ನಾಪೋಕ್ಲು, ಸೆ. ೨೨: ಕಾರುಗುಂದದಲ್ಲಿ ನೂತನವಾಗಿ ಸುಮಾರು ರೂ. ೨.೫೦ ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ಚೇರಂಬಾಣೆ ಗೌಡ ಸಮಾಜದ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಸಮಾಜದ ಕಟ್ಟಡಕ್ಕೆ ಧನ ಸಹಾಯ ಮಾಡಿ ಪ್ರೋತ್ಸಾಹಿಸಿ ಸಹಕರಿಸಿದವರನ್ನು ಸನ್ಮಾನಿಸಿ, ಗೌರವಿಸಲಾಯಿತು.

ಇದರಲ್ಲಿ ಪ್ರಮುಖರಾದ ಬೆಂಗಳೂರಿನ ಉದ್ಯಮಿಗಳಾದ ಕೇಕಡ ಎ. ನಂದ, ಹೃದ್ರೋಗ ಹಾಗೂ ಮಧುಮೇಹ ತಜ್ಞರಾದ ಬೆಂಗಳೂರಿನ ಡಾ. ಬೋಜಮ್ಮ ಜೋಯಪ್ಪ ಬೈತಡ್ಕ, ಬೆಂಗಳೂರಿನ ಉದ್ಯಮಿಗಳಾದ ತೇನನ ಎಸ್. ರಾಜೇಶ್, ಬೆಂಗಳೂರಿನ ಆರ್ಕಿಟೆಕ್ಟ್ ಇಂಜನಿಯರ್ ಮುಕ್ಕಾಟಿ ಎ. ಮನೋಜ್ ಕುಮಾರ್, ಕುಂದಚೇರಿ ನಿವೃತ್ತ ಇಂಜಿನಿಯರ್, ನಿರ್ದೇಶಕ ಕೆದಂಬಾಡಿ ಆರ್. ರಾಜು ಹಾಗೂ ಸಮಾಜದ ಕಟ್ಟಡ ನಿರ್ಮಾಣದಲ್ಲಿ ಮಹತ್ವದ ಪಾತ್ರ ವಹಿಸಿದ ಗೌಡ ಸಮಾಜದ ಆಡಳಿತ ಮಂಡಳಿ ಅಧ್ಯಕ್ಷ ಕೊಡಪಾಲು ಎಸ್. ಗಪ್ಪು ಗಣಪತಿ, ಉಪಾಧ್ಯಕ್ಷ ಕೇಕಡ ಎ. ದಿನೇಶ್, ಖಜಾಂಚಿ ಬೈಮನ ಬಿ. ಹರೀಶ್, ನಿರ್ದೇಶಕರಾದ ಪೊಡನೋಲನ ಟಿ. ಶ್ರೀನಿವಾಸ್, ಮುಕ್ಕಾಟಿ ಆರ್. ನಾಣಯ್ಯ, ಕೊಡಗನ ತೀರ್ಥಪ್ರಸಾದ್, ಎಡಿಕೇರಿ ಪ್ರವೀಣ, ತೊತ್ತಿಯನ ಚೇತಕ್, ಕೂರನ ಮೋಹನ್, ನೈಯ್ಯಣಿ ಜಯಪ್ರಕಾಶ್, ಕೂಡಕಂಡಿ ಕಾವೇರಮ್ಮ ಸೋಮಣ್ಣ, ನೈಯ್ಯಣಿ ಹೇಮಲತಾ, ಮುಕ್ಕಾಟಿ ವೇದಾವತಿ ಅವರುಗಳಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು.

ಈ ಸಂದರ್ಭ ಮುಖ್ಯ ಅತಿಥಿಗಳಾದ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಲಕ್ಷಿö್ಮÃನಾರಾಯಣ ಕಜೆಗದ್ದೆ, ಕೊಡಗು ಗೌಡ ಸಮಾಜಗಳ ಒಕ್ಕೂಟದ ಅಧ್ಯಕ್ಷ ಸೂರ್ತಲೆ ಆರ್. ಸೋಮಣ್ಣ ಇತರರು ಹಾಜರಿದ್ದರು.À