*ಗೋಣಿಕೊಪ್ಪ, ಸೆ. ೨೨: ಮಹಿಳಾ ಸಾಧಕಿ ಕಿತ್ತೂರು ರಾಣಿ ಚೆನ್ನಮ್ಮ ರಾಜ್ಯ ಪ್ರಶಸ್ತಿ ಪಡೆದ ಗೋಣಿಕೊಪ್ಪಲು ೬ನೇ ವಿಭಾಗದ ಮಲ್ಚೀರ ಯಶೋದ ಗಾಂಧಿಯವರಿಗೆ ಬೆಂಗಳೂರು ಕೊಡವ ಸಮಾಜ ಎಜ್ಯುಕೇಷನ್ ಫೌಂಡೇಷನ್ ವತಿಯಿಂದ ಸನ್ಮಾನಿಸಲಾಯಿತು. ಕೊಡವ ಸಮಾಜದ ಹರದಾಸ ಅಪ್ಪಚ್ಚಕವಿ ವೇದಿಕೆಯಲ್ಲಿ ಕೈಲ್‌ಪೊಳ್ದ್ ನಮ್ಮೆ ಆಚರಣೆಯಲ್ಲಿ ಯಶೋಧ ಅವರನ್ನು ಗೌರವಿಸಲಾಯಿತು. ಮನೆಯ ಸಮೀಪದಲ್ಲಿ ಒಂಟಿ ಮಹಿಳೆ ಹೆರಿಗೆ ಸಂದರ್ಭದಲ್ಲಿ ತುರ್ತು ಚಿಕಿತ್ಸೆ ನೀಡುವ ಮೂಲಕ ಅವಳಿ ಮಕ್ಕಳನ್ನು ಹಾಗೂ ತಾಯಿಯನ್ನು ರಕ್ಷಿಸುವ ಮೂಲಕ ಸಮಯಪ್ರಜ್ಞೆ ಮೆರೆದ ಯಶೋದ ಅವರನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಗುರುತಿಸಿ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. ಕೊಡವ ಸಮಾಜದಲ್ಲಿ ನಡೆದ ಸನ್ಮಾನ ಸಮಾರಂಭದಲ್ಲಿ ಕೊಡವ ಸಮಾಜದ ವಿದ್ಯಾನಿಧಿ ಅಧ್ಯಕ್ಷೆ ಚೊಟ್ಟೆಯಂಡ ಎ. ಆರತಿ, ಗೌರವ ಕಾರ್ಯದರ್ಶಿ, ಮಾತಂಡ ಕೆ. ಸೋಮಯ್ಯ ಹಾಗೂ ಸಮಾಜದ ಪದಾಧಿಕಾರಿಗಳು, ಮುಖ್ಯ ಅತಿಥಿಗಳು ಉಪಸ್ಥಿತರಿದ್ದರು.

À