ಕೂಡಿಗೆ, ಸೆ. ೨೨: ಕೂಡಿಗೆ ರಾಮೇಶ್ವರ ಕೂಡುಮಂಗಳೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಕೂಡಿಗೆಯ ಪಟ್ಟಡ ನಯನಿಕ ನೀಲಮ್ಮ ಅವರಿಗೆ ಸಂಘದ ವತಿಯಿಂದ ಗೌರವಿಸಿ ಸನ್ಮಾನಿಸಲಾಯಿತು. ಇವರು ಮೈಸೂರಿನ ಸೈಂಟ್ ಫಿಲೋಮಿನಾ ಕಾಲೇಜಿನಲ್ಲಿ ಚಿನ್ನದ ಪದಕದೊಂದಿಗೆ, ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಅತ್ಯುನ್ನತ ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದು, ಸಂಘದ ವತಿಯಿಂದ ಗೌರವಿಸಲಾಯಿತು. ಈ ಸಂದರ್ಭ ಸಹಕಾರ ಸಂಘದ ಅಧ್ಯಕ್ಷ ಕೆ.ಕೆ. ಹೇಮಂತ್ ಕುಮಾರ್, ಉಪಾಧ್ಯಕ್ಷ ಟಿ.ಪಿ. ಹಮೀದ್, ನಿರ್ದೇಶಕರಾದ ಕೆ.ಟಿ. ಅರುಣ್ ಕುಮಾರ್, ತಮ್ಮಣೆಗೌಡ, ಕೃಷ್ಣ ಗೌಡ, ಪಾರ್ವತಮ್ಮ, ಕವಿತಾ ಬಸಪ್ಪ, ರಮೇಶ್, ನಾಗರಾಜ್, ಕುಮಾರ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಪಿ. ಮೀನಾ, ಸಂಘದ ಮೇಲ್ವಿಚಾರಕ ಜಯಪ್ರಕಾಶ್ ನಗದು ಗುಮಾಸ್ತ ಟಿ.ಪಿ. ಸೋಮಶೇಖರ್ ಹಾಜರಿದ್ದರು.