ಮಡಿಕೇರಿ, ಸೆ. ೨೨: ಕೊಡಗು ಕಾಫಿ ಬೆಳೆಗಾರರ ಸಹಕಾರ ಸಂಘವು ಕಾಫಿ ವ್ಯಾಪಾರಕ್ಕೆ ಒತ್ತು ನೀಡಬೇಕು ಎಂದು ಸಂಘದ ಸದಸ್ಯರು ಆಗ್ರಹಿಸಿದ ಘಟನೆ ಕಾಫಿ ಬೆಳೆಗಾರರ ಸಹಕಾರ ಸಂಘ ಮಹಾಸಭೆಯಲ್ಲಿ ನಡೆಯಿತು.

ಸಂಘದ ಅಧ್ಯಕ್ಷ ಎಂ.ಬಿ. ದೇವಯ್ಯ ಅಧ್ಯಕ್ಷತೆಯಲ್ಲಿ ಕೊಡವ ಸಮಾಜ ಸಭಾಂಗಣದಲ್ಲಿ ಗುರುವಾರ ನಡೆದ ಮಹಾಸಭೆಯಲ್ಲಿ ಮಾತನಾಡಿದ ದೇವಯ್ಯ ಅವರು ಕಾಫಿ ವ್ಯಾಪಾರಕ್ಕೆ ಸಂಬAಧಿಸಿದAತೆ ಸೂಕ್ತ ಸ್ಪಂದನ ಸಿಗದ ಕಾರಣ ಸದ್ಯದ ಮಟ್ಟಿಗೆ ಕಾಫಿ ವ್ಯಾಪಾರವನ್ನು ನಿಲ್ಲಿಸಲಾಗಿದೆ ಎಂದು ಹೇಳಿದರು.

ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಸದಸ್ಯರುಗಳು ಕಾಫಿ ಬೆಳೆಗಾರರ ಸಹಕಾರ ಸಂಘವು ಕಾಫಿ ವ್ಯಾಪಾರಕ್ಕೆ ಒತ್ತು ನೀಡಬೇಕು. ಹಾಗಾದಾಗ ಮಾತ್ರ ಆರ್ಥಿಕವಾಗಿ ಬೆಳವಣಿಗೆ ಸಾಧ್ಯ ಎಂದು ಹೇಳಿದರಲ್ಲದೆ. ಕಾಫಿ ವ್ಯಾಪಾರಕ್ಕೆ ಆದ್ಯತೆ ನೀಡಬೇಕೆಂದು ಒತ್ತಾಯಿಸಿದರು. ಪ್ರಸುತ್ತ ಸಾಲಿನಲ್ಲಿ ಸಂಘ ರೂ.೧೪.೭೧ ಲಕ್ಷ ಲಾಭಾಂಶ ಗಳಿಸಿದೆಯಾದರೂ ೧೩.೮೧ ಕೊಟಿ ಕ್ರೋಢೀಕೃತ ನಷ್ಟದಲ್ಲಿರುವುದರಿಂದ ಸಂಘದ ಸದಸ್ಯರಿಗೆ ಡಿವಿಡೆಂಡ್ ಸೇರಿದಂತೆ ಯಾವುದೇ ಸವಲತ್ತುಗಳನ್ನು ಸಂಘದಿAದ ನೀಡಲು ಸಾಧ್ಯವಾಗುತ್ತಿಲ್ಲ.

ಈ ನಡುವೆ ಸಂಘದ ಕಾರ್ಯಚಟುವಟಿಕೆಗಳಿಗೆ ಬೆಳೆಗಾರರಿಂದ ನಿರೀಕ್ಷಿತ ಬೆಂಬಲ ಸಿಗುತ್ತಿಲ್ಲ ಎಂದು ದೇವಯ್ಯ ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಸದಸ್ಯ ನಾಮೇರ ದೇವಯ್ಯ ಅವರು ಕಾಫಿ ಸಂಗ್ರಹ ಕೇಂದ್ರವನ್ನು ಜಿಲ್ಲೆಯ ವಿವಿಧ ಭಾಗಗಳಲ್ಲಿ ತೆರೆಯುವ ಮೂಲಕ ಕಾಫಿ ಖರೀದಿಗೆ ಮುಂದಾಗುವAತೆ ಸಲಹೆ ನೀಡಲಾಗಿತ್ತು. ಆದರೆ ಅದು ಕಾರ್ಯಗತಗೊಂಡಿಲ್ಲ ಎಂದು ಅಸಮಾಧಾನ ವ್ಯಕ್ತ ಪಡಿಸಿದರು.

ಇದಕ್ಕೆ ಉತ್ತರಿಸಿದ ಎಂ.ಬಿ. ದೇವಯ್ಯ ಮಡಿಕೇರಿಯಲ್ಲಿ ಕಾಫಿ ಸಂಗ್ರಹಣಾ ಕೇಂದ್ರ ತೆರೆಯಲಾಗಿದ್ದರೂ ಸೂಕ್ತ ಸ್ಪಂದನ ಸಿಗುತ್ತಿಲ್ಲ ಎಂದು ಹೇಳಿದರು. ಸದಸ್ಯ ನೆಲ್ಲಮಕ್ಕಡ ಶಂಭು ಸೋಮಯ್ಯ ಮಾತನಾಡಿ, ಕಾಫಿ ಬೆಳೆಗಾರರ ಸಹಕಾರ ಸಂಘವು ನಷ್ಟದಲ್ಲಿದೆ ಎಂದು ಆಡಳಿತ ಮಂಡಳಿ ಮೌನÀ ವಹಿಸಿದರೆ ಯಾವುದೇ ಪ್ರಯೋಜನವಿಲ್ಲ. ಕಾಫಿ ಬೆಳೆಗಾರರ ಬಳಿಗೆ ತೆರಳಿ ಅವರುಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಂಘವನ್ನು ಪ್ರಗತಿಯತ್ತ ಕೊಂಡೊಯ್ಯುವಲ್ಲಿ ಶ್ರಮಿಸಬೇಕು. ಪದಾಧಿಕಾರಿಗಳು ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಬೇಕು ಎಂದು ಹೇಳಿದರು.

ಇದಕ್ಕೆ ಪ್ರತಿಕ್ರಿಯಿಸಿದ ನಿರ್ದೇಶಕ ನಾಪಂಡ ರವಿ ಕಾಳಪ್ಪ ಜಿಲ್ಲೆಯ ವಿವಿಧೆಡೆ ಕಾಫಿ ಖರೀದಿ ಕೇಂದ್ರ ಸ್ಥಾಪಿಸಲು ಸಂಘದಲ್ಲಿ ಆರ್ಥಿಕ ಕೊರತೆ ಇದೆ. ಆದರೂ ಸಂಘವನ್ನು ಪ್ರಗತಿಯತ್ತ ಕೊಂಡೊಯ್ಯುವ ನಿಟ್ಟಿನಲ್ಲಿ ಪ್ರಯತ್ನಿಸಲಾಗುತ್ತಿದ್ದು ಅದರಲ್ಲಿ ಸಫಲತೆ ಕಾಣಲು ಸಾಧ್ಯವಾಗುತ್ತಿಲ್ಲ. ಸದಸ್ಯರ ಸಲಹೆಗಳನ್ನು ಪರಿಗಣಿಸಿ ಮುಂದಡಿ ಇಡಲಾಗುವುದು ಎಂದು ಹೇಳಿದರು. ಸಭೆಯಲ್ಲಿ ಸಂಘದ ಉಪಾಧ್ಯಕ್ಷ ಎಸ್.ಪಿ. ಪೊನ್ನಪ್ಪ ಸೇರಿದಂತೆ ನಿರ್ದೇಶಕರುಗಳು, ಅಧಿಕಾರಿಗಳು, ಸದಸ್ಯರು ಹಾಜರಿದ್ದರು.