ಆಲೂರು-ಸಿದ್ದಾಪುರ, ಸೆ. ೨೨: ಧರ್ಮಸ್ಥಳ ಕ್ಷೇತ್ರ ದೇವಾಲಯ ಸೇರಿದಂತೆ ಶಾಲೆ, ಅಂಗನವಾಡಿ, ಸಮುದಾಯ ಭವನ ಇನ್ನಿತರ ಕ್ಷೇತ್ರಗಳಿಗೆ ಧನ ಸಹಾಯ ಮಾಡುವ ಮೂಲಕ ಸಮಾಜ ಸೇವೆಯಲ್ಲಿ ಅನೇಕ ವರ್ಷಗಳಿಂದ ತೊಡಗಿದೆ ಎಂದು ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದ ಕೊಡಗು ಜಿಲ್ಲಾ ನಿರ್ದೇಶಕಿ ಲೀಲಾವತಿ ಹೇಳಿದರು.

ಇವರು ಮಾಲಂಬಿ ಗ್ರಾಮದಲ್ಲಿ ನಿರ್ಮಾಣ ಮಾಡುತ್ತಿರುವ ಕನ್ನಂಬಾಡಿ ಅಮ್ಮನವರ ದೇವಾಲಯಕ್ಕೆ ಶ್ರೀ ಧರ್ಮಸ್ಥಳ ಮಂಜುನಾಥ ಕ್ಷೇತ್ರದಿಂದ ೧ ಲಕ್ಷದ ೫೦ ಸಾವಿರ ರೂಪಾಯಿಗಳ ಧನಸಹಾಯವನ್ನು ವಿತರಿಸಿ ಮಾತನಾಡಿದರು. ಇಂದು ಯುವಕರು ಸಹ ಇಂತಹ ದೇವಾಲಯ ನಿರ್ಮಾಣದ ಬಗ್ಗೆ ಹೆಚ್ಚು ಆಸಕ್ತಿ ವಹಿಸುತ್ತಿರುವುದು ಒಳ್ಳೆಯ ಬೆಳವಣಿಗೆ. ಗ್ರಾಮಗಳಲ್ಲಿ ದೇವಾಲಯ ಹಾಗೂ ಶಾಲೆಗಳಿರಬೇಕು. ನೆಮ್ಮದಿ ಶಾಂತಿಗಾಗಿ ದೇವಾಲಯಕ್ಕೆ ಹೋದರೆ ವಿದ್ಯೆಗೆ ಶಾಲೆಗೆ ಹೋಗುವುದರಿಂದ ಮನಶಾಂತಿ ಸಿಗುತ್ತದೆ ಎಂದರು.

ಈ ಸಂದರ್ಭ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸೋಮವಾರ ಪೇಟೆ ವಲಯ ಯೋಜನಾಧಿಕಾರಿ ರೋಹಿತ್, ಹೆಬ್ಬಾಲೆ ವಲಯ ಮೆಲ್ವಿಚಾರಕ ಲೋಹಿತ್, ಧರ್ಮಸ್ಥಳ ಗ್ರಾಮಾಭಿವೃದ್ಧಿ ಒಕ್ಕೂಟದ ಅಧ್ಯಕ್ಷೆ ದಿವ್ಯಲತ, ಕನ್ನಂಬಾಡಿ ಅಮ್ಮ ದೇವಾಲಯ ಸಮಿತಿ ಅದ್ಯಕ್ಷ ವಿರುಪಾಕ್ಷ, ಆಲೂರು ಸಿದ್ದಾಪುರ ಗ್ರಾಮ ಪಂಚಾಯಿತಿ ಸದಸ್ಯೆ ಯಮುನ, ಜಾನಕ್ಕಿ ಗಂಗಾಧರ್, ಮಾಚಯ್ಯ, ಮಾದಪ್ಪ, ಸುರೇಶ್, ಮಾಲಂಬಿ ಗ್ರಾಮ ಸಮಿತಿ ಅಧ್ಯಕ್ಷ ವೆಂಕಟೇಶ್, ಸುರೇಶ್ ಮುಂತಾದವರಿದ್ದರು.