ಮಡಿಕೇರಿ, ಸೆ. ೨೩: ರಾಜಧಾನಿ ಬೆಂಗಳೂರಿನಲ್ಲಿರುವ ತಿಪ್ಪಸಂದ್ರ ವ್ಯಾಪ್ತಿಯ ಕೊಡವ ಸ್ನೇಹಕೂಟದ ವತಿಯಿಂದ ಕೈಲ್ ಪೊಳ್ದ್ ಸಂತೋಷ ಕೂಟ ಕಾರ್ಯಕ್ರಮ ಜರುಗಿತು. ಬೆಂಗಳೂರು ಕೊಡವ ಸಮಾಜದ ಫೀ.ಮಾ. ಕಾರ್ಯಪ್ಪ ಸಭಾಂಗಣದಲ್ಲಿ ವೈವಿಧ್ಯಮಯ ಕಾರ್ಯಕ್ರಮ ನಡೆಯಿತು.

ಅತಿಥಿಗಳಾಗಿ ಕೊಡವ ಸಮಾಜದ ಮಾಜಿ ಕಾರ್ಯದರ್ಶಿ ಚಿರಿಯಪಂಡ ಸುರೇಶ್ ನಂಜಪ್ಪ ಅವರು ಪಾಲ್ಗೊಂಡಿದ್ದರು. ಗೌರವ ಅತಿಥಿಗಳಾಗಿ ಕೊಡವ ಸಮಾಜದ ನೂತನ ಅಧ್ಯಕ್ಷ ಕರೋಟಿರ ಪೆಮ್ಮಯ್ಯ, ಉಪಾಧ್ಯಕ್ಷೆ ಪಾಂಡAಡ ಕಮಲ ಮುತ್ತಪ್ಪ ಅವರುಗಳು ಪಾಲ್ಗೊಂಡಿದ್ದರು.

ಆಯುಧ ಪೂಜೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಅತಿಥಿ ಸುರೇಶ್ ನಂಜಪ್ಪ ಅವರು ಜನಾಂಗ ಪ್ರಸ್ತುತದ ಸೂಕ್ಷö್ಮತೆ, ಅಗತ್ಯತೆಗಳ ಕುರಿತು ಮಾತನಾಡಿದರು.

ಪ್ರಸ್ತುತ ಬೆಂಗಳೂರು ಕೊಡವ ಸಮಾಜದ ಆಡಳಿತ ಮಂಡಳಿಯಲ್ಲಿ ಸ್ನೇಹಕೂಟ ಸಂಘದವರು ಚುನಾಯಿತರಾಗಿರುವ ಬಗ್ಗೆ ಶ್ಲಾಘಿಸಿ ಸನ್ಮಾನಿಸಲಾಯಿತು.

ಬೆಂಗಳೂರು ಕೊಡವ ಸಮಾಜಕ್ಕೆ ೭ ಎಕರೆ ಜಾಗ ಪಡೆಯುವಲ್ಲಿ ಸಹಕರಿಸಿದ ಬೊಳ್ಳಂಡ ರೋಷನ್, ಪಾಲೆಯಡ ರಂಜನ್, ಆಡಳಿತ ಮಂಡಳಿ ಅಧ್ಯಕ್ಷ ಮಾಚಿಮಾಡ ಕುಶಾಲಪ್ಪ, ಉಪಾಧ್ಯಕ್ಷೆ ಶರ್ಮಿಳಾ ಗಣೇಶ್, ಕಾರ್ಯದರ್ಶಿ ಚೆಂಬAಡ ರಾಜ, ಸಹಕಾರ್ಯದರ್ಶಿ ಬೊಟ್ಟೋಳಂಡ ದೀನ ದೇವಯ್ಯ, ಖಜಾಂಚಿ ಕೊಂಗAಡ ಸಂಕೇತ್ ಚಂಗಪ್ಪ, ಸಂಘಟನಾ ಕಾರ್ಯದರ್ಶಿ ಪಾಲೆಯಡ ರಂಜನ್ ಮುತ್ತಪ್ಪ, ಕ್ರೀಡಾ ಕಾರ್ಯದರ್ಶಿ ಕುಯ್ಮಂಡ ಮಮತ ರಾಜೇಶ್, ಸಾಂಸ್ಕೃತಿಕ ಕಾರ್ಯದರ್ಶಿ ಚೇಂದಿರ ಇಂದು ಅಪ್ಪಣ್ಣ ಮತ್ತಿತರರು ಹಾಜರಿದ್ದರು. ಮಮತ ಮೇದಪ್ಪ ಪ್ರಾರ್ಥಿಸಿ, ಇಂದು ಅಪ್ಪಣ್ಣ, ಬೇರೆರ ಮಿಥುನ್ ಬೆಳ್ಳಿಯಪ್ಪ ನಿರೂಪಿಸಿದರು. ಉಪಾಧ್ಯಕ್ಷೆ ತಾತಿರ ಶರ್ಮಿಳಾ ಗಣೇಶ್ ವಂದಿಸಿದರು. ಚೆಕ್ಕೇರ ಪಂಚಮ್ ಸೇರಿದಂತೆ ಹಲವರಿಂದ ಹಾಡುಗಾರಿಕೆ, ಸಾಂಸ್ಕೃತಿಕ ಕಾರ್ಯಕ್ರಮ, ವಾಲಗತಾಟ್ ನೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.