರಾಗಿ ಎಂ.ಎA. ಹನೀಫ್, ಕಾಂತರಾಜ್, ಜಿ.ಎ. ಅಬ್ದುಲ್ ರಹಮಾನ್, ಬಿ.ಯು. ಅಬ್ದುಲ್ ಲತೀಫ್, ಹೆಚ್.ಕೆ. ರಫೀಕ್, ಡಿ.ಎ. ಸುಲೈಮಾನ್, ಜೆ.ಎಲ್. ಜನಾರ್ಧನ್, ಬಿ.ವಿ. ಮೋಹನ್,

ಜಿ.ಎಂ. ಜಕ್ರಿಯಾ ಫಾತಿಮಾ, ಶ್ವೇತಾ, ಬಿ.ಎ. ರಮ್ಲತ್, ತೀರ್ಥ ಅವರನ್ನು ಆಯ್ಕೆ ಮಾಡಲಾಯಿತು. ಶಾಲಾರಂಭ ವಾಗಿ ೫೦ ವರ್ಷಗಳಾದ ಹಿನ್ನೆಲೆ ಸುವರ್ಣ ಮಹೋತ್ಸವವನ್ನು ವಿಜೃಂಭ ಣೆಯಿಂದ ಆಚರಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು. ಮುಖ್ಯ ಶಿಕ್ಷಕಿ ಭಾಗ್ಯಾ, ಗ್ರಾಮ ಪಂಚಾಯಿತಿ ಸದಸ್ಯರಾದ ಹನೀಫ್, ಪಾವನಾ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷೆ ಶ್ವೇತಾ ಧರ್ಮಪ್ಪ, ಸದಸ್ಯರು, ಮುಖಂಡ ಕೆ.ಹೆಚ್. ಅಬ್ದುಲ್ ಮಜೀದ್ ಹಾಗೂ ಸಂಘದ ೧೦೦ ಸದಸ್ಯರು ಹಾಜರಿದ್ದರು.